ಬೆಂಗಳೂರು:ಮೈನಾ ಸಿನಿಮಾ ಮೂಲಕವಾಗಿ ಕನ್ನಡ ಪ್ರೇಕ್ಷಕರ ಮನ ಗೆದ್ದ ನಟಿ ನಿತ್ಯಾ ಮೆನನ್. ಕಳೆದ ವರ್ಷ ನಟಿಯ ವಿವಾಹದ ಬಗ್ಗೆ ಕೆಲವು ವರದಿ ಹರಿದಾಡಿತ್ತು. ಆಗ ಅವರು ಮದುವೆ ಆಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈಗ ಯಾಕೆ ಮದುವೆ ಆಗುತ್ತಿಲ್ಲ ಎನ್ನುವ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ನಿತ್ಯಾ ಮೆನನ್ ಅವರು ತಮ್ಮ ಮದುವೆ ಪ್ಲಾನ್ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಸದ್ಯಕ್ಕೆ ಮದುವೆ ಆಗೋ ಆಲೋಚನೆ ಇಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ನಿತ್ಯಾ ಮೆನನ್​​. ನಾನು ಏನು ಮಾಡಬೇಕು ಎಂಬುದನ್ನು ಮತ್ತೊಬ್ಬರು ಹೇಳಬೇಕು ಎಂದು ನಾನು ಭಾವಿಸುವುದಿಲ್ಲ. ನನ್ನ ಪಾಲಕರು ಈ ವಿಚಾರದಲ್ಲಿ ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ. ನನಗೆ ಅವರು ಸ್ವಾತಂತ್ರ್ಯ ನೀಡಿದ್ದಾರೆ. ಕೆಲವು ನಿರೀಕ್ಷೆಗಳಿವೆ. ನಾನು ಯಾರೊಂದಿಗಾದರೂ ಇದ್ದರೆ ಅವರಿಗೆ ತುಂಬಾ ಖುಷಿ ಸಿಗಬಹುದು. ಆದರೆ ಅವರು ಆ ರೀತಿ ಅಲ್ಲದಿದ್ದರೆ ಎನ್ನುವ ಪ್ರಶ್ನೆ ಮೂಡುತ್ತದೆ. ನನ್ನ ಅಜ್ಜಿ ಬದುಕಿದ್ದಾಗ ಮದುವೆಯಾಗಬೇಕೆಂದು ಒತ್ತಡವಿತ್ತು. ನೀನು ಯಾಕೆ ಮದುವೆಯಾಗಬಾರದು ಎಂದು ಅಜ್ಜಿ ನನಗೆ ಕೇಳುತ್ತಲೇ ಇದ್ದರು. ಅವರು ಇಂದು ನಮ್ಮೊಂದಿಗೆ ಇಲ್ಲ ಎಂದಿದ್ದಾರೆ.
30 ವರ್ಷ ದಾಟಿದಾಗ ಮದುವೆ ಬಗ್ಗೆ ಒತ್ತಡ ಬರುತ್ತದೆ. ವಿಚಿತ್ರವೆಂದರೆ, ನಮ್ಮ ಸಮಾಜದಲ್ಲಿ ನಾವು ಅನುಸರಿಸಬೇಕಾದ ಹಲವಾರು ನಿಯಮಗಳಿವೆ. ಸಮಾಜ ಅಂದುಕೊಂಡ ವಿಚಾರವನ್ನು ಪಾಲಿಸಿದರೆ ಒಳ್ಳೆಯವರು ಎನಿಸಿಕೊಳ್ಳುತ್ತೀರಿ. ಇಲ್ಲವಾದರೆ ನಿಮಗೆ ಕೆಟ್ಟವರು ಎನ್ನುವ ಪಟ್ಟ ಸಿಗುತ್ತದೆ ಎಂದಿದ್ದಾರೆ.
ನಟಿ ನಿತ್ಯಾ ಮೆನನ್ ಇತ್ತೀಚೆಗೆ ‘ಕುಮಾರಿ ಶ್ರೀಮತಿ’ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ನಿತ್ಯಾ ಮೆನನ್ ಅವರ ಮುಂಬರುವ ಚಲನಚಿತ್ರ ಪ್ರಾಜೆಕ್ಟ್, ‘D50’ 2024 ರಲ್ಲಿ ಬಿಡುಗಡೆಯಾಗಲಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × one =
Remember me
