ಬೆಂಗಳೂರು:ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಇದೀಗ ಬಿಡುಗಡೆ ಮಾಡಿದ್ದು, ಈ ಸಲ ಕನ್ನಡ ಚಿತ್ರರಂಗಕ್ಕೂ ಒಂದು ಸಂತಸ ಸಂಗತಿ ಬಂದಿದೆ.
ಬಿಜೆಪಿ ಹೊರಡಿಸಿರುವ ಪಟ್ಟಿ ಒಂದು ಮಟ್ಟಿಗೆ ನಿರೀಕ್ಷಿತ ಎನಿಸಿಕೊಂಡಿದ್ದರೆ, ಮತ್ತೊಂದು ರೀತಿಯಲ್ಲಿ ಅಚ್ಚರಿ ಎಂಬಂತೆಯೂ ಆಗಿದೆ. ಏಕೆಂದರೆ ಬಹುತೇಕರ ನಿರೀಕ್ಷೆಯಂತೆ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್​ ಹೆಸರು ಒಂದಾಗಿದ್ದರೆ, ಇನ್ನು ಅಚ್ಚರಿ ಎಂಬ ರೀತಿಯಲ್ಲಿ ನಟ ನವರಸ ನಾಯಕ ಜಗ್ಗೇಶ್ ಹೆಸರನ್ನೂ ಸೂಚಿಸಲಾಗಿದೆ.
ಇನ್ನು ನಿರ್ಮಲಾ ಸೀತಾರಾಮನ್ ಆಯ್ಕೆಯನ್ನು ಊಹಿಸಿದ್ದ ಕಾಂಗ್ರೆಸ್, ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್ ಕಾಣಿಕೆ ಏನು ಎಂದು ಈಗಾಗಲೇ ಕಾಂಗ್ರೆಸ್​​ ನಾಯಕರು ಪ್ರಶ್ನಿಸಿದ್ದು, ವೈರಲ್ ಆಗಿತ್ತು. ಆದರೆ ಅದ್ಯಾವುದಕ್ಕೂ ಕೇರೇ ಎನ್ನದ ಬಿಜೆಪಿ ನಿರ್ಮಲಾ ಸೀತಾರಾಮನ್​ ಅವರನ್ನು ಅಭ್ಯರ್ಥಿಗಳಲ್ಲಿ ಒಬ್ಬರನ್ನಾಗಿ ಆಯ್ಕೆ ಮಾಡಿದೆ. ಸದ್ಯಕ್ಕೆ ಇಬ್ಬರ ಹೆಸರು ಮಾತ್ರ ಘೋಷಣೆ ಮಾಡಿರುವ ಬಿಜೆಪಿ, ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಬಹುತೇಕ ಅನುಮಾನ ಎನ್ನಲಾಗಿದೆ.
ಆಧಾರ್ ಕಾರ್ಡ್​​ ಫೋಟೋ ಹಂಚಿಕೊಳ್ಳಬಾರದಂತೆ, ನಿಜನಾ?: ಆಧಾರ್​ ಪ್ರಾಧಿಕಾರದಿಂದ ಹೊರಬಿತ್ತು ಮತ್ತೊಂದು ಪತ್ರಿಕಾ ಹೇಳಿಕೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 14 =
Remember me
