ಮುಂಬೈ:ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರೀ-ವೆಡ್ಡಿಂಗ್ ಸಮಾರಂಭ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿದ್ದು, ದೇಶ-ವಿದೇಶಗಳಿಂದ ಗಣ್ಯಾತಿ ಗಣ್ಯರು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದು, ಅನಂತ್-ರಾಧಿಕಾ ಜೋಡಿಗೆ ಶುಭಹಾರೈಸಿದರು. ಮೂರು ದಿನಗಳ ಕಾಲ ನಡೆದ ಈ ಅದ್ದೂರಿ ಈವೆಂಟ್​ನಲ್ಲಿ ಮುಖೇಶ್-ನೀತಾ ಅಂಬಾನಿ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕಂಗೊಳಿಸಿದರು.
ಇದನ್ನೂ ಓದಿ:ಉತ್ತರ ಇಸ್ರೇಲ್‌: ಕ್ಷಿಪಣಿ ದಾಳಿಯಲ್ಲಿ ಕೇರಳ ಮೂಲದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ
ಒಂದೆಡೆ ಇಡೀ ಕಾರ್ಯಕ್ರಮದಲ್ಲಿ ಅನಂತ್ ಮತ್ತು ರಾಧಿಕಾ ಜೋಡಿ ಮಿಂಚಿದರೆ, ಮತ್ತೊಂದೆಡೆ ಮುಖೇಶ್ ದಂಪತಿ ಕೂಡ ಅತ್ಯಾಕರ್ಷಕವಾಗಿ ಕಂಗೊಳಿಸಿದರು. ಅದರಲ್ಲೂ ಅನಂತ್ ತಾಯಿ ನೀತಾ ಅಂಬಾನಿ ಹೆಸರಾಂತ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ಡಿಸೈನ್ ಮಾಡಿದ ಕೈಮಗ್ಗದ ಕಾಂಚೀಪುರಂ ಸೀರೆಯನ್ನು ಧರಿಸುವ ಮೂಲಕ ಎಲ್ಲರ ಗಮನಸೆಳೆದರು. ಸೀರೆ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಅವರ ಕತ್ತಿನಲ್ಲಿ ಕಂಡುಬಂದ ವಜ್ರದ ನೆಕ್ಲೇಸ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ನೀತಾ ಅಂಬಾನಿ ಧರಿಸಿರುವ ಹಸಿರು ಬಣ್ಣದ ನೆಕ್ಲೇಸ್ ಸದ್ಯ ನೆಟ್ಟಿಗರ ಹುಬೇರಿಸುತ್ತಿದ್ದು, ಇದರ ಬೆಲೆ ಎಷ್ಟಿರಬಹುದು ಎಂಬ ಲೆಕ್ಕಾಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ನೀತಾ ಧರಿಸಿರುವ ಈ ಒಂದು ನಿರ್ದಿಷ್ಟ ನೆಕ್ಲೇಸ್‌ನ ಅಂದಾಜು ಬೆಲೆ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದ್ದು, ಅದರ ಬೆಲೆ ಬರೋಬ್ಬರಿ 400-500 ಕೋಟಿ ರೂ. ಇದೆ ಎಂದು ಮೂಲಗಳು ತಿಳಿಸಿವೆ!,(ಏಜೆನ್ಸೀಸ್).
‘ಶಾಂತಿ ಕ್ರಾಂತಿ’ ಮಾಡಿ 10 ಕೋಟಿ ರೂ. ಕಳ್ಕೊಂಡೆ​! ಆಗ ಅಪ್ಪನಿಗೆ ಒಂದು ಮಾತು ಕೊಟ್ಟೆ…..: ವಿ. ರವಿಚಂದ್ರನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − three =
Remember me
