ನವದೆಹಲಿ:ಇಂದಿಗೆ ಸರಿಯಾಗಿ 11 ದಿನಗಳ ಹಿಂದೆ ಅಂದರೆ ನವೆಂಬರ್​ 26ರಂದು ಪತನಗೊಂಡಿದ್ದ ಮಿಗ್​ 29 ನೌಕಾ ವಿಮಾನದ ಪೈಲಟ್​ನ ಮೃತದೇಹ ಕೊನೆಗೂ ಪತ್ತೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ವಿಮಾನ ಅಪಘಾತವಾಗಿದ್ದು, ಸಮುದ್ರದಲ್ಲಿ 70 ಮೀಟರ್​ ಆಳದಲ್ಲಿ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ:VIDEO| ಪೊಲೀಸರು ನನ್ನ ಚಪ್ಪಲಿ ಕದ್ದಿದ್ದಾರೆ! ಹೋರಾಟ ನಿರತ ರೈತ ಮಹಿಳೆಯ ಆರೋಪ ಹೇಗಿದೆ ನೋಡಿ
ನವೆಂಬರ್ 26ರಂದು ಐಎನ್ಎಸ್ ವಿಕ್ರಮಾದಿತ್ಯ ನೌಕೆಯಿಂದ ಹಾರಿದ್ದ ಮಿಗ್ ವಿಮಾನ ಸಂಜೆ 5 ಗಂಟೆಯ ಹೊತ್ತಿಗೆ ಅರಬ್ಬಿ ಸಮುದ್ರದ ಮೇಲ್ಭಾಗದಲ್ಲಿ ಪತನಗೊಂಡಿತ್ತು. ಆ ವಿಮಾನದಲ್ಲಿ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಹಾಗೂ ಅವರ ಸಹ ಪೈಲಟ್​ ಇದ್ದರು. ವಿಮಾನ ಪತನಗೊಳ್ಳುವುದಕ್ಕೂ ಮೊದಲೇ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಸಹ ಪೈಲಟ್​ ಹೊರಗೆ ಹಾರಿದ್ದರು. ಅವರನ್ನು ರಕ್ಷಿಸಲಾಗಿತ್ತು. ಅವರ ಬೆನ್ನಲ್ಲೇ ನಿಶಾಂತ್​ ಅವರೂ ಹಾಡಿದ್ದರಾದರೂ ಅವರ ದೇಹ ಪತ್ತೆಯಾಗಿರಲಿಲ್ಲ. ಇದೀಗ ಗೋವಾದ ಕರಾವಳಿಯಿಂದ ಸುಮಾರು 30 ಮೈಲು ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಹನ್ಸಾ ನೌಕಾಪಡೆ ನೆಲೆಯಿಂದ 50 ಕಿಮೀ ದೂರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದವು.
ಕಳೆದ ಎರಡು ವರ್ಷದಲ್ಲಿ ಪತನಗೊಂಡಿರುವ ನಾಲ್ಕನೇ ಮಿಗ್-29ಕೆ ವಿಮಾನ ಇದಾಗಿದೆ. (ಏಜೆನ್ಸೀಸ್​)
ಮೂರು ಹೆಣ್ಣು ಮಕ್ಕಳಿಂದ ನಡೆದಿತ್ತು ಅಪ್ಪನ ಕೊಲೆ! ಕಣ್ಣೀರು ತರಿಸುತ್ತೆ ಕೊಲೆಯ ಹಿಂದಿನ ನೋವಿನ ಕಥೆ

ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
