ನವದೆಹಲಿ:ಕರೊನಾ ವೈರಸ್ ಸೃಷ್ಟಿಸಿದ ಆರೋಗ್ಯ ಎಮರ್ಜೆನ್ಸಿಯಿಂದ ಹೊರ ಬರಲು ಆಡಳಿತ ವ್ಯವಸ್ಥೆ ಹರಸಾಹಸ ಪಡುತ್ತಿರುವ ಮಧ್ಯೆ, ದೇಶದ ಆರ್ಥಿಕತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರಕ್ಕೆ ಮತ್ತೊಂದು ದೈತ್ಯ ಸವಾಲಾಗಿ ಕಾಡಲಾರಂಭಿಸಿದೆ. ಕೃಷಿ, ಕೈಗಾರಿಕೆ, ರೈಲ್ವೆ, ಪ್ರವಾಸೋದ್ಯಮ ಇನ್ನಿತರ ಕ್ಷೇತ್ರಗಳಿಗೆ ಆರ್ಥಿಕ ಸಂಕಟದಿಂದ ಹೊರಬರಲು ಕನಿಷ್ಠ 2-3 ವರ್ಷಗಳಾದರೂ ಬೇಕು ಎಂಬ ವಿಶ್ಲೇಷಣೆಗಳು ಕೇಂದ್ರ ಸರ್ಕಾರದ ವಲಯದಲ್ಲೇ ಕೇಳಿಬರುತ್ತಿದೆ.
ಈ ನಿಟ್ಟಿನಲ್ಲಿ, ನೀತಿ ಆಯೋಗ ಹಾಗೂ ಹಣಕಾಸು ಸಚಿವಾಲಯ ಸೇರಿ ವಿವಿಧ ಇಲಾಖೆಗಳ ಸಚಿವರು ಮತ್ತು ಉನ್ನತಾಧಿಕಾರಿಗಳು ಕಾರ್ಯೋನ್ಮುಖರಾಗುವಂತೆ ಪ್ರಧಾನಿ ಸೂಚನೆ ನೀಡಿದ್ದಾರೆ. ಆಯಾ ಕ್ಷೇತ್ರಗಳ ತಜ್ಞರನ್ನು ಸಂರ್ಪಕಿಸಿರುವ ನೀತಿ ಆಯೋಗದ ಅಧಿಕಾರಿಗಳು, ಅಭಿವೃದ್ಧಿಗೆ ಬೇಕಿರುವ ಮಾಗೋಪಾಯಗಳನ್ನು ಹಂಚಿಕೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.
ನೀರಾವರಿ ಕ್ಷೇತ್ರದ ಅಭಿವೃದ್ಧಿ ಹಾಗೂ ಆ ಮೂಲಕ ದೇಶದ ಆರ್ಥಿಕತೆ ಸುಧಾರಿಸಲು ಸಲಹೆಗಳನ್ನು ತಿಳಿಸುವಂತೆ ರಾಜ್ಯದ ಜಲ ಸಂಪನ್ಮೂಲ ಇಲಾಖೆಯ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿದ್ದ ಡಾ.ಎಂ.ಆರ್. ರಂಗನಾಥ್ ಅವರಿಗೆ ನೀತಿ ಆಯೋಗ ಕೇಳಿಕೊಂಡಿದೆ. ಈಗಾಗಲೇ ಪ್ರಾಥಮಿಕ ಹಂತದ ಸಲಹೆಗಳನ್ನು ನಾನು ಸಲ್ಲಿಸಿದ್ದೇನೆ ಎಂದು ರಂಗನಾಥ್ ವಿಜಯವಾಣಿ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ಕೋವಿಡ್-19 ನಂತರದ ದಿನಗಳಲ್ಲಿ ಗ್ರಾಮಾಂತರ ಭಾಗವೂ ವಿಪರೀತ ಆರ್ಥಿಕ ಸಮಸ್ಯೆಗೆ ತುತ್ತಾಗುವ ಸಂಭವವಿದ್ದು, ಸಣ್ಣ ಕೈಗಾರಿಕೆ, ಗ್ರಾಮೀಣ ಮಾರುಕಟ್ಟೆ, ಹೈನುಗಾರಿಕೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಚಟುವಟಿಕೆಗಳನ್ನು ಕಾಯ್ದಿಟ್ಟುಕೊಳ್ಳಲು ಏನೇನು ಮಾಡಬಹುದು ಎಂಬ ಬಗ್ಗೆ ನೀತಿ ಆಯೋಗಕ್ಕೆ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ.
ಹಲವು ರಾಜ್ಯಗಳ ತಜ್ಞರನ್ನು ಸಂರ್ಪಸಲಾಗಿದ್ದು, ಅವುಗಳ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇವೆಲ್ಲವೂ ಪ್ರಧಾನಿ ಮೋದಿ ಹಾಗೂ ಅವರ ತಂಡದ ಮೇಲುಸ್ತುವಾರಿಯಲ್ಲೇ ನಡೆಯುತ್ತಿದೆ. ಕರೊನಾ ಹಾವಳಿ ನಿಯಂತ್ರಿ ಸುವುದರ ಮೇಲೂ ಗಮನ ಕೇಂದ್ರೀಕರಿಸಿರುವ ಪ್ರಧಾನಿ ಲಾಕ್​ಡೌನ್ ನಂತರ ದಿನದ ಸುಮಾರು 18 ಗಂಟೆ ಈ ಕೆಲಸಗಳಲ್ಲೇ ತೊಡಗಿಕೊಂಡಿರುತ್ತಾರೆ ಎಂದು ಮೂಲಗಳಿಂದ ಗೊತ್ತಾಗಿದೆ.
ಯಾವಾಗ ನಿಲ್ಲಬಹುದು?:ಕರೊನಾ ವೈರಸ್ ಹಾವಳಿ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರಕ್ಕೆ ಕೊನೆಗೊಳ್ಳಬಹುದು ಎಂದು ಆರಂಭಿಕ ಹಂತದಲ್ಲಿ ಅಂದಾಜಿಸಲಾಗಿತ್ತು. ಕೆಲ ತಜ್ಞರು ಅಧಿಕ ಉಷ್ಣಾಂಶದಲ್ಲಿ ವೈರಸ್ ಉಳಿದುಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ, ಕೇರಳ, ತಮಿಳುನಾಡು, ತೆಲಂಗಾಣದಲ್ಲಿ ಈಗಲೂ ವೈರಸ್ ಹಬ್ಬುವಿಕೆ ನಿಂತಿಲ್ಲ ಎಂದು ವಾದಿಸುವ ಕೇಂದ್ರ ಸಚಿವರೊಬ್ಬರು, ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಮತ್ತು ನಿಜವೇ ಆಗಿದ್ದರೆ ಬಿಸಿಲು ಹೆಚ್ಚಿರುವ ರಾಜ್ಯಗಳಲ್ಲಿ ನಿಯಂತ್ರಣಕ್ಕೆ ಬರಬೇಕಿತ್ತು. ಹೀಗಾಗಿ, ಕರೊನಾ ವೈರಸ್ ಸಂಪೂರ್ಣವಾಗಿ ಇಲ್ಲದ ಸ್ಥಿತಿ ಯಾವಾಗ ಬರಬಹುದು ಎಂದು ಕಲ್ಪಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ. ಅದರ ವ್ಯಾಪಕ ಹರಡುವಿಕೆ ತಡೆಯುವುದಷ್ಟೇ ನಮ್ಮ ಮುಂದಿರುವ ಸದ್ಯದ ಆಯ್ಕೆ ಎನ್ನುತ್ತಾರೆ.
ಮೇಲಾಗಿ, ಕರೊನಾ ವಿವಾರಣೆಗೆ ನಿರ್ದಿಷ್ಟ ಔಷಧ ಇನ್ನೂ ಕಂಡುಹಿಡಿಯಲಾಗಿಲ್ಲ. ಭಾರತದ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಕನಿಷ್ಠ 6 ತಿಂಗಳ ತನಕ ಕಾಯಲೇಬೇಕಿದೆ. ಅಲ್ಲಿಯವರೆಗೆ ಕರೊನಾ ಸಂಪೂರ್ಣ ನಿಯಂತ್ರಣ ಸಾಧ್ಯವೇ ಎನ್ನುವುದು ಪ್ರಶ್ನೆ.
ಮೇ ತಿಂಗಳಲ್ಲಿ ಕೃಷಿಕರು ಬಿತ್ತನೆ ಆರಂಭಿಸುವುದರಿಂದ ಕರೊನಾ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬರಲೇಬೇಕು ಮತ್ತು ಜನರೂ ಇದನ್ನು ಅರ್ಥಮಾಡಿಕೊಳ್ಳಬೇಕು. ಒಂದುವೇಳೆ ಅದು ಸಾಧ್ಯವಾಗದಿದ್ದಲ್ಲಿ ಮುಂದೆ ಭಾರೀ ಸಮಸ್ಯೆಗೆ ನಾವು ತೆರೆದುಕೊಳ್ಳಬೇಕಾದೀತು. ಕರ್ನಾಟಕ ಸೇರಿ ಎಲ್ಲ ರಾಜ್ಯ ಸರ್ಕಾರಗಳೂ ಈ ದಿಕ್ಕಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿ ಎನ್ನುವುದು ಡಾ. ರಂಗನಾಥ್ ಅಭಿಪ್ರಾಯ.
ಮಾನಸಿಕ ಸಿದ್ಧತೆ:ಕರೊನೋತ್ತರ ದಿನಗಳು ಹಿಂದಿನಂತಿರದು ಎಂದು ಪ್ರಧಾನಿಯೇ ಹೇಳಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಉದ್ಯೋಗಸ್ಥ ಮಂದಿ ಮಾನಸಿಕವಾಗಿ ಗಟ್ಟಿಗೊಳ್ಳಬೇಕು. ಈ ಆರ್ಥಿಕ ಸಂಕಟ ಸಾಮಾಜಿಕ, ಆರ್ಥಿಕ ಕ್ಷೋಭೆ ಉಂಟು ಮಾಡಬಹುದು. ಮುಂದಿನ 2-3 ವರ್ಷಗಳು ದೇಶಕ್ಕೆ ಕಷ್ಟಕಾಲ ಎನಿಸಲಿದೆ. ಅನೇಕರು ನೌಕರಿ ಕಳೆದುಕೊಳ್ಳಬಹುದು. ಭಾರತಕ್ಕೆ ಮಾತ್ರವಲ್ಲ, ಇದು ಜಗತ್ತಿಗೆ ಅನ್ವಯ. ಈ ಸವಾಲಿನ ದಿನಗಳಿಗೆ ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸಬೇಕು ಎಂದು ದೆಹಲಿಯಲ್ಲಿರುವ ರಾಜ್ಯದ ಉನ್ನತಾಧಿ ಕಾರಿಯೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ.
ಪಕ್ಷ ನೋಡಿಕೊಳ್ಳಲಿದೆ:ಸಂಸದರೆಲ್ಲರೂ ಹಣವುಳ್ಳವರು ಎಂಬ ಭಾವನೆ ಜನರಲ್ಲಿದ್ದರೂ, ಅನೇಕ (ಬಡ) ಸಂಸದರು ತಮ್ಮ ತಿಂಗಳ ವೇತನವನ್ನೇ ಅವಲಂಬಿಸಿದ್ದಾರೆ ಎಂಬುದು ವಾಸ್ತವವೂ ಹೌದು. ಹೀಗಾಗಿ, ವಾರ್ಷಿಕ ವೇತನ, ಸಂಸದ ಪ್ರದೇಶಾಭಿವೃದ್ಧಿ ನಿಧಿ ಕಡಿತದಿಂದ ಆರ್ಥಿಕ ಸಮಸ್ಯೆಗೆ ತುತ್ತಾಗುವವರಿಗೆ ಪಕ್ಷವೇ ನೆರವಾಗಬೇಕೆಂದು ತೀರ್ವನಿಸಲಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಅಧ್ಯಕ್ಷ ಜೆ.ಪಿ. ನಡ್ಡಾ ನಡುವೆ ಚರ್ಚೆಗಳು ನಡೆದಿವೆ. ಬೇರೆ ಪಕ್ಷಗಳೂ ಈ ಬಗ್ಗೆ ಆಲೋಚಿಸಬಹುದು ಎಂದೂ ಸಂದೇಶ ರವಾನಿಸಲಾಗಿದೆಯಂತೆ.
5 ವರ್ಷದ ಸಂಸದರ ನಿಧಿ ನೀಡಲಿ!ರಾಜ್ಯಸಭೆಯ ಸದಸ್ಯರು ತಮ್ಮ ಐದು ವರ್ಷಗಳ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು (ರೂ.30 ಕೋಟಿ) ಕರೊನಾ ಪರಿಹಾರ ನಿಧಿಗೆ ನೀಡಬೇಕು ಎಂಬ ತೀರ್ಮಾನ ಕೈಗೊಳ್ಳೋಣ ಎಂಬುದು ಪ್ರಧಾನಿ ಮೋದಿ ಆಶಯವಾಗಿತ್ತಂತೆ. ಆದರೆ, ಈ ಬಗ್ಗೆ ಪಕ್ಷದ ಹಲವು ಮುಖಂಡರಿಗೆ ಒಪ್ಪಿಗೆ ಇರಲಿಲ್ಲ. ವಿಪಕ್ಷಗಳು ಈ ಬಗ್ಗೆ ತಕರಾರು ತೆಗೆದು, ರಾಜ್ಯಸಭೆ-ಲೋಕಸಭೆ ಎಂದು ನೀವೇ ತಾರತಮ್ಯ ಮಾಡುತ್ತೀರಿ ಎಂದು ಟೀಕಿಸುತ್ತಾರೆ. ಹೀಗಾಗಿ ಸಮಾನ ಪ್ರಮಾಣದಲ್ಲಿ ನಿಧಿ ಬಳಸಿಕೊಳ್ಳೋಣ ಮತ್ತು 2 ವರ್ಷಕ್ಕೆ ನಿಗದಿ ಮಾಡುವುದೇ ಸೂಕ್ತ ಎಂದು ಹಿರಿಯ ಸಚಿವರು ಸಲಹೆ ಕೊಟ್ಟರು. ಇದಕ್ಕೆ ಒಪ್ಪಿದ್ದ ಪ್ರಧಾನಿ, ತಮ್ಮ ಮೊದಲ ಅಭಿಪ್ರಾಯ ಬದಲಿಸಿ, 2 ವರ್ಷದ ಸಂಸದರ ನಿಧಿ ಕರೊನಾ ಪರಿಹಾರ ನಿಧಿಗೆ ಮೀಸಲಿಡಲಾಗುವುದು ಎಂದು ಅಧಿಸೂಚನೆ ಹೊರಡಿಸಲು ಅಧಿಕಾರಿಗಳಿಗೆ ಸೂಚಿಸಿದರಂತೆ.
ಪ್ರಧಾನಿ ಮೋದಿ ಅವರು ಯಾವುದೇ ವಿಷಯದ ಬಗ್ಗೆ ತರ್ಕಬದ್ಧವಾಗಿ ವಾದಿಸಿದರೆ, ತಾಳ್ಮೆಯಿಂದ ಆಲಿಸುತ್ತಾರೆ ಮತ್ತು ಒಪ್ಪಿಕೊಳ್ಳುತ್ತಾರೆ. ಅರ್ಥವಿಲ್ಲದ್ದನ್ನು, ಸಾಧ್ಯವಾಗದ್ದನ್ನು ಹೇಳಿದರೆ ಬಾಯಿಮುಚ್ಚಿ ಸುತ್ತಾರೆ. ಸಂವಾದಕ್ಕೆ, ಚರ್ಚೆಗೆ ಆದ್ಯತೆ ನೀಡುತ್ತಾರೆ. ಕರೊನಾ ನಿಯಂತ್ರಣ ವಿಚಾರದಲ್ಲಂತೂ ಎಲ್ಲರನ್ನೂ ಸಂರ್ಪಸಿದ ಬಗ್ಗೆ ವಿಪಕ್ಷದ ಸ್ನೇಹಿತರೇ ಆಂತರಿಕ ವಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ಕ್ಯಾಬಿನೆಟ್ ಸಚಿವರೊಬ್ಬರು ಹೇಳುತ್ತಾರೆ.
ಕಾರ್ವಿುಕರ ವಾಪಸಾತಿಯೇ ಸವಾಲು:ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ, ಮಹಾನಗರಗಳಿಂದ ತಮ್ಮ ಹಳ್ಳಿಗಳಿಗೆ ವಲಸೆ ಹೋಗಿರುವ ಲಕ್ಷಾಂತರ ಕಾರ್ವಿುಕರನ್ನು ವಾಪಸ್ ಕರೆಸಿಕೊಳ್ಳುವುದೇ ಕೇಂದ್ರ ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿ ಕಾಡಲಿದೆ. ಲಾಕ್​ಡೌನ್ ಪರಿಣಾಮ ಉದ್ಯೋಗ ಖಾತ್ರಿ ಯೋಜನೆಯಡಿ ದಿನಕ್ಕೆ ರೂ. 202 ಹಾಗೂ ಐದು ಕಿಲೋ ಅಕ್ಕಿ/ಗೋಧಿ, ಧಾನ್ಯ ಉಚಿತವಾಗಿ ನೀಡಲಾಗುತ್ತಿದೆ. ಮುಂದಿನ ಹಲವು ದಿನಗಳವರೆಗೆ ಅದು ಮುಂದುವರಿಯಬಹುದು. ಇದನ್ನು ಹಠಾತ್ತಾಗಿ ನಿಲ್ಲಿಸಿದರೂ ಟೀಕೆಗೆ ಗ್ರಾಸವಾಗಬಹುದು. ಆರ್ಥಿಕ ಚಟುವಿಕೆಗಳಿಗೆ ವೇಗ ಪಡೆದುಕೊಳ್ಳಲು ಕಾರ್ವಿುಕರು ಬೇಕೇಬೇಕು. ಹೀಗಾಗಿ, ಕರೊನಾ ನಿಯಂತ್ರಣಕ್ಕೆ ಬರುತ್ತಿದ್ದಂತೆ ಭಯದಿಂದ ಹಳ್ಳಿ ಸೇರಿರುವ ಕಾರ್ವಿುಕರನ್ನು ಕರೆಸಿಕೊಳ್ಳುವುದೂ ಸವಾಲಾಗಲಿದೆ.
| ರಾಘವ ಶರ್ಮ ನಿಡ್ಲೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
