ಬೆಂಗಳೂರು:ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕಾಂಗ್ರೆಸ್​ನ ಜೈರಾಂ ರಮೇಶ್ ಮರು ಆಯ್ಕೆಯಾಗುವ ಸಾದ್ಯತೆಗಳಿವೆ. ರಾಜ್ಯದಿಂದ ನಾಲ್ಕು ಸ್ಥಾನಗಳು ಜೂ.30ಕ್ಕೆ ಖಾಲಿಯಾಗಲಿವೆ. ನಾಲ್ಕರ ಪೈಕಿ ಆಸ್ಕರ್ ಫರ್ನಾಂಡೀಸ್ ನಿಧನರಾಗಿರುವುದರಿಂದ ಆ ಸ್ಥಾನ ಖಾಲಿಯಾಗಿದೆ. ಉಳಿದಂತೆ ನಿರ್ಮಲಾ ಸೀತಾರಾಮನ್, ಕೆ.ಸಿ. ರಾಮಮೂರ್ತಿ ಹಾಗೂ ಜೈರಾಂ ರಮೇಶ್ ನಿವೃತ್ತರಾಗುತ್ತಿದ್ದಾರೆ. ವಿಧಾನಸಭೆಯ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ಎರಡು ಸ್ಥಾನ, ಕಾಂಗ್ರೆಸ್ ಒಂದು ಸ್ಥಾನ ಸುಲಭವಾಗಿ ಗೆಲ್ಲಬಹುದು. ಜೆಡಿಎಸ್​ಗೆ ಒಂದು ಸ್ಥಾನ ಗೆಲ್ಲುವಷ್ಟು ಮತಗಳಿಲ್ಲ. ಬಿಜೆಪಿ ಅಥವಾ ಕಾಂಗ್ರೆಸ್​ನಲ್ಲಿ ಉಳಿಯುವ ಹೆಚ್ಚುವರಿ ಮತಗಳನ್ನು ಪಡೆದರೆ ಮಾತ್ರ ಜೆಡಿಎಸ್ ಅಭ್ಯರ್ಥಿ ಗೆಲ್ಲಬಹುದು. ರಾಜ್ಯ ವಿಧಾನಸಭೆಯ ಸಂಖ್ಯಾಬಲ ಆಧಾರದಲ್ಲಿ ಒಬ್ಬರು ಗೆಲ್ಲುವುದಕ್ಕೆ 46 ಮತಗಳ ಅಗತ್ಯವಿದೆ. ಬಿಜೆಪಿಯಲ್ಲಿ ಎರಡು ಸ್ಥಾನಗಳನ್ನು ಗೆದ್ದ ನಂತರ 30 ಮತ ಉಳಿಯುತ್ತವೆ. ಕಾಂಗ್ರೆಸ್​ನಲ್ಲಿ 25 ಹೆಚ್ಚುವರಿ ಮತಗಳಿವೆ. ಜೆಡಿಎಸ್​ನಲ್ಲಿ ಒಂದು ಸ್ಥಾನಕ್ಕೆ 14 ಮತಗಳ ಕೊರತೆ ಇದೆ. ಬಿಜೆಪಿ ಮೂರನೇ ಸ್ಥಾನ ಗೆಲ್ಲಲು 16 ಮತಗಳು, ಕಾಂಗ್ರೆಸ್ ಎರಡನೇ ಸ್ಥಾನ ಗೆಲ್ಲಲು 21 ಮತ ಬೇಕಾಗುತ್ತವೆ. ರಾಜ್ಯಸಭೆ ಚುನಾವಣೆಯಲ್ಲಿ ಮತಪತ್ರವನ್ನು ಪಕ್ಷದ ಏಜೆಂಟರಿಗೆ ತೋರಿಸಿ ಹಾಕಬೇಕಾಗುತ್ತದೆ. ಆದ್ದರಿಂದ ಮತಗಳು ಚದುರುವ ಸಾಧ್ಯತೆಗಳಿಲ್ಲ. ಪಕ್ಷದಲ್ಲಿಯೇ ನಿರ್ಧಾರ ಮಾಡಬೇಕಾಗುತ್ತದೆ. ಬಿಜೆಪಿ ಜತೆಗೆ ಜೆಡಿಎಸ್ ಮಾತುಕತೆ ನಡೆಸಿ ಮೂರನೇ ಅಭ್ಯರ್ಥಿ ಹಾಕದಂತೆ ನೋಡಿಕೊಳ್ಳುವ ಸಾಧ್ಯತೆಗಳು ನಿಚ್ಚಲವಾಗಿದೆ.
ಕೋರ್ಟ್​ನಲ್ಲಿ ರಮೇಶ ಜಾರಕಿಹೊಳಿ ಕೇಸ್ ಕ್ಲಿಯರ್ ಆಗಿದೆ. ಹಾಗಾಗಿ ಅವರು ಸಚಿವರಾಗಲು ಯಾವುದೇ ಅಡೆತಡೆ ಇಲ್ಲ. ಮಾ.25ರ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ತೆರಳುವ ಸಾಧ್ಯತೆಯಿದ್ದು, ಏಪ್ರಿಲ್ ಮೊದಲ ವಾರದಲ್ಲಿಯೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ.
|ಬಾಲಚಂದ್ರ ಜಾರಕಿಹೊಳಿಶಾಸಕ
ರಾಜ್ಯ ಅಧಿವೇಶನ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ ಆಗಬಹುದು. ಮುಖ್ಯಮಂತ್ರಿಗಳು ಹೈಕಮಾಂಡ್ ಜತೆ ಚರ್ಚೆ ಮಾಡಿ ಯಾವಾಗ ಸಂಪುಟ ವಿಸ್ತರಣೆ ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಬಿ.ವೈ.ವಿಜಯೇಂದ್ರಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಸಮಾಲೋಚನೆ ನಡೆಸಿ ನಿರ್ಧಾರ ಮಾಡುತ್ತದೆ.
|ಡಾ.ಸಿ.ಎನ್.ಅಶ್ವತ್ಥನಾರಾಯಣಸಚಿವ
ಜೈರಾಮ್ ಮರು ಆಯ್ಕೆಗೆ ಆಕ್ಷೇಪ?:ನಿರ್ಮಲಾ ಸೀತಾರಾಮನ್ ಅವರನ್ನೇ ಬಿಜೆಪಿ ಮತ್ತೊಂದು ಅವಧಿಗೆ ಮುಂದುವರಿಸಲಿದೆ. ಆದರೆ 2ನೇ ಸ್ಥಾನಕ್ಕೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರೊಬ್ಬರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ. ಕಾಂಗ್ರೆಸ್ ಜೈರಾಮ್ ರಮೇಶ್ ಅವರನ್ನೇ ಇನ್ನೊಂದು ಅವಧಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ. ಇದು ಸ್ಥಳೀಯವಾಗಿ ಸಾಕಷ್ಟು ಟೀಕೆಗೆ ಕಾರಣವಾಗಿದೆ. ರಾಜ್ಯದಲ್ಲಿಯೇ ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ನೀಡಬೇಕೆಂಬ ಬೇಡಿಕೆಯೂ ಇದೆ. ಜೆಡಿಎಸ್ ಯಾರನ್ನು ಅಭ್ಯರ್ಥಿಯನ್ನಾಗಿಸಲಿದೆ ಎಂಬುದು ಚುನಾವಣೆ ಹತ್ತಿರ ಬಂದ ನಂತರವಷ್ಟೇ ತಿಳಿಯಲಿದೆ. ಪರಿಸ್ಥಿತಿ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಲಿದೆ.
ಚಂಡಮಾರುತ ಪರಿಣಾಮ ರಾಜ್ಯದಲ್ಲಿ ಮಳೆ; ಎಷ್ಟು ದಿನ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
