ನವದೆಹಲಿ:ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕಾಂಗ್ರೆಸ್​ನ ಅಧಿಕೃತ ‘x’ಎಕ್ಸ್ ಖಾತೆಯಲ್ಲಿ ತನ್ನ ಬಗ್ಗೆ ಆಕ್ಷೇಪಾರ್ಹ ವಿಷಯವನ್ನು ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಿ ಗಡ್ಕರಿ ಈ ನೋಟಿಸ್ ಕಳುಹಿಸಿದ್ದಾರೆ.
ನೋಟಿಸ್​ನಲ್ಲಿ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ಲಿಖಿತವಾಗಿ ಕ್ಷಮೆಯಾಚಿಸುವಂತೆ ಕೇಳಲಾಗಿದೆ.
ಇದನ್ನೂ ಓದಿ:ತಮಿಳು ಕಲಿಯುತ್ತಿರುವ ಕನ್ನಡದ ನಟಿ! ಕಾರಣ ಹೀಗಿದೆ ನೋಡಿ..
ಸಂದರ್ಶನವೊಂದರಲ್ಲಿ ಗಡ್ಕರಿ ಹೇಳಿದ್ದ ವಿಷಯಗಳನ್ನು ಮರೆಮಾಚಿ, ಅದನ್ನು ತಿರುಚಿ ನಂತರ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಅಸಲಿ ವಿಷಯಗಳನ್ನು ಮರೆಮಾಚಲಾಗಿದೆ ಎಂದು ಗಡ್ಕರಿ ವಕೀಲ ಹೇಳಿದ್ದಾರೆ.
ಮೊದಲು ನನ್ನ ಸಂದರ್ಶನದ ತಿಉಚಿದ ವೀಡಿಯೊವನ್ನು ಎಕ್ಸ್ ನಿಂದ ತೆಗೆದುಹಾರಬೇಕು. ನಂತರ ಮೂರು ದಿನಗಳಲ್ಲಿ ಲಿಖಿತ ಕ್ಷಮೆಯಾಚಿಸಬೇಕು ಎಂದು ನೋಟಿಸ್​ನಲ್ಲಿ ಒತ್ತಾಯಿಸಿದ್ದಾರೆ. ನೋಟಿಸ್ ಸ್ವೀಕರಿಸಿದ 24 ಗಂಟೆಗಳಲ್ಲಿ ಈ ರೀತಿ ಮಾಡದಿದ್ದರೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಇದಕ್ಕೆ ನೀವೇ ಹೊಣೆಯಾಗುತ್ತೀರಿ ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ.
ವೀಡಿಯೊದಲ್ಲಿದೆ?:ಕಾಂಗ್ರೆಸ್ ಹಂಚಿಕೊಂಡಿರುವ ವೀಡಿಯೋ ನಿತಿನ್ ಗಡ್ಕರಿ ಸಂದರ್ಶನವಾಗಿದ್ದು, ವಾಸ್ತವವಾಗಿ ಅವರು ದೇಶದ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾಗಿದೆ. ಅವರ ಸಂದರ್ಶನದ ಒಂದು ಸಣ್ಣ ಭಾಗವನ್ನು ಕಾಂಗ್ರೆಸ್​ ಪಕ್ಷ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಹಿಂದಿಯಲ್ಲಿ ಶೀರ್ಷಿಕೆ ನೀಡಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ಕಾಂಗ್ರೆಸ್, ‘ಇಂದು ಹಳ್ಳಿ, ಕಾರ್ಮಿಕರು ಮತ್ತು ರೈತರು ದುಃಖಿತರಾಗಿದ್ದಾರೆ. ಗ್ರಾಮಗಳಲ್ಲಿ ಉತ್ತಮ ರಸ್ತೆಗಳಿಲ್ಲ, ಕುಡಿಯಲು ನೀರಿಲ್ಲ, ಉತ್ತಮ ಆಸ್ಪತ್ರೆಗಳಿಲ್ಲ, ಉತ್ತಮ ಶಾಲೆಗಳಿಲ್ಲ ಎಂದು ಮೋದಿ ಸರ್ಕಾರ ಮತ್ತು ಸಚಿವ ಗಡ್ಕರಿ ವಿರುದ್ಧ ಆರೋಪಿಸಿ ಪೋಸ್ಟ್​ ಮಾಡಿದೆ.
ರಿಷಬ್ ಶೆಟ್ಟಿ, ಜೂ.ಎನ್​ಟಿಆರ್​, ಪ್ರಶಾಂತ್ ನೀಲ್ ಒಂದೇ ಕಡೆ.. ಏನಿದು ಕಥೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 12 =
Remember me
