ನವದೆಹಲಿ:ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರು ತಮ್ಮ ಇಡೀ ಕುಟುಂಬಸ್ಥರ ಜತೆಗೆ ಲಂಡನ್‌ನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದಾರೆ.
ಅಂಬಾನಿ ಕುಟುಂಬಸ್ಥರು ಭಾರತೀಯ ಧ್ವಜವನ್ನು ಕೈಯಲ್ಲಿ ಹಿಡಿದು ಹಾರಿಸುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದಾಗಿದೆ. ನೀತಾ ಅಂಬಾನಿ ಮುದ್ದಾದ ಮೊಮ್ಮಕ್ಕಳ ಎತ್ತಿಕೊಂಡು ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೆಟ್​​ ಮಾಡಿರುವ ಅದ್ಭುತ ಕ್ಷಣದ ನೋಟವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

2023 ಆಗಸ್ಟ್ 16ರಂದು, ಲಂಡನ್‌ನ ಸ್ಟೋಕ್ ಪಾರ್ಕ್‌ನಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಂಬಾನಿ ಕುಟುಂಬಸ್ಥರು ಸೆಲೆಬ್ರೆಟ್​​ ಮಾಡಿದ್ದಾರೆ. ನೀತಾ ಅಂಬಾನಿ, ರಾಧಿಕಾ ಮರ್ಚೆಂಟ್, ಅನಂತ್ ಅಂಬಾನಿ ಮತ್ತು ಇನ್ನೂ ಕೆಲವರನ್ನು ಒಳಗೊಂಡ ಅಂಬಾನಿ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಸ್ವಾತಂತ್ರ್ಯದ ಐತಿಹಾಸಿಕದಿನವನ್ನು ಸ್ಮರಣಾರ್ಥವಾಗಿ ಸೆಲೆಬ್ರೆಟ್​​ ಮಾಡುವಾಗ ಒಂದು ವರ್ಷದ ಮೊಮ್ಮಗಳನ್ನು ತನ್ನ ಮಡಿಲಲ್ಲಿ ಎತ್ತಿಕೊಂಡು ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದಾಗಿದೆ.

ಸ್ವಾತಂತ್ರ್ಯ ಆಚರಣೆಯಲ್ಲಿ ನೀತಾ ಅಂಬಾನಿ ಮೊಮ್ಮಕ್ಕಳು:ನೀತಾ ಅಂಬಾನಿ ಅವರ ಮೊಮ್ಮಕ್ಕಳಾದ ಪೃಥ್ವಿ ಆಕಾಶ್ ಅಂಬಾನಿ (ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ಮಗ), ಕೃಷ್ಣ ಮತ್ತು ಆದಿಯಾ (ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಅವರ ಅವಳಿ ಮಕ್ಕಳು) ಸಹ ಕಾಣಿಸಿಕೊಂಡರು.

ಒಂದು ಚಿತ್ರದಲ್ಲಿ, ನೀತಾ ತನ್ನ ನವಜಾತ ಮೊಮ್ಮಗಳು ವೇದಾ (ಆಕಾಶ್ ಮತ್ತು ಶ್ಲೋಕಾ ಅವರ ಮಗಳು) ಅನ್ನು ಹಿಡಿದಿರುವುದು ಕಂಡುಬಂದಿದೆ ಮತ್ತು ಚಿಕ್ಕ ಮಗು ನಿದ್ರೆಯಲ್ಲಿ ಮುಳುಗಿರುವುದು ಕಂಡುಬಂದಿದೆ. ನೀತಾ ಜತೆಗೆ, ನಾವು ಮುಕೇಶ್ ಅಂಬಾನಿ ಮತ್ತು ಪೃಥ್ವಿಯನ್ನು ನೋಡಬಹುದಾಗಿದೆ. ಅವರು ಮತ್ತೊಂದು ಫೋಟೋದಲ್ಲಿ ಇನ್ನೊಬ್ಬ ಮೊಮ್ಮಗನನ್ನು ಎತ್ತಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − eight =
Remember me
