ಮುಂಬೈ:ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ (ಎನ್​ಎಂಎಸಿಸಿ) ಸಂಗೀತ, ನೃತ್ಯ, ನಾಟಕ, ಫ್ಯಾಷನ್ ಹಾಗೂ ದೃಶ್ಯ ಕಲೆಗಳ ಪ್ರದರ್ಶನಗಳೊಂದಿಗೆ ಹೊರ ಜಗತ್ತಿಗೆ ತೆರೆದುಕೊಳ್ಳುತ್ತಿದೆ.
ಎನ್​ಎಂಎಸಿಸಿಯ ಸ್ಟುಡಿಯೋ ಥಿಯೇಟರ್ ಮತ್ತು ದಿ ಕ್ಯೂಬ್ ನಲ್ಲಿ ಏಪ್ರಿಲ್​ 3ರಿಂದ ಆರಂಭವಾಗುವ ಕಲಾವಿದರ ವೈವಿಧ್ಯಮಯ ಪ್ರದರ್ಶನಗಳನ್ನು ಎಲ್ಲರೂ ಆನಂದಿಸಬಹುದಾಗಿದೆ. ದಿ ಕ್ಯೂಬ್​ ಹೊಸ ಮತ್ತು ಪ್ರಾಯೋಗಿಕ ರಂಗಭೂಮಿಯಿಂದ ಉದಯೋನ್ಮುಖ ಭಾರತೀಯ ಕಲಾವಿದರನ್ನು ಪ್ರೋತ್ಸಾಹಿಸಿ ಉತ್ತೇಜಿಸಲಿದೆ.
ಇದನ್ನೂ ಓದಿ:ಮೋದಿ ಉಪನಾಮ ಪ್ರಕರಣ: ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ ಸೂರತ್ ನ್ಯಾಯಾಲಯ
ಸ್ಟುಡಿಯೋ ಥಿಯೇಟರ್​ನಲ್ಲಿಏಪ್ರಿಲ್​ 3 ರಿಂದ 9ರವರೆಗೆ ಪ್ರತಿದಿನ ವಿವಿಧ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಏ. 3ರಂದು ಮೇಮ್ ಖಾನ್ (ರಾಜಸ್ತಾನಿ ಜಾನಪದ ಮತ್ತು ಸೂಫಿ ಮ್ಯೂಸಿಕ್​), ಏ​. 4ರಂದು ಕೌಶಿಕಿ ಚಕ್ರವರ್ತಿ (ಹಿಂದುಸ್ತಾನಿ ಕ್ಲಾಸಿಕಲ್​ ಮ್ಯೂಸಿಕ್​), ಏ.​ 5ರಂದು ಉಸ್ತಾದ್ ಮುನವ್ವರ್ ಮಾಸೂಮ್ (ಕವ್ವಾಲಿ), ಏ.​ 6ರಂದು ಹಾರ್ದಿಕ್ ದವೆ (ಗುಜರಾತ್​ ಜಾನಪದ ಸಂಗೀತ), ಏ. 7ರಂದು ಅರುಣಾ ಸಾಯಿರಾಂ (ಕರ್ನಾಟಕ ಕ್ಲಾಸಿಕಲ್​ ಮ್ಯೂಸಿಕ್​​), ಏ. 8ರಂದು ಸಮರ್ಪಣ್ (ಕ್ಲಾಸಿಕಲ್​ ಫ್ಯೂಷನ್​ ಮ್ಯೂಸಿಕ್​), ಏ. 9ರಂದು ಪರ್ಬಯನ್ ಚಟರ್ಜಿ ಮತ್ತು ಯು. ರಾಜೇಶ್ ಅವರಿಂದ ಮಿಲಾಪ್ (ಹಿಂದುಸ್ಥಾನಿ ಮತ್ತು ಕರ್ನಾಟಕ ಮ್ಯೂಸಿಕ್​) ಕಾರ್ಯಕ್ರಮಗಳು ನಡೆಯಲಿವೆ.
ದಿ ಕ್ಯೂಬ್​ನಲ್ಲಿಏ. 3ರಂದು ಸಾರಂಗ್ ಕುಲಕರ್ಣಿ ಮತ್ತು ಶಿಖರ್ ನಾದ್ ಖುರೇಷಿ (ಇಂಡಿಯನ್​ ಕ್ಲಾಸಿಕಲ್​ ಮತ್ತು ಫ್ಯೂಷನ್​), ಏ. 4ರಂದು ದಿವ್ಯಾ ವಾರಿಯರ್​, ಶ್ರುತಿ ಗೋಪಾಲ್​ ಮತ್ತು ಶಾಶ್ವತಿ ಗರಾಲ್​ ಘೋಷ್​ ಅವರಿಂದ ಅವಳ ಕಥೆ (ಇಂಡಿಯನ್​ ಕ್ಲಾಸಿಕಲ್​ ಡಾನ್ಸ್​), ಏ. 5ರಂದು ಮಾಲಿ ಮತ್ತು ಕಾಮಾಕ್ಷಿ ಖನ್ನಾ: ಲೈವ್ (ಪಾಪ್​, ಆರ್​ಎನ್​ಬಿ, ಸೋಲ್​ ಆ್ಯಂಡ್​ ಇಂಡೀ ಫೋಕ್), ಏ. 6ರಂದು ಯುಕಿ ಎಲ್ಲಿಯಾಸ್​ ಅವರಿಂದ ಎಲಿಫೆಂಟ್​ ಇನ್​ ದಿ ರೂಮ್​ (ಥಿಯೇಟರ್​). ಏ. 7ರಂದು ಮಹೇಶ್ ಬಚ್ವಾನ್ ಮತ್ತು ನಂದಿನಿ ಶಂಕರ್ (ಇಂಡಿಯನ್​ ಕ್ಲಾಸಿಕಲ್​ ಫ್ಯೂಷನ್​), ಏ. 8ರಂದು ತರುಣ್ ಬಲಾನಿ ಫೀಟ್​. ಪರಿಜಾದ್​ ಡಿ ಅವರಿಂದ ಸೀಸನಲ್ ಅಫೆಕ್ಟೆಡ್​ ಬೀಟ್ಸ್: ಲೈವ್ (ಎಲೆಕ್ಟ್ರಾನಿಕ್​ ಮ್ಯೂಸಿಕ್​, ಆಡಿಯೋ ವಿಸುವಲ್​), ಏ. 9ರಂದು ಮುಕ್ತಾ ಬರ್ವೆ ಅವರಿಂದ ಪ್ರಿಯ್​ ಭಾಯ್, ಏಕ್​ ಕವಿತಾ ಹವೀ ಆಹೆ (ಮರಾಠಿ ಥಿಯೇಟರ್​) ಕಾರ್ಯಕ್ರಮಗಳು ನಡೆಯಲಿವೆ.
ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಮ್ಮ ಟಿಕೆಟ್‌ಗಳನ್ನು ಈಗ http://nmacc.com ನಲ್ಲಿ ಬುಕ್ ಮಾಡಬಹುದು.
ದಿ ಕ್ಯೂಬ್​ಗೆ 250 ರೂ. ಮತ್ತು ದಿ ಸ್ಟುಡಿಯೋ ಥಿಯೇಟರ್​ಗೆ ತಲಾ 500 ರೂ. ಟಿಕೆಟ್‌ ದರ ನಿಗದಿ ಮಾಡಲಾಗಿದೆ.
The Studio Theatre & The Cube promise immersive experiences like never before. Enjoy diverse performances by artists starting from 3rd April 2023.
Book your tickets now onhttps://t.co/k2phrES7gn
Get tickets for The Cube at ₹250/- and The Studio Theatre at ₹500/-#NMACCpic.twitter.com/IzB7pWmRVT
— Nita Mukesh Ambani Cultural Centre (@nmacc_india)March 22, 2023

ಇಷ್ಟೇ ಅಲ್ಲದೆ, ಎನ್​ಎಂಎಸಿಸಿಯಿಂದ ದಿ ಗ್ರೇಟ್ ಇಂಡಿಯನ್ ಮ್ಯೂಸಿಕಲ್ ಕಾರ್ಯಕ್ರಮ ಕೂಡ ಕೆಲವೇ ದಿನಗಳಲ್ಲಿ ದಿ ಗ್ರ್ಯಾಂಡ್ ಥಿಯೇಟರ್‌ನಲ್ಲಿ ಪ್ರಾರಂಭಗೊಳ್ಳಲಿದೆ. ಇದು ಏಪ್ರಿಲ್​ 3ರಿಂದ ಏ.23ರವರೆಗೆ ನಡೆಯಲಿದೆ. ಮ್ಯೂಸಿಕಲ್​ ಕಾರ್ಯಕ್ರಮದಲ್ಲಿ ಭಾರತೀಯ ನೃತ್ಯ, ನಾಟಕ, ಸಂಗೀತ, ಕಲೆ ಸೇರಿ ಮುಂತಾದವು ಪ್ರದರ್ಶನಗೊಳ್ಳಲಿದೆ. ಅಲ್ಲದೆ, ಏಪ್ರಿಲ್​ 3 ರಿಂದ ಜೂನ್​ 4ರವರೆಗೆ ‘ಇಂಡಿಯಾ ಇನ್ ಫ್ಯಾಶನ್’ ವೇಷಭೂಷಣ ಕಲಾ ಪ್ರದರ್ಶನ ನಡೆಯಲಿದೆ.
ಇದನ್ನೂ ಓದಿ:ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುರುಡು ಕಾಂಚಾಣ ಕುಣಿತ: ಬೆಳಗಾವಿ, ಗದಗಿನಲ್ಲಿ 26 ಲಕ್ಷ ರೂ. ಸೀಜ್​
ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಮ್ಮ ಟಿಕೆಟ್‌ಗಳನ್ನು ಈಗ http://nmacc.com ನಲ್ಲಿ ಬುಕ್ ಮಾಡಬಹುದು.
'The Great Indian Musical' is set to debut at The Grand Theatre in just a few days. The theatrical extravaganza traces India’s journey through a montage of Indian dance, drama, music, art and more.
Book your tickets now onhttps://t.co/k2phrES7gn
*Entry for ages 7+#NMACCpic.twitter.com/hFZp9uUJfs
— Nita Mukesh Ambani Cultural Centre (@nmacc_india)March 22, 2023

ಮೋದಿ ಉಪನಾಮ ಪ್ರಕರಣ: ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ ಸೂರತ್ ನ್ಯಾಯಾಲಯ

ಬಿಯರ್ ಮೇಲೆ 10 ರೂ. ಹೆಚ್ಚುವರಿ ವಸೂಲಿ ಮಾಡಿದ್ದವನಿಗೆ ಜೈಲು; ಬಾರ್ ಲೈಸೆನ್ಸ್ ಹೊಂದಿದ್ದ ಮಾಲೀಕನಿಗೆ 75,000 ರೂ. ದಂಡ

ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುರುಡು ಕಾಂಚಾಣ ಕುಣಿತ: ಬೆಳಗಾವಿ, ಗದಗಿನಲ್ಲಿ 26 ಲಕ್ಷ ರೂ. ಸೀಜ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
