ಬೆಂಗಳೂರು: ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಅವರ ಪ್ರಶ್ನೆಗೆ ಉತ್ತರಿಸಿ ಸಚಿವ ನಿತಿನ್ ಗಡ್ಕರಿ, ಅಡೆತಡೆ ಇಲ್ಲದ ಫ್ರೀ-ಫ್ಲೋ-ಟೋಲಿಂಗ್​ಗೆ ಅವಕಾಶ ನೀಡುವ ಜಿಪಿಎಸ್ ಆಧಾರಿತ ವ್ಯವಸ್ಥೆಯಂತಹ ಹೊಸ ತಂತ್ರಜ್ಞಾನಗಳ ಕುರಿತು ಸಲಹೆ ಪಡೆಯಲು ರಸ್ತೆ ಸಾರಿಗೆ ಸಚಿವಾಲಯವು ಕನ್ಸಲ್ಟೆಂಟ್ ನೇಮಕ ಮಾಡಿದೆ ಎಂದು ವಿವರಿಸಿದ್ದಾರೆ.
ಜಿಎನ್ಎಸ್ಎಸ್ ಆಧಾರಿತ ಟೋಲಿಂಗ್ ಬಗ್ಗೆ ತಿಳಿಸಿದ ಸಚಿವರು, ಈ ವ್ಯವಸ್ಥೆಯು ಹೆದ್ದಾರಿಯಲ್ಲಿ ವಾಹನ ಇರುವ ಜಾಗವನ್ನು ತಿಳಿಸುತ್ತದೆ ಹಾಗೂ ಪ್ರಯಾಣಿಸಿದ ದೂರವನ್ನು ಆಧರಿಸಿ ಶುಲ್ಕ ನಿರ್ಧರಿಸುತ್ತದೆ. ಲೋಕಸಭಾ ಚುನಾವಣೆಗೆ ಮೊದಲು ಬೆಂಗಳೂರು-ಮೈಸೂರು ಎನ್ಎಚ್-275 ಸೇರಿದಂತೆ ಆಯ್ದ ಹೆದ್ದಾರಿಗಳಲ್ಲಿ ಪ್ರಾಯೋಗಿಕ ಯೋಜನೆ ಜಾರಿ ಮಾಡಲು ಉದ್ದೇಶಿಸಲಾಗಿದೆ.
ಸಂಸದ ಲಹರ್ ಸಿಂಗ್ ಅವರ ಉಪನಗರ ರೈಲುಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಬೆಂಗಳೂರು ಹಾಗೂ ಉಪನಗರಗಳ ನಡುವೆ ರೈಲ್ವೆ ಸಂಪರ್ಕ ಕಲ್ಪಿಸಲು 742 ಕಿ.ಮೀ. ಉದ್ದದ ಮಾರ್ಗಕ್ಕಾಗಿ ಫೈನಲ್ ಲೊಕೇಶನ್ ಸರ್ವೆ (FLS) ಮಾಡಲು ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ರಾಜ್ಯಸಭೆ ಚುನಾವಣೆ; ಹಿರಿಯ ಪತ್ರಕರ್ತೆ ಸಾಗರಿಕಾ ಘೋಷ್ ಅವರನ್ನು ನಾಮನಿರ್ದೇಶನ ಮಾಡಿದ ಟಿಎಂಸಿ ಸರ್ಕಾರ
ಸಚಿವರು ಈ ಯೋಜನೆಯ ಪ್ರಗತಿಯ ಬಗ್ಗೆ ತಿಳಿಸಿದ್ದು, ಕಾರಿಡಾರ್ 2 ಹಾಗೂ 4ರ ಭೂ ಸ್ವಾಧೀನ ಪೂರ್ಣಗೊಂಡಿದೆ. ಕಾರಿಡಾರ್-2 ರಲ್ಲಿ ಕಾಮಗಾರಿ ನಡೆಯುತ್ತಿದೆ. ಕಾರಿಡಾರ್-4 ಕ್ಕೆ ಇತ್ತೀಚಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾರಿಡಾರ್ 1 ಹಾಗೂ 3 ರಲ್ಲಿ ಸರ್ವೆ ಕಾರ್ಯ ಹಾಗೂ ಭೌಗೋಳಿಕ ಸಮೀಕ್ಷೆ ಪೂರ್ಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟು 742 ಕಿ.ಮೀ. ಉದ್ದದ ಮಾರ್ಗಕ್ಕೆ ಎಫ್ಎಲ್ಎಸ್ ಮಂಜೂರಾಗಿದೆ. ಇದು ಬೆಂಗಳೂರು ಹಾಗೂ ಸುತ್ತಲಿನ ನಗರಗಳನ್ನು ಸಂಪರ್ಕಿಸಲಿದೆ. ಬೆಂಗಳೂರು ನಗರದಲ್ಲಿ ಡಬಲ್ ಲೈನ್ ನ ವೃತ್ತಾಕಾರದ ಮಾರ್ಗ, ಬೆಂಗಳೂರು-ತುಮಕೂರು ಕ್ವಾಡ್ರಪ್ಲಿಂಗ್ (ನಾಲ್ಕು ಮಾರ್ಗ), ಚಿಕ್ಕಬಾಣಾವಾರ-ಹಾಸನ ಡಬಲಿಂಗ್, ಬೆಂಗಳೂರು-ಮೈಸೂರು ಕ್ವಾಡ್ರಪ್ಲಿಂಗ್ ಹಾಗೂ ಬಂಗಾರಪೇಟೆ-ಜೋಲಾರಪಟ್ಟಿ ಕ್ವಾಡ್ರಪ್ಲಿಂಗ್ ಕಾಮಗಾರಿಯನ್ನು ಇದು ಒಳಗೊಂಡಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:11 + 10 =
Remember me
