ನವದೆಹಲಿ:ಪ್ರಧಾನಿ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ(ಜುಲೈ 23) ಸಂಸತ್ತಿನಲ್ಲಿ ಮಂಡಿಸಿದರು. ಈ ಬಜೆಟ್​​ ಅನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇವ್ ಚೇರ್ ಬಜೆಟ್ ಎಂದು ಟೀಕಿಸಿದ್ದಾರೆ.
ಇದನ್ನು ಓದಿ:ಷೇರು ಮಾರುಕಟ್ಟೆ ಮೇಲೆ ಬಜೆಟ್​​​ ಪ್ರಭಾವ; ಸೆನ್ಸೆಕ್ಸ್​​-ನಿಫ್ಟಿಯಲ್ಲಿ ಭಾರೀ ಕುಸಿತ
ಇದು ಕುರ್ಚಿ ಉಳಿಸುವ ಬಜೆಟ್. ಬಜೆಟ್ ಮೂಲಕ ಮಿತ್ರಪಕ್ಷಗಳಿಗೆ ಸುಳ್ಳು ಭರವಸೆಗಳನ್ನು ನೀಡಿ ಬೇರೆ ರಾಜ್ಯಗಳ ವೆಚ್ಚದಲ್ಲಿ ಅವರನ್ನು ಮೆಚ್ಚಿಸುವ ಪ್ರಯತ್ನ ನಡೆದಿದೆ. ಬಜೆಟ್ ಮೂಲಕ ಅವರ ಸ್ನೇಹಿತರನ್ನು ಸಂತೋಷಪಡಿಸಲಾಗಿದೆ ಎಂದು ರಾಹುಲ್​ಗಾಂಧಿ ಹೇಳಿದರು. ಈ ಬಜೆಟ್​ನಿಂದ ಎಎ (ಅದಾನಿ-ಅಂಬಾನಿ)ಗೆ ಲಾಭ ಆದರೆ ಸಾಮಾನ್ಯ ಭಾರತೀಯರಿಗೆ ಯಾವುದೇ ಪರಿಹಾರವಿಲ್ಲ ಎಂದು ಹೇಳಿದರು.
ಈ ಬಜೆಟ್​ನಲ್ಲಿನ ಮೂರನೇ ಅಂಶವನ್ನು ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ಪ್ರಣಾಳಿಕೆಯಿಂದ ನಕಲು ಮಾಡಲಾಗಿದೆ ಮತ್ತು ಹಿಂದಿನ ಬಜೆಟ್​​ನ ಅಂಶವನ್ನು ಕಾಪಿ ಪೇಸ್ಟ್​​​ ಮಾಡಲಾಗಿದೆ ಎಂದು ಅವರು ತಿಳಿಸಿದರು.
“Kursi Bachao” Budget.– Appease Allies: Hollow promises to them at the cost of other states.– Appease Cronies: Benefits to AA with no relief for the common Indian.– Copy and Paste: Congress manifesto and previous budgets.
ಇನ್ನು ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಪಿಕ್ಯಾಟ್​ ಬಜೆಟ್​ ಎಂದು ಹೇಳಿದ್ದಾರೆ. ಕಾಂಗ್ರೆಸ್​ನ ನ್ಯಾಯದ ಅಜೆಂಡಾವನ್ನು ಸರಿಯಾಗಿ ನಕಲು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್​​​)
ಬಾಂಗ್ಲಾದವರಿಗೆ ಆಶ್ರಯ ನೀಡುವ ಮಮತಾ ಹೇಳಿಕೆಗೆ ಆಕ್ಷೇಪ; ವರದಿ ಕೇಳಿದ ರಾಜ್ಯಪಾಲರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + twelve =
Remember me
