ನವದೆಹಲಿ:ನಿರ್ಭಯಾ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ನಾಲ್ವರು ಪ್ರಮುಖ ಅಪರಾಧಿಗಳಲ್ಲಿ ಇಬ್ಬರು ಅಪರಾಧಿಗಳು ಸಲ್ಲಿಸಿದ್ದ ಕ್ಯುರೇಟಿವ್​ ಅರ್ಜಿಯನ್ನು ಸುಪ್ರೀಂಕೋರ್ಟ್​ ಮಂಗಳವಾರ ಮಧ್ಯಾಹ್ನ ವಜಾಗೊಳಿಸಿದೆ.
ಅಪರಾಧಿಗಳಾದ ವಿನಯ್​ ಶರ್ಮಾ(26) ಮತ್ತು ಮುಕೇಶ್​ ಕುಮಾರ್​(32) ಎಂಬುವರು ಕ್ಯುರೇಟಿವ್​ ಅರ್ಜಿಯನ್ನು ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಪಂಚ ಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.
ಪಂಚ ಸದಸ್ಯ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎನ್​.ವಿ.ರಮಣ, ಅರುಣ್​ ಮಿಶ್ರಾ, ಆರ್​.ಅಫ್​.ನಾರಿಮನ್​, ಆರ್​.ಬಾನುಮತಿ ಮತ್ತು ಅಶೋಕ್​ ಭೂಷಣ್ ಇದ್ದರು.​ 2017ರಲ್ಲಿ ನಿರ್ಭಯಾ ಗ್ಯಾಂಗ್​ರೇಪ್​ ಮತ್ತು ಕೊಲೆ ಪ್ರಕರಣವನ್ನು ಅಪರಾಧವನ್ನು ಎತ್ತಿಹಿಡಿದು, ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಖಚಿತಪಡಿಸಿದ ಸುಪ್ರೀಂಕೋರ್ಟ್​ ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಾನುಮತಿ ಮತ್ತು ಅಶೋಕ್​ ಭೂಷಣ್ ಕೂಡ ಭಾಗವಾಗಿದ್ದರು.
ಅಪರಾಧಿಗಳಾದ ವಿನಯ್​ ಶರ್ಮಾ(26) ಮತ್ತು ಮುಕೇಶ್​ ಕುಮಾರ್​(32) ಅವರನ್ನು ಬಿಟ್ಟರೆ, ಇನ್ನಿಬ್ಬರು ಅಪರಾಧಿಗಳಾದ ಅಕ್ಷಯ್​ ಕುಮಾರ್​ ಸಿಂಗ್​(31) ಮತ್ತು ಪವನ್​ ಗುಪ್ತ(25) ಈವರೆಗೂ ಕಾನೂನಿನ ಅಡಿಯಲ್ಲಿ ಇರುವ ಕೊನೆಯ ಅವಕಾಶವಾದ ಕ್ಯುರೇಟಿವ್​ ಅರ್ಜಿಯನ್ನು ಸಲ್ಲಿಸಿಲ್ಲ.
ನಾಲ್ವರು ಅಪರಾಧಿಗಳು ಈ ಹಿಂದೆ ಮರುಪರಿಶೀಲನಾ ಅರ್ಜಿಯನ್ನು ದಾಖಲಿಸಿದ್ದರು. ಆದರೆ, ಸುಪ್ರೀಂಕೋರ್ಟ್​ ಅರ್ಜಿಯನ್ನು ತಿರಸ್ಕರಿಸಿತ್ತು. ಸದ್ಯ ಕಾನೂನಿ ಅಡಿಯಲ್ಲಿ ಇರುವ ಕೊನೆಯ ಅವಕಾಶವಾದ ಕ್ಯುರೇಟಿವ್​ ಅರ್ಜಿಯೂ ಕೂಡ ತಿರಸ್ಕೃತವಾಗಿದ್ದು, ಆರೋಪಿಗಳಿಗೆ ಉಳಿದಿರುವ ಇನ್ನೊಂದು ಮಾರ್ಗವೆಂದರೆ ಅದು ರಾಷ್ಟ್ರಪತಿಗಳ ಕ್ಷಮಾಧಾನವಾಗಿದೆ. ಆದರೆ ಈ ಪ್ರಕರಣದಲ್ಲಿ ಅದು ದೊರಕುವ ಸಾಧ್ಯತೆಯೇ ಇಲ್ಲ. ಏಕೆಂದರೆ ಹೈದರಾಬಾದ್​ ಪಶುವೈದ್ಯಾಧಿಕಾರಿ ಗ್ಯಾಂಗ್​ರೇಪ್​ ಮತ್ತು ಕೊಲೆ ಪ್ರಕರಣದ ವೇಳೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಅತ್ಯಾಚಾರಿಗಳಿಗೆ ಇನ್ನು ಮುಂದೆ ಕ್ಷಮೆಯೇ ಇಲ್ಲವೆಂದಿದ್ದರು.
ಮರಣದಂಡನೆಗೆ ದೆಹಲಿ ನ್ಯಾಯಾಯಲಯ ಡೆತ್​ ವಾರೆಂಟ್​ ಹೊರಡಿಸಿದ ಬೆನ್ನಲ್ಲೇ ಇಬ್ಬರು ಅಪರಾಧಿಗಳು ಸುಪ್ರೀಂಕೋರ್ಟ್​ನಲ್ಲಿ ಕ್ಯುರೇಟಿವ್ ಅರ್ಜಿ ದಾಖಲಿಸಿದ್ದರು. ಆದರೆ, ಅರ್ಜಿ ತಿರಸ್ಕಾರವಾಗಿದ್ದು, ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಅಪರಾಧಿಗಳನ್ನು ತಿಹಾರ್​ ಜೈಲಿನಲ್ಲಿ ನೇಣಿಗೇರಿಸಲಾಗುತ್ತದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
