ಮುಂಬೈ:ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಇಂದು ರೋಟರಿ ಕ್ಲಬ್​ ಆಫ್​ ಬಾಂಬೆ ವತಿಯಿಂದ ‘ಸಿಟಿಜನ್ ಆಫ್ ಮುಂಬೈ’ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಆರೋಗ್ಯ, ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿಯಲ್ಲಿ ಪರಿವರ್ತನಾಶೀಲಾ ಸಂಸ್ಥೆಗಳನ್ನು ರಚಿಸುವ ಮೂಲಕ ಅವರ ನಿರಂತರ ಕೊಡುಗೆಗಳನ್ನು ಗುರುತಿಸಿ ರೋಟರಿ ಕ್ಲಬ್​​ ಆಫ್​​​ ಬಾಂಬೆ ವತಿಯಿಂದ ನೀತಾ ಅಂಬಾನಿಯವರಿಗೆ ಈ ಪ್ರಶಸ್ತಿ ನೀಡಲಾಗಿದೆ. ರಿಲಯನ್ಸ್​​ ಫೌಂಡೇಶನ್​ನ ಅಧಿಕೃತ ಎಕ್ಸ್​​(ಟ್ವಿಟ್ಟರ್​​) ಖಾತೆಯಲ್ಲಿ ನೀತಾ ಅಂಬಾನಿಯವರು ಪ್ರಶಸ್ತಿ ಸ್ವೀಕರಿಸಿದ ಕುರಿತು ಪೋಸ್ಟ್​​ ಮಾಡಲಾಗಿದೆ.
ಪ್ರಶಸ್ತಿಯನ್ನು ಸ್ವೀಕರಿಸಿದ ನೀತಾ ಅಂಬಾನಿ, ನಮ್ಮ ನಗರ ಮತ್ತು ಸಮುದಾಯಕ್ಕೆ ರೋಟರಿ ಕ್ಲಬ್​​ ಆಫ್​​ ಬಾಂಬೆಯ ಕೊಡುಗೆ ಸಾಕಷ್ಟಿದೆ. ಈ ಪ್ರಶಸ್ತಿಯನ್ನು ನಾನು ಸಂತೋಷದಿಂದ ಸ್ವೀಕರೆಸಿದ್ದೇನೆ. 1969ರಲ್ಲಿ ಮೊದಲು ನನ್ನ ಮಾವ ಧೀರೂಬಾಯಿ ಅಂಬಾನಿ ರೋಟರಿ ಕ್ಲಬ್​ನ​ ಸದಸ್ಯರಾಗಿದ್ದರು. 2003ರಲ್ಲಿ ನಾನು ಮತ್ತು ಮುಖೇಶ್​​ ರೋಟರಿ ಕ್ಲಬ್​​​​​ನ ಸದಸ್ಯರಾದೆವು. ಹಾಗಾಗಿ ರೋಟರಿಯೊಂದಿಗೆ ನನ್ನ ಕುಟುಂಬದ ಒಡನಾಟವು ದಶಕದಿಂದಲೂ ಇದೆ. ರೊಟೇರಿಯನ್ ಆಗಿ ನನ್ನದು ಇದು ಇಪ್ಪತ್ತೈದನೇ ವರ್ಷ ಎಂದೂ ಅವರು ಹೇಳಿದ್ದಾರೆ.

A post shared by Vijayavani (@vijayavanino1)

ವಿವಿಧ ಸಂಸ್ಥೆಗಳನ್ನು ನಿರ್ಮಿಸುವುದರಿಂದ ನನಗೆ ದೈನಂದಿನ ಚೈತನ್ಯ ಹಾಗೂ ಪ್ರೇರಣೆ ಸಿಗುತ್ತಿದೆ. ಕಳೆದ ಒಂದು ದಶಕದಿಂದ ಸಂಸ್ಥೆಗಳನ್ನು ನಿರ್ಮಾಣ ಮಾಡುವ ಮೂಲಕ ಸಮಾಜಕ್ಕೆ ವಾಪಸ್ ಕೊಡುವುದರತ್ತ ಗಮನ ಹರಿಸಿದ್ದೇನೆ. ಧೀರೂಭಾಯಿ ಅಂಬಾನಿ ಇಂಟರ್​ನ್ಯಾಷನಲ್ ಸ್ಕೂಲ್, ಸರ್ ಎಚ್.ಎನ್​. ರಿಲಯನ್ಸ್​ ಫೌಂಡೇಷನ್ ಹಾಸ್ಪಿಟಲ್, ಮುಂಬೈ ಇಂಡಿಯನ್ಸ್, ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್​ ಪ್ರಮುಖವಾದವು. ಇನ್ನು ನವಿ ಮುಂಬೈಯಲ್ಲಿ 400 ಎಕರೆ ಕ್ಯಾಂಪಸ್​ನಲ್ಲಿ ನಿರ್ಮಿಸಲಿರುವ ಯುನಿವರ್ಸಿಟಿ ಬಗ್ಗೆ ನಾನು ಹೆಚ್ಚು ಉತ್ಸುಕಳಾಗಿದ್ದೇನೆ ಎಂದು ಅವರು ಹೇಳಿದರು.
ರಿಲಯನ್ಸ್ ಫೌಂಡೇಶನ್‌ ವೆಬ್‌ಸೈಟ್​​ ಮಾಹಿತಿಯ ಪ್ರಕಾರ, ನೀತಾ ಅಂಬಾನಿಯವರು ಒಲಿಂಪಿಕ್ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ. ಜತೆಗೆ ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಮಂಡಳಿಯ ಗೌರವ ಟ್ರಸ್ಟಿಯಾಗಿ ಆಯ್ಕೆಯಾದ ಮೊದಲ ಭಾರತೀಯರಾಗಿದ್ದಾರೆ. ನೀತಾ ಅಂಬಾನಿಯವರು ಕಲೆ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ವೇದಿಕೆ ನಿರ್ಮಿಸುವ ನಿಟ್ಟಿನಲ್ಲಿ, ಈ ವರ್ಷದ ಆರಂಭದಲ್ಲಿ ಮುಂಬೈನಲ್ಲಿ ಸಾಂಸ್ಕೃತಿಕ ಕೇಂದ್ರವೊಂದನ್ನು ತೆರೆದಿದ್ದಾರೆ. ಜತೆಗೆ ಮುಂಬೈನಲ್ಲಿರುವ ಸರ್ ಎಚ್.ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮೂಲಕ ಎಲ್ಲಾ ಮಧ್ಯಮವರ್ಗದ ಭಾರತೀಯರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೌಲಭ್ಯ ಲಭ್ಯವಾಗುವಂತೆ ಮಾಡುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
