ನವದೆಹಲಿ:ದಯಾ ಅರ್ಜಿ ಸಲ್ಲಿಸಲು ತಿಹಾರ್​ ಜೈಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ನಿರ್ಭಯಾ ಪ್ರಕರಣ ಅಪರಾಧಿಗಳ ಪರ ವಕೀಲ ಮತ್ತೆ ಕೋರ್ಟ್​ ಮೆಟ್ಟಿಲು ಹತ್ತಿದ್ದಾರೆ.
ಅಪರಾಧಿಗಳ ಪರ ವಕೀಲ ಎ.ಪಿ. ಸಿಂಗ್​ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯು ಪಟಿಯಾಲ ಹೌಸ್​ ನ್ಯಾಯಾಲಯದಲ್ಲಿ ಶನಿವಾರ (ಜ.25ರಂದು) ವಿಚಾರಣೆಗೆ ಬರಲಿದೆ.
ಅಪರಾಧಿಗಳಾದ ಪವನ್​ ಮತ್ತು ಅಕ್ಷಯ್​ ಪರವಾಗಿ ಕ್ಯುರೇಟಿವ್​ ಮತ್ತು ದಯಾ ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ನೀಡಲು ತಿಹಾರ್​ ಜೈಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ವಕೀಲ ಎ.ಪಿ. ಸಿಂಗ್​ ಆರೋಪಿಸಿದ್ದಾರೆ. ಈ ಮೊದಲು ಇನ್ನುಳಿದ ಇಬ್ಬರು ಅಫರಾಧಿಗಳಾದ ವಿನಯ್​ ಕುಮಾರ್​ ಶರ್ಮಾ ಮತ್ತು ಮುಕೇಶ್​ ಸಿಂಗ್​ ಅವರ ಕ್ಯುರೇಟಿವ್​ ಅರ್ಜಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿತ್ತು.
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಫೆಬ್ರವರಿ 1 ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರವು ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಏಳು ದಿನಗಳ ಗಡುವು ನಿಗದಿಪಡಿಸಲು ಬುಧವಾರ ಸುಪ್ರೀಂಕೋರ್ಟ್​ನ್ನು ಕೇಳಿಕೊಂಡಿತ್ತು.
ಈ ಮಧ್ಯೆ ಗೃಹ ಸಚಿವಾಲಯ ಸುಪ್ರೀಂಗೆ ಅರ್ಜಿ ಸಲ್ಲಿಸಿ, ಅಪರಾಧಿಗಳ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಿಂದಾಗಿ ಮರಣದಂಡನೆ ಮುಂದೂಡಲಾಗುತ್ತಿದೆ. ಅವರು ದಯಾ ಅರ್ಜಿ ಸಲ್ಲಿಸಬೇಕು ಎಂದಾದಲ್ಲಿ ಮರಣದಂಡನೆ ನಿಗದಿ ಪಡಿಸಿದ ಏಳು ದಿನಗಳಲ್ಲಿ ಸಲ್ಲಿಸಲು ಸೂಚಿಸಬೇಕು ಎಂದು ಕೇಳಿಕೊಂಡಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
