ನವದೆಹಲಿ:ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ ಯಾರು ಬೀದಿಗೆ ಇಳಿದಿದ್ದರೋ ಈಗ ಅವರೇ ನನ್ನ ಮಗಳ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಆಟವಾಡುತ್ತಿದ್ದಾರೆ. ಅದೂ ರಾಜಕೀಯ ಲಾಭಕ್ಕಾಗಿ ಎಂದು ಕಿಡಿ ಕಾರಿದ್ದಾರೆ.
ಜ.22ರಂದು ಬೆಳಗ್ಗೆ 7ಗಂಟೆಗೆ ಪ್ರಕರಣದ ಅಪರಾಧಿಗಳನ್ನು ನೇಣಿಗೇರಿಸಬೇಕು ಎಂದು ದೆಹಲಿ ಪಟಿಯಾಲ ಕೋರ್ಟ್​ ಆದೇಶ ನೀಡಿತ್ತು. ಆದರೆ ಅಪರಾಧಿಗಳಲ್ಲಿ ಓರ್ವನಾದ ಮುಕೇಶ್​ ಸಿಂಗ್​ ರಾಷ್ಟ್ರಪತಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದಾನೆ. ಹಾಗೇ ಮರಣದಂಡನೆ ಆದೇಶವನ್ನು ಮರುಪರಿಶೀಲನೆ ಮಾಡುವಂತೆ ದೆಹಲಿ ಕೋರ್ಟ್​ಗೂ ಅರ್ಜಿ ಹಾಕಿದ್ದಾನೆ.
ರಾಷ್ಟ್ರಪತಿಗಳು ದಯಾ ಅರ್ಜಿಯನ್ನು ಇನ್ನೂ ತಿರಸ್ಕರಿಸಿಲ್ಲ. ಅರ್ಜಿ ತಿರಸ್ಕರಿಸಿದರೂ 14 ದಿನಗಳ ಬಳಿಕವಷ್ಟೇ ಅಪರಾಧಿಗಳನ್ನು ಗಲ್ಲಿಗೇರಿಸಬೇಕಾಗುತ್ತದೆ. ನಿಯಮಗಳು ಹೀಗಿರುವಾಗ ಅಪರಾಧಿಗಳನ್ನು ಜ.22ಕ್ಕೆ ಗಲ್ಲಿಗೇರಿಸಲಾಗದು.
ನಿಯಮಗಳು ಏನೇ ಇರಲಿ. ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ದಿನವನ್ನು ಕಾರಣಾಂತರಗಳಿಂದ ಮುಂದೂಡುತ್ತಿರುವುದಕ್ಕೆ ನಿರ್ಭಯಾ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)
#WATCHAsha Devi, mother of 2012 Delhi gang-rape victim: Till now, I never talked about politics, but now I want to say that those people who held protests on streets in 2012, today the same people are only playing with my daughter's death for political gains.pic.twitter.com/FvaC89TwKI
— ANI (@ANI)January 17, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 4 =
Remember me
