ಮುಂಬೈ:ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮಹಿಳೆಯರ ಐಪಿಎಲ್​ ಮೂಲಕ ಕ್ರೀಡೆಯಲ್ಲಿ ಮಹಿಳೆಯರಿಗೆ ತಮ್ಮ ಸಾಮರ್ಥ್ಯವನ್ನು ನಿರೂಪಿಸಲು ಸಾಧ್ಯವಾಗಿದೆ. ಮಹಿಳೆಯರು ಕ್ರೀಡೆಯಲ್ಲಿ ವೃತ್ತಿ ಜೀವನವನ್ನು ಕಂಡಕೊಳ್ಳಲು ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಸಹಾಯ ಮಾಡುತ್ತದೆ ಎಂದು ಮುಂಬೈ ಇಂಡಿಯನ್ಸ್​ ತಂಡದ ಒಡತಿ ನೀತಾ ಅಂಬಾನಿ ಅಭಿಪ್ರಾಯ ಪಟ್ಟಿದ್ದಾರೆ.
ಮಾರ್ಚ್ 4ರಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ನೀತಾ ಅಂಬಾನಿ ಭಾಗವಹಿಸಿ ಮಾತನಾಡಿದ ನೀತಾ ಅಂಬಾನಿ, ಇದೊಂದು ಎಂದೂ ಮರೆಯಲಾಗದ ದಿನ. ಈ ಟೂರ್ನಿಯ ಭಾಗವಾಗಿರುವುದು ರೋಮಾಂಚನಕಾರಿಯಾಗಿದೆ. ದೇಶಾದ್ಯಂತ ಯುವತಿಯರಿಗೆ ಕ್ರೀಡೆಯಲ್ಲಿ ತೊಡಗಿಸಿಕೊಂಡು ಕನಸು ನನಸಾಗಿಸಲು ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.
ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ಗುಜರಾತ್​ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿತು. ಈ ಮೂಲಕ ಆರಂಭಿಕ ಪಂದ್ಯದಲ್ಲಿ 143 ರನ್​ಗಳಿಂದ ಭರ್ಜರಿಯಾಗಿ ಜಯ ಗಳಿಸಿತು.
ಮಹಿಳೆಯರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕನಸು ಹೊಂದಿರುವ ನೀತಾ ಅಂಬಾನಿ, ಪಂದ್ಯದ ಪ್ರತಿ ಎಸೆತದಲ್ಲೂ ಆಟಗಾರ್ತಿಯರನ್ನು ಹುರಿದುಂಬಿಸಿದರು. ಪಂದ್ಯದ ಬಳಿಕ ಡ್ರೆಸ್ಸಿಂಗ್​ ರೂಮ್​ನಲ್ಲಿ ನಡೆದ ಸಂಭ್ರಮಾಚರಣೆಯಲ್ಲೂ ತೊಡಗಿಸಿಕೊಂಡರು.​
ನಮ್ಮ ತಂಡದ ಆಟಗಾರ್ತಿಯರು ಚೆನ್ನಾಗಿ ಆಡಿದ್ದಾರೆ. ಅವರು ಆಡಿದ ರೀತಿಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಇದು ಶ್ರೇಷ್ಠ ಪ್ರದರ್ಶನವಾಗಿತ್ತು. ನಮ್ಮ ನಾಯಕಿ ಹರ್ಮಾನ್ ​ಪ್ರೀತ್ ​ಕೌರ್ ​ಅದ್ಭುತ ಇನಿಂಗ್ಸ್ ​ಆಡಿದರು. ಅಮೆಲಿಯಾ ಕೆರ್​ ಬ್ಯಾಟಿಂಗ್ ​ಮತ್ತು ಬೌಲಿಂಗ್​ನಲ್ಲಿ ಮಿಂಚಿದರು ಎಂದು ನೀತಾ ಅಂಬಾನಿ ತಮ್ಮ ತಂಡದ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದರು.
ಎಂಐ ಪಲ್ಟಾನ್​ಎಂದೇ ಕರೆಯಲ್ಪಡುವ ತಂಡದ ಅಭಿಮಾನಿಗಳ ಬಳಗಕ್ಕೆ ನೀತಾ ಅಂಬಾನಿ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೀಡಾಂಗಣಕ್ಕೆ ಆಗಮಿಸಿದ್ದ ಮುಂಬೈ ಇಂಡಿಯನ್ಸ್​ ತಂಡವನ್ನು ಬೆಂಬಲಿಸಿದ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹುರಿದುಂಬಿಸಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಜನರು ಕ್ರೀಡಾಂಗಣದಲ್ಲಿ ಮಹಿಳಾ ತಂಡವನ್ನು ಬೆಂಬಲಿಸಲು ಬಂದಿರುವುದನ್ನು ನೋಡಿ ಖುಷಿಯಾಗಿದೆ. ನಮ್ಮ ಆಟಗಾರ್ತಿಯರನ್ನು ಬೆಂಬಲಿ ಅವರಿಗೆ ಹೆಚ್ಚಿನ ಶಕ್ತಿ ತುಂಬೋಣ. ಈ ಚೊಚ್ಚಲ ಆವೃತ್ತಿಯ ಟೂರ್ನಿಯಲ್ಲಿ ಆಡುತ್ತಿರುವ ಎಲ್ಲಾ ತಂಡಗಳಿಗೆ ನಾನು ಶುಭ ಹಾರೈಸುತ್ತೇನೆ ಎಂದು ನೀತಾ ಅಂಬಾನಿ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 1 =
Remember me
