ಸಿಲಿಗುರಿ:ಕೇಂದ್ರದ ಹೆದ್ದಾರಿ ಮತ್ತು ಸಾರಿಗೆ ಮಂತ್ರಿ ನಿತಿನ್​ ಗಡ್ಕರಿ ಪಶ್ಚಿಮ ಬಂಗಾಳದ ಶಿವಮಂದಿರದಿಂದ ಸೇವಕ್ ಕಂಟೋನ್ಮೆಂಟ್​ವರೆಗಿನ ರಸ್ತೆಯ ಶಂಕುಸ್ಥಾಪನೆ ಮಾಡಲು ಸಿಲಿಗುರಿಗೆ ಬಂದಿದ್ದರು. ಇಂದು (ಗುರುವಾರ) ಡಾರ್ಜಿಲಿಂಗ್ ಜಂಕ್ಷನ್ ಬಳಿಯ ದಗಾಪುರ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ನಡುವೆ ವೇದಿಕೆಯ ಮೇಲೆ ಕುಳಿತಿದ್ದಂತೆಯೇ ಒಮ್ಮೆಲೆ ನಿತಿನ್​ ಗಡ್ಕರಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕೇಂದ್ರ ಮಂತ್ರಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಂತೆ ಅವರನ್ನು ವೇದಿಕೆಯ ಹಿಂದಿನ ಗ್ರೀನ್​ ರೂಮ್​ಗೆ ಕೂಡಲೆ ಕರೆದುಕೊಂಡು ಹೋಗಲಾಯಿತು. ಆದರೆ ಆರೋಗ್ಯ ಹತೋಟಿಗೆ ಬರಲಿಲ್ಲ.
ಗ್ರೀನ್​ ರೂಮ್​ನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಅವರ ತಪಾಸಣೆಗಾಗಿ ಸಿಲಿಗುರಿಯಿಂದ ಗ್ರೀನ್​ ಕಾರಿಡಾರ್​ ಮೂಲಕ ಓರ್ವ ವೈದ್ಯರನ್ನು ಕರೆತರಲಾಯಿತು. ಆರೋಗ್ಯ ಸ್ವಲ್ಪ ಸುಧಾರಿಸಿದ ನಂತರ ದಾರ್ಜಿಲಿಂಗ್​ನ ಸಂಸದ ರಾಜು ಬಿಸ್ತಾ ನಿತಿನ್​ ಗಡ್ಕರಿ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಅವರ ರಕ್ತದಲ್ಲಿ ಸಕ್ಕರೆ ಪ್ರಮಾಣ ಇಳಿದಿದೆ. ಈಗ ವೈದ್ಯರ ಸಲಹೆ ಪ್ರಕಾರ ಅವರಿಗೆ ಸಲೈನ್​ ಟ್ರೀಟ್​ಮೆಂಟ್​ ಪ್ರಾರಂಭಿಸಲಾಗಿದೆ. ಕೇಂದ್ರ ಸಚಿವರ ಚಿಕಿತ್ಸೆಗೆ ಮತಿಗಾರದಲ್ಲಿರುವ ಅವರ ಮನೆಯಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಅವರೊಂದಿಗೆ ವೈದ್ಯರೂ ಇದ್ದಾರೆ. ಸಿಲಿಗುರಿಯಲ್ಲಿ ನಡೆದ ಸಮಾರಂಭದ ನಂತರ ಅವರು ದಲ್ಖೋಲಾಗೆ ಹೋಗಬೇಕಿತ್ತು. ಮೂಲಗಳ ಪ್ರಕಾರ ಆ ಕಾರ್ಯಕ್ರಮವೇ ರದ್ದಾಗಬಹುದು. ಅವರು ಸಿಲಿಗುರಿಯಿಂದ ದೆಹಲಿಗೆ ಹಿಂತಿರುಗುವ ಸಾಧ್ಯತೆ ಎದ್ದು ಕಾಣುತ್ತಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + nineteen =
Remember me
