ನವದೆಹಲಿ:ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಗಣೇಶ ಚತುರ್ಥಿ ದಿನದಂದೇ ದೂರದ ಈಕ್ವೆಡಾರ್​ ದೇಶದ ಕರಾವಳಿಯ ಸಣ್ಣ ದ್ವೀಪದಲ್ಲಿ ಕೈಲಾಸ ದೇಶದ ರಿಸರ್ವ ಬ್ಯಾಂಕ್​ ಕೈಲಾಸ ಆರಂಭಿಸಿದ್ದಾನೆ.
ಕೈಲಾಸ ದೇಶದ ಪ್ರಧಾನಮಂತ್ರಿಯೂ ಆಗಿರುವ ನಿತ್ಯಾನಂದ, ತನ್ನ ಬೆಂಬಲಿಗರೊಂದಿಗೆ ಬ್ಯಾಂಕ್​ ಕಾರ್ಯಾರಂಭಕ್ಕೆ ಚಾಲನೆ ನೀಡಿದ್ದಾನೆ. ಈತ ದೇಶ ತೊರೆದಿದ್ದಾನೆಂದು ಹೇಳಲಾದ ಕಳೆದ ನವೆಂಬರ್​ ಈ ರಾಷ್ಟ್ರ ಉದಯವಾಗಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದ. ಜತೆಗೆ ಈ ದೇಶದ ಪ್ರಜೆಗಳಿಗೆಂದೇ ಈ ಪಾಸ್​ಪೋರ್ಟ್​ ಆರಂಭಿಸಿದ್ದ.
ಈತನ ಕೈಲಾಸ ದೇಶ ನಿಖರವಾಗಿ ಎಲ್ಲಿದೆ ಎಂಬುದನ್ನು ಈವರೆಗೂ ನಿತ್ಯಾನಂದ ತಿಳಿಸಿಲ್ಲವಾದರೂ, ಹಲವು ಮಾಧ್ಯಮಗಳಲ್ಲಿ ಇದು ಈಕ್ವೆಡಾರ್​ನಲ್ಲಿರುವ ಒಂದು ದ್ವೀಪ ಎಂದೇ ಗುರುತಿಸಲಾಗಿದೆ. ಇದನ್ನು ನಿತ್ಯಾನಂದ ಖರೀದಿಸಿದ್ದಾನೆ ಎಂದೇ ಹೇಳಲಾಗಿದೆ.
ಇದನ್ನೂ ಓದಿ;ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್​ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ
ಕೈಲಾಸವೊಂದು ರಾಜ್ಯಗಳಿಲ್ಲದ ದೇಶ, ಜತೆಗೆ ಹೊಸ ಭೂಭಾಗವನ್ನು ಬಯಸುವುದಿಲ್ಲ ಎಂಬುದು ನಿತ್ಯಾನಂದನ ವ್ಯಾಖ್ಯಾನ. ತಾವಿರುವ ನೆಲದಲ್ಲಿ ಹಿಂದೂ ಧರ್ಮವನ್ನು ಪಾಲಿಸಲಾಗದ ಜನರಿಂದ ಈ ಕೈಲಾಸ ಸೃಷ್ಟಿಯಾಗಿದೆ ಎಂದು ಕೈಲಾಸ ವೆಬ್​ಸೈಟ್​ನಲ್ಲಿ ಹೇಳಿಕೊಳ್ಳಲಾಗಿದೆ.
ಕೈಲಾಸದಲ್ಲಿ ಆಚರಿಸಲ್ಪಡುತ್ತಿರುವ ಗಣೇಶ ಚತುರ್ಥಿ ಸಂದರ್ಭದಲ್ಲಿ ರಿಸರ್ವ್​ ಬ್ಯಾಂಕ್​ ಆಫ್​ ಕೈಲಾಸದ ಕರೆನ್ಸಿಯನ್ನು ಗಣಪತಿ, ಪರಮಶಿವ ಹಾಗೂ ಗುರು ನಿತ್ಯಾನಂದ ಸ್ವಾಮೀಜಿ ಪದತಲಕ್ಕೆ ಅರ್ಪಿಸಲಾಗಿದೆ ಎಂದು ಘೋಷಿಸಲಾಗಿದೆ.
ಹಿಂದು ಧಾರ್ಮಿಕ ನೀತಿಗಳ 100ಕ್ಕೂ ಅಧಿಕ ಪುಸ್ತಕಗಳು 360ಕ್ಕೂ ಅಧಿಕ ಲೇಖನಗಳನ್ನು ಅಧ್ಯಯನ ಮಾಡಿ ಈ ಕರೆನ್ಸಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೈಲಾಸ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ;ನಿತ್ಯಾನಂದನ ಕೈಲಾಸ ನಡೆಯುತ್ತಿರೋದ್ಹೇಗೆ? ಹಾಂಗ್​ಕಾಂಗ್​, ಅಮೆರಿಕ, ಬ್ರಿಟನ್​ನಲ್ಲಿವೆ ಹತ್ತಾರು ಕಂಪನಿ…!
ಅಷ್ಟಕ್ಕೂ ಇಲ್ಲಿನ ಕರೆನ್ಸಿ ಕೈಲಾಸಿಯನ್​ ಡಾಲರ್​. ಜತೆಗೆ, ಇತರ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಮೌಲ್ಯವೆಷ್ಟು ಎಂಬುದು ಇನ್ನೂ ಗೊತ್ತಾಗಿಲ್ಲ. ಡಾಲರ್​ ಎಂದ ಮೇಲೆ ಅಮೆರಿಕನ್​ ಡಾಲರ್​ ಮೌಲ್ಯವೇ ಹೊಂದಿರಬಹದು ಎಂದು ಅಂದಾಜಿಸಲಾಗುತ್ತಿದೆ. ಭಾರತೀಯ ರೂ. ವಿನಿಮಯ ದರ ಅಂದಾಜು 75 ರ.ಗಳಿಬಹುದೆಂದು ಅಂದಾಜಿಸಲಾಗುತ್ತಿದೆ.
ಕೈಲಾಸ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿರುವ ದೇಶಗಳಲ್ಲಿ ಮಾತ್ರ ಈ ಕರೆನ್ಸಿ ಚಲಾವಣೆಯಲ್ಲಿ ಇರಲಿದೆಯಂತೆ. ರಿಸರ್ವ್​ ಬ್ಯಾಂಕ್​ ಆರಂಭಿಸಲು ದೇಶವೊಂದರ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ರಿಸರ್ವ್​ ಬ್ಯಾಂಕ್​ ಆಫ್​ ಕೈಲಾಸ ಕಾನೂನು ಬದ್ಧವಾಗಿದೆ ಎಂದು ಕೈಲಾಸ ವೆಬ್​ಸೈಟ್​ನಲ್ಲಿ ಹೇಳಿಕೊಳ್ಳಲಾಗಿದೆ.
ಕೆಲಸ ಕಳೆದುಕೊಂಡಿದ್ದೀರಾ…? ಸರ್ಕಾರವೇ ಕೊಡುತ್ತೆ ಮೂರು ತಿಂಗಳ ಸಂಬಳ; ಅರ್ಹತೆಗಳೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 2 =
Remember me
