ಪಟನಾ: ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ನಾಯಕ ತೇಜಸ್ವಿ ಯಾದವ್​ ಅವರು ಮುಖ್ಯಮಂತ್ರಿ ನಿತೀಶ್​ ಕುಮಾರ್​ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿತೀಶ್​ ಕುಮಾರ್​ ಅವರಿಗೆ ಬಿಹಾರ ರಾಜ್ಯದ ಸಂಪೂರ್ಣ ಜವಾಬ್ದಾರಿ ಹೊರಲು ಸಾಧ್ಯವಿಲ್ಲ. ಇಲ್ಲಿ ಲಕ್ಷ ಜನರ ರಕ್ಷಣೆಗೆ ಕೇವಲ 77 ಪೊಲೀಸ್ ಸಿಬ್ಬಂದಿ ಎಂಬ ವ್ಯವಸ್ಥೆ ಇದೆ. ಖಾಲಿ ಇರುವ ಉದ್ಯೋಗವನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಇದೀಗ ನಮಗೊಂದು ಅವಕಾಶ ಕೊಟ್ಟರೆ ನಾವು ಎಲ್ಲ ಅವ್ಯವಸ್ಥೆಯನ್ನೂ ಸರಿಪಡಿಸುತ್ತೇವೆ ಎಂಬ ಭರವಸೆಯನ್ನು ಬಿಹಾರದ ಜನರಿಗೆ ಕೊಡುತ್ತಿದ್ದೇವೆ. ಸಿಎಂ ನಿತೀಶ್​ ಕುಮಾರ್​ ಅವರು 15 ವರ್ಷಗಳಲ್ಲಿ ಮಾಡಲಾಗದ್ದನ್ನು ನಾವು ಸಾಧಿಸುತ್ತೇವೆ. ಈ ಬಾರಿ ನಿತೀಶ್ ಕುಮಾರ್​ ಬೀಳ್ಕೊಡುಗೆ ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಹಾಲಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರವಿದ್ದು, ಈ ಬಾರಿಯ ಚುನಾವಣೆಯನ್ನೂ ಮೈತ್ರಿ ಮಾಡಿಕೊಂಡೇ ಎದುರಿಸುತ್ತಿವೆ. ಹಾಗೇ ತೇಜಸ್ವಿ ಯಾದವ್​ ಅವರು ಮಹಾಘಟ್​ಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಚುನಾವಣಾ ಪ್ರಚಾರದ ವೇಳೆ ನಿತೀಶ್​ ಕುಮಾರ್, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 10 ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ ಎಂದು ತೇಜಸ್ವಿ ಯಾದವ್​ ಭರವಸೆ ಕೊಟ್ಟಿದ್ದಾರೆ. ಆದರೆ ಬಿಹಾರದಲ್ಲಿ ಇದು ಸಾಧ್ಯವೇ ಇಲ್ಲ ಎಂದು ಸಿಎಂ ನಿತೀಶ್​ ಕುಮಾರ್​ ವ್ಯಂಗ್ಯವಾಡಿದ್ದಾರೆ.(ಏಜೆನ್ಸೀಸ್​)
ಯೂಟ್ಯೂಬ್​ ಮೂಲಕ ಬಾಬಾ ಕಾ ಢಾಬಾ ನೆರವಿಗೆ ಕರೆ ನೀಡಿದವನ ವಿರುದ್ಧವೇ ವಿಶ್ವಾಸ ವಂಚನೆ ಕೇಸ್​ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
