ನವದೆಹಲಿ:ಅಂಬಾನಿ ಕುಟುಂಬದಲ್ಲಿ ಸಂಪತ್ತಿಗೆ ಯಾವುದೇ ಕೊರತೆ ಇಲ್ಲ. ದೇಶದ ಜಿಡಿಪಿಯ ಶೇ. 10 ರಷ್ಟು ಆಸ್ತಿ ಅಂಬಾನಿ ಕುಟುಂಬದವರ ಬಳಿಯಿದೆ. ಈ ಕುಟುಂಬ ಏನೇ ಮಾಡಿದರೂ ಅಲ್ಲೊಂದು ಅದ್ಧೂರಿತನ ಇದ್ದೇ ಇರುತ್ತದೆ. ಅದಕ್ಕೆ ತಾಜಾ ಉದಾಹರಣೆ ಇತ್ತೀಚೆಗಷ್ಟೇ ನಡೆದ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್​ ಅಂಬಾನಿ ಮದುವೆ.
ಇನ್ನು ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಅವರು ತಮ್ಮ ಐಷಾರಾಮಿ ಜೀವನಶೈಲಿಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ನೀತಾ ಅಂಬಾನಿ ಪ್ರತಿದಿನ ಬಳಸುವ ಪ್ರತಿಯೊಂದು ವಸ್ತುವೂ ಐಷಾರಾಮಿ. ಅದಕ್ಕೆ ನೀರು ಕೂಡ ಹೊರತಾಗಿಲ್ಲ. ಹೌದು, ನೀತಾ ಅಂಬಾನಿ ಕುಡಿಯುವ ನೀರು ಕೂಡ ತುಂಬಾ ದುಬಾರಿ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಫೋಟೋವೊಂದು ಆಗಾಗ ವೈರಲ್​ ಆಗುತ್ತಲೇ ಇರುತ್ತದೆ. ಆದರೆ, ಆ ವೈರಲ್​ ಫೋಟೋ ಹಿಂದಿನ ಅಸಲಿ ಕಾರಣ ಇಲ್ಲಿದೆ.
ಸುಂದರವಾಗಿ ವಿನ್ಯಾಸಗೊಳಿಸಿದ ನೀರಿನ ಬಾಟಲಿಯಿಂದ ನೀತಾ ಅಂಬಾನಿ ಅವರು ನೀರು ಕುಡಿಯುವ ಫೋಟೋ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ವೈರಲ್​ ಆದಾಗಲೆಲ್ಲ ನೀರಿನ ಬಾಟಲ್ ಬೆಲೆ ಮತ್ತು ಅದರಲ್ಲಿರುವ ನೀರಿನ ಬಗ್ಗೆ ಚರ್ಚೆಯಾಗುತ್ತದೆ. ಯಾಕೆ ಗೊತ್ತಾ? ಆ ನೀರಿನ ಬಾಟಲಿಯ ಬೆಲೆ 49 ಲಕ್ಷ ರೂ.! ಹಾಗಾದರೆ ಈ ನೀರಿನ ಬಾಟಲಿಯಲ್ಲಿ ಏನಿದೆ? ನೀರಿನ ವಿಶೇಷತೆ ಏನು ಎಂಬುವನ್ನು ನಾವೀಗ ತಿಳಿಯೋಣ.
ನೀತಾ ಅಂಬಾನಿ ಅವರು ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬ್ಯೂಟೊ ಎ ಮೊಡಿಗ್ಲಿಯಾನಿ ಹೆಸರಿನ ನೀರಿನ ಬಾಟಲ್​ನಲ್ಲಿ ನೀರು ಕುಡಿಯುತ್ತಾರೆ ಎನ್ನಲಾಗಿದೆ. ಈ ಬಾಟಲ್​ ಅನ್ನು ಜನಪ್ರಿಯ ವಿನ್ಯಾಸಕ ಫರ್ನಾಂಡೋ ಅಲ್ಟಮಿರಾನೊ ವಿನ್ಯಾಸಗೊಳಿಸಿದ್ದಾರೆ. ಇದು 24 ಕ್ಯಾರಟ್ ಚಿನ್ನದಿಂದ ಆವೃತವಾಗಿದೆ. ಈ ಬಾಟಲ್​ನಲ್ಲಿರುವ ನೀರು ಫ್ರಾನ್ಸ್ ಮತ್ತು ಫಿಜಿಯ ನೈಸರ್ಗಿಕ ಬುಗ್ಗೆ ಮತ್ತು ಐಸ್‌ಲ್ಯಾಂಡ್‌ನ ಗ್ಲೇಸಿಯರ್ ನೀರಿನ ಮಿಶ್ರಣವಾಗಿದೆ ಮತ್ತು ಪ್ರತಿ ಬಾಟಲಿಯ ಬೆಲೆ 49 ಲಕ್ಷ ರೂ. ಮೌಲ್ಯದ್ದಾಗಿದೆ.
60ನೇ ವಯಸ್ಸಿನಲ್ಲೂ ನೀತಾ ಅವರ ಒಳೆಯುವ ಚರ್ಮಕ್ಕೆ ಚಿನ್ನದ ನೀರು ಕಾರಣ ಎಂದು ಹೇಳಲಾಗುತ್ತದೆ. ಈ ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬ್ಯೂಟೊ ಎ ಮೊಡಿಗ್ಲಿಯಾನಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಅತ್ಯಂತ ದುಬಾರಿ ನೀರು ಎಂದು ಪಟ್ಟಿ ಮಾಡಲಾಗಿದೆ. ಮೊದಲೇ ಹೇಳಿದಂತೆ, ಇದರ ನೀರು ಮೂರು ನೈಸರ್ಗಿಕ ಮೂಲಗಳಿಂದ ಬರುತ್ತದೆ. ನೀರಿನ ಒಂದು ಭಾಗವನ್ನು ಫ್ರಾನ್ಸ್‌ನ ಬುಗ್ಗೆಯಿಂದ ಪಡೆಯಲಾಗಿದೆ. ಇನ್ನೊಂದು ಭಾಗವು ಫಿಜಿಯ ಬುಗ್ಗೆಯಿಂದ ಮತ್ತು ಮೂರನೆಯ ಮೂಲವು ಐಸ್‌ಲ್ಯಾಂಡ್‌ನ ಶೀತ ಹಿಮನದಿಗಳಿಂದ ಪಡೆಯಲಾಗಿದೆ. ವರದಿಗಳ ಪ್ರಕಾರ 750 ಮಿಲಿ ಬಾಟಲಿಯನ್ನು 24-ಕ್ಯಾರಟ್ ಚಿನ್ನದಿಂದ ತಯಾರಿಸಲಾಗುತ್ತದೆ ಮತ್ತು 5 ಗ್ರಾಂ ಚಿನ್ನವನ್ನು ನೀರಿಗೆ ಸೇರಿಸಲಾಗುತ್ತದೆ.
ಆದಾಗ್ಯೂ, ಆಗಾಗ ವೈರಲ್ ಆಗುವ ಈ ಫೋಟೋ ಒರಿಜಿನಲ್​ ಅಲ್ಲ, ಇದನ್ನು ಮಾರ್ಫ್ ಮಾಡಲಾಗಿದೆ. ಮೂಲ ಫೋಟೋವನ್ನು 2015 ರಲ್ಲಿ ಐಪಿಎಲ್ ಪಂದ್ಯದ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ. ಆ ಫೋಟೋದಲ್ಲಿ ಸಾಮಾನ್ಯ ನೀರಿನ ಬಾಟಲಿಯೊಂದಿಗೆ ನೀತಾ ಅವರು ಕಾಣಿಸಿಕೊಂಡಿದ್ದಾರೆ. ಅದಕ್ಕೆ ದುಬಾರಿ ಬಾಟಲ್​ ಎಡಿಟ್​ ಮಾಡಿ ಹರಿಬಿಡಲಾಗಿದೆ.

ಅಂದಹಾಗೆ ನೊರಿಟೇಕ್‌ನ ಟೀ ಸೆಟ್ ನೀತಾ ಅವರ ಇತರ ದುಬಾರಿ ಸಂಗ್ರಹಗಳಲ್ಲಿ ಒಂದಾಗಿದೆ, ಇದರಲ್ಲಿ ಅವರು ನಿಯಮಿತವಾಗಿ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ. ಇದು ಜಪಾನ್‌ನ ಅತ್ಯಂತ ಹಳೆಯ ಕ್ರೋಕರಿ ಬ್ರಾಂಡ್‌ನಿಂದ ತಯಾರಿಸಲಾಗಿದೆ.(ಏಜೆನ್ಸೀಸ್​)
ನವಿಲು ಸಾಂಬಾರ್​ ರೆಸಿಪಿ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಯೂಟ್ಯೂಬರ್​ಗೆ ಬಿಗ್​ ಶಾಕ್​!​

ತನ್ನ ಕುಟುಂಬಕ್ಕಾಗಿ ಐಷಾರಾಮಿ ಕಾರು ಖರೀದಿಸಿದ​ ಸಿರಾಜ್​: ಬೆಲೆ ಕೇಳಿದರೆ ಬೆರಗಾಗೋದು ಖಚಿತ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty + 14 =
Remember me
