ಹೊಸದಿಲ್ಲಿ:ಇಂದು ಹೊಸ ಸಂಸತ್ತಿನಲ್ಲಿ ನಡೆದ ಮಧ್ಯಂತರ ಬಜೆಟ್ 2024 ಅನ್ನು ಅತ್ಯಂತ ಕಡಿಮೆ ಅವಧಿಯೊಳಗೆ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಕೇವಲ 58 ನಿಮಿಷಗಳಲ್ಲಿ ಈ ಬಾರಿಯ ಬಜೆಟ್​ ಮಂಡಿಸಿದ್ದಾರೆ. ಈ ಮೂಲಕ ಬಜೆಟ್​ ಭಾಷಣದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ ಹಣಕಾಸು ಸಚಿವೆ, ಈ ಹಿಂದಿನ ವರ್ಷಗಳಲ್ಲಿ ಎಷ್ಟು ಅವಧಿಯಲ್ಲಿ ಬಜೆಟ್​ ಮಂಡಿಸಿದ್ದಾರೆ ಎಂಬುದರ ಕಂಪ್ಲೀಟ್​ ವಿವರ ಇಲ್ಲಿದೆ ಗಮನಿಸಿ.
ಇದನ್ನೂ ಓದಿ:ಕೆರಗೋಡಿನಲ್ಲಿ ಲಾಠಿಚಾರ್ಜ್ ಪ್ರಕರಣ: ಸಿಎಂಗೆ ರಾಷ್ಟ್ರಧ್ವಜದ ಪಾಠ ಮಾಡಿದ ಪಿಟಿ ಮಾಸ್ಟರ್
ಗುರುವಾರ ಸಂಸತ್ತಿನಲ್ಲಿ 2024-25ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ ಹಣಕಾಸು ಸಚಿವರು 58 ನಿಮಿಷಗಳ ಭಾಷಣ ಮುಗಿಸಿ ಎಲ್ಲರಿಗೂ ಶಾಕ್ ನೀಡಿದರು. ಬೆಳಗ್ಗೆ 11 ಗಂಟೆಗೆ ತಮ್ಮ ಭಾಷಣ ಪ್ರಾರಂಭಿಸಿದ ಸಚಿವರು 11:58ಕ್ಕೆ ಸರಿಯಾಗಿ ಅಂತ್ಯಗೊಳಿಸಿದರು. ಈ ಮೂಲಕ ದಾಖಲೆ ನಿರ್ಮಿಸಿದ ನಿರ್ಮಲಾ ಸೀತಾರಾಮನ್​, ಇಂದು ತಮ್ಮ ಆರನೇ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದರು.
ಪ್ರಧಾನಿ ಮೋದಿ ಅವರ ಎರಡನೇ ಅವಧಿಯ ಕೊನೆಯ ಬಜೆಟ್ ಇದಾಗಿದ್ದು, 17ನೇ ಲೋಕಸಭೆಯ ಅಧಿಕಾರಾವಧಿಯು ಜೂನ್ 16, 2024 ರಂದು ಕೊನೆಗೊಳ್ಳಲಿದೆ ಮತ್ತು 2024ರ ಲೋಕಸಭಾ ಚುನಾವಣೆಯು ಈ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿದೆ ಎಂಬುದು ವರದಿ. ಇಲ್ಲಿಯವರೆಗೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಅಷ್ಟು ಬಜೆಟ್ ಭಾಷಣದ ದಾಖಲೆಯ ವಿವರ ಹೀಗಿದೆ.
ಇದನ್ನೂ ಓದಿ:ಸ್ಟಾರ್​ ನಿರ್ದೇಶಕನ ಚಿತ್ರದಲ್ಲಿ ’12 ಫೇಲ್’​ ನಟ! ಇದು ಖಂಡಿತ ಸಿನಿಮಾ ಅಲ್ಲ?
2024: 58 ನಿಮಿಷ2023: 1 ಗಂಟೆ 27 ನಿಮಿಷ2022: 1 ಗಂಟೆ 30 ನಿಮಿಷ2021: 1 ಗಂಟೆ 50 ನಿಮಿಷ2020: 2 ಗಂಟೆ 42 ನಿಮಿಷ2019: 2 ಗಂಟೆ 15 ನಿಮಿಷ
FM Nirmala Sitharaman Ji's Budget speeches evolving in efficiency:
2024: 58 mins2023: 1 hr 27 mins2022: 1 hr 30 mins2021: 1 hr 50 mins2020: 2 hr 42 mins2019: 2 hr 15 mins
Setting a record with the shortest Budget speech! Concise and impactful.#Budget2024
— Locket Chatterjee (@me_locket)February 1, 2024

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
