ನವದೆಹಲಿ:ಬಿಹಾರ ವಿಧಾನಸಭೆಗೆ ವರ್ಷಾಂತ್ಯ ನಡೆಯಲಿರುವ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ನಿತೀಶ್​ಕುಮಾರ್ ಅವರನ್ನೇ ಎನ್​ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡುವ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹಸಿರು ನಿಶಾನೆ ತೋರಿದ್ದಾರೆ. ಈ ಮೂಲಕ ಯಾರು ಸಿಎಂ ಅಭ್ಯರ್ಥಿ ಆಗಲಿದ್ದಾರೆ ಎಂಬ ಗೊಂದಲಕ್ಕೆ ತೆರೆಬಿದ್ದಿದೆ.
ಬಿಹಾರದ ಪೆಟ್ರೋಲಿಯಂ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಪ್ರಮುಖ ಯೋಜನೆಗಳನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ಲೋಕಾರ್ಪಣೆ ಮಾಡಿ ಮಾತನಾಡಿದ ಮೋದಿ, ‘ನವಭಾರತ ಮತ್ತು ಹೊಸ ಬಿಹಾರದಲ್ಲಿ ನಿತೀಶ್ ದೊಡ್ಡ ಪಾತ್ರ ವಹಿಸಿದ್ದಾರೆ’ ಎಂದು ಶ್ಲಾಘಿಸಿದರು. ಅಭಿವೃಧಿಯಲ್ಲಿ ಬಿಹಾರ ಅನೇಕ ವರ್ಷಗಳಿಂದ ಹಿಂದುಳಿದಿತ್ತು. ರಾಜಕೀಯ, ಇಚ್ಛಾಶಕ್ತಿ ಕೊರತೆ ಅದಕ್ಕೆ ಕಾರಣಗಳು ಎಂದು ಪ್ರಧಾನಿ ವಿಶ್ಲೇಷಿಸಿದರು.ಇದನ್ನೂ ಓದಿ:ಗಾಲ್ವಾನ್​ ಸಂಘರ್ಷದಲ್ಲಿ ಹತ್ಯೆಯಾದ ಚೀನಾ ಯೋಧರ ಸಂಖ್ಯೆ 60ಕ್ಕೂ ಹೆಚ್ಚು; ಅಮೆರಿಕ ಮೂಲದಿಂದ ಸತ್ಯ ಬಯಲು…!
ಬಿಹಾರ ಎನ್​ಡಿಎಯಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿರುವುದರ ನಡುವೆಯೇ ನಿತೀಶ್​ರನ್ನು ಸಿಎಂ ಅಭ್ಯರ್ಥಿ ಎಂದು ಪ್ರಧಾನಿಯೇ ಬಿಂಬಿಸಿರುವುದು ಮಹತ್ವದ ವಿದ್ಯಮಾನವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಕೆಲ ದಿನಗಳ ಹಿಂದೆ ನಿತೀಶ್​ಕುಮಾರ್ ಹೆಸರನ್ನು ಅಂಗೀಕರಿಸಿದ್ದರು. ಕೆಲವು ಬಿಜೆಪಿ ನಾಯಕರೇ ನಿತೀಶ್ ಕುರಿತು ಗೊಣಗುತ್ತಿದ್ದರೆ ಎನ್​ಡಿಎ ಭಾಗವಾಗಿರುವ ರಾಮ್ ವಿಲಾಸ್ ಪಾಸ್ವಾನ್​ರ ಲೋಕ ಜನಶಕ್ತಿ ಪಕ್ಷ (ಎಲ್​ಜೆಪಿ), ಸಂಯುಕ್ತ ಜನತಾ ದಳದ ವಿರುದ್ಧವೇ ಸ್ಪರ್ಧಿಸುವ ಸುಳಿವು ನೀಡಿದ್ದು ಆಂತರಿಕ ಕಲಹವನ್ನು ಬೀದಿಗೆ ತಂದಿದೆ. ಒಂದು ಕಾಲದಲ್ಲಿ ಮೋದಿಯವರ ಕಡು ಎದುರಾಳಿಯಾಗಿದ್ದ ನಿತೀಶ್​ಕುಮಾರ್, 2013ರಲ್ಲಿ ಬಿಜೆಪಿ ಜೊತೆಗಿನ ನಂಟನ್ನು ಕಡಿದು ಕೊಂಡಿದ್ದರು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.
ಪಾರಾದೀಪ್-ಹಾಲ್ಡಿಯಾ-ದುರ್ಗಾಪುರ ತೈಲ ಕೊಳವೆ ಮಾರ್ಗದ ದುರ್ಗಾಪುರ-ಬಂಕಾ ವಿಭಾಗ ಮತ್ತು 2 ಎಲ್​ಪಿಜಿ ಬಾಟ್ಲಿಂಗ್ ಘಟಕಗಳನ್ನು ಪ್ರಧಾನಿ ಉದ್ಘಾಟಿಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಎಲ್​ಪಿಜಿ ಬೇಡಿಕೆಯನ್ನು ಪೂರೈಸಲು ಬಾಟ್ಲಿಂಗ್ ಘಟಕಗಳು ನೆರವಾಗಲಿವೆ. ಬಿಹಾರದ ಸ್ವಾವಲಂಬನೆಗೆ ಅದು ಪೂರಕವಾಗಲಿದೆ.
ಕಣ್ಣುಗುಡ್ಡೆಗಳಿಲ್ಲ, ಕೂದಲಿಲ್ಲದ ಚಿರಪರಿಚಿತವಾಗಿರುವ ಈ ಪ್ರಾಣಿ ಯಾವುದು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − two =
Remember me
