ಬೆಂಗಳೂರು:ಒಂದೆಡೆ ಕರೊನಾ ಭೀತಿ, ಇನ್ನೊಂದೆಡೆ ಅಂಫಾನ್​ ಚಂಡಮಾರುತ, ಇದರ ನಡುವೆಯೇ ಇದೀಗ ಭಯಂಕರ ಇನ್ನೊಂದು ಚಂಡಮಾರುತ ಬರಲಿದ್ದು, ಅದರ ಹೆಸರು ನಿಸರ್ಗ.
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳ ಸೇರಿದಂತೆ ಹಲವು ಕಡೆಗಳಲ್ಲಿ ನೂರಾರು ಮಂದಿಯನ್ನು ಬಲಿ ಪಡೆದು, ಸಹಸ್ರಾರು ಕೋಟಿ ಆಸ್ತಿಯನ್ನು ನೀರು ಪಾಲು ಮಾಡಿದ ಬೆನ್ನಲ್ಲೇ ಇದೀಗ ಅರಬ್ಬೀ ಸಮುದ್ರದಲ್ಲಿ ನಿಸರ್ಗ ಚಂಡಮಾರುತ ಸೃಷ್ಟಿಯಾಗುತ್ತಿದೆ.
ಈ ಚಂಡಮಾರುತ ಮುಂಬೈ ಕರಾವಳಿ ಪ್ರದೇಶದ ಸಮೀಪವೇ ಹಾದು ಹೋಗಲಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ಸರ್ಕಾರ ಹಲವು ಪ್ರದೇಶಗಳಲ್ಲಿ ಸೈಕ್ಲೋನ್ ಪರಿಣಾಮ ಜೂನ್​ 3 ಮತ್ತು 4 (ಬುಧವಾರ, ಗುರುವಾರ) ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂಬ ಎಚ್ಚರಿಕೆಯನ್ನು ನೀಡಿದೆ. ಈ ಪ್ರದೇಶಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಇದಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಗುಜರಾತ್‌, ಮಹಾರಾಷ್ಟ್ರದಲ್ಲಿ ಇದಾಗಲೇ ಇದು ತನ್ನ ಪ್ರಭಾವ ಶುರು ಮಾಡಿದ್ದು, ಅಲ್ಲಿ ಮಳೆ ಆರಂಭವಾಗಿದೆ.
ಇದನ್ನೂ ಓದಿ:ಬರಲಿದೆ ಕರೊನಾಕ್ಕಿಂತಲೂ ಭೀಕರ ವೈರಸ್​- ಅರ್ಧ ಜನಸಂಖ್ಯೆ ಖತಂ​ ಎಂದಿದ್ದಾರೆ ವಿಜ್ಞಾನಿಗಳು!
ರಾಜ್ಯದ ಮೇಲೂ ಪರಿಣಾಮ:ನಿಸರ್ಗ ಚಂಡಮಾರುತದಿಂದ ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಬೆಂಗಳೂರಿನಲ್ಲಿ ಹವಾಮಾನ ಎಂದಿನಂತೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಮಲೆನಾಡು ಭಾಗದ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ, ಮತ್ತು ಉತ್ತರ ಒಳನಾಡಿನ ಬೆಳಗಾವಿ, ಬೀದರ್‌, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ,ರಾಯಚೂರು, ವಿಜಯಪುರ, ಕಲಬುರ್ಗಿ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ಹೇಳಿದೆ.
ಇದನ್ನೂ ಓದಿ:ಕರೊನಾ ಸೋಂಕಿನ ಭೀತಿ: ಮುಖ್ಯಮಂತ್ರಿ ಹಾಗೂ ಸಚಿವರು ಕ್ವಾರಂಟೈನ್​ಗೆ
ಇಂದಿನಿಂದ ವಾಯುಭಾರ ಕುಸಿತ ತೀವ್ರಗೊಳ್ಳಲಿರುವ ಹಿನ್ನೆಲೆಯಲ್ಲಿ ಜೂನ್‌ 4ರವರೆಗೂ ಮಳೆ ಹಾಗೂ ಬಿರುಗಾಳಿ ಅಬ್ಬರಿಸಲಿದೆ. ನಂತರದಲ್ಲಿ ಇದರ ಆರ್ಭಟ ಸ್ವಲ್ಪ ಮಟ್ಟಿಗೆ ತಗ್ಗಲಿದೆ. ಆದರೆ ಮಳೆ ಮಾತ್ರ ಭಾರಿ ಪ್ರಮಾಣದಲ್ಲಿ ಬೀಳಲಿದೆ ಎಂದು ಇಲಾಖೆ ಹೇಳಿದೆ. ಆದ್ದರಿಂದ ಜೂನ್‌ 1 ರಿಂದ 4 ರವರೆಗೆ ಅರಬ್ಬಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ರಾಷ್ಟ್ರ ರಾಜಧಾನಿ ಗಡಿ ಕ್ಲೋಸ್​: ಸದ್ಯ ದೆಹಲಿಗೆ ಪ್ರವೇಶವಿಲ್ಲ ಎಂದ ಸಿಎಂ ಕೇಜ್ರಿವಾಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 2 =
Remember me
