ದೆಹಲಿ:ಮುಂಬರುವ ಲೋಕಸಭೆ ಚುನಾವಣೆಗಾಗಿ 26 ವಿರೋಧ ಪಕ್ಷಗಳ ನಾಯಕರು ಸಭೆ ನಡೆಸಿ, ತಮ್ಮ ಮೈತ್ರಿಗೆ I.N.D.I.A. ಎಂಬ ಹೆಸರನ್ನು ಫೈನಲ್​​ ಮಾಡಿದ್ದರು. ಆದರೆ ಈ ಹೆಸರಿಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಹೆಸರಿಗೆ ತೀವ್ರವಾಗಿ ಆಕ್ಷೇಪಿಸಿದ್ದಾರೆ ಎಂದು ಹೇಳಲಾಗಿದೆ.ಇದನ್ನೂ ಓದಿ:VIDEO| ತಂದೆಯೊಂದಿಗೆ ದ್ವೇಷ: ಮಕ್ಕಳ ಪ್ರಾಣ ತೆಗೆಯಲು ಯತ್ನಿಸಿದ ಕಾರು ಚಾಲಕಮಂಗಳವಾರ ಬೆಂಗಳೂರಿನಲ್ಲಿ ನಡೆದ ಸಭೆಯ ನಂತರ ವಿರೋಧ ಪಕ್ಷಗಳು I.N.D.I.A.(Indian National Developmental Inclusive Alliance) ಎಂಬ ಹೆಸರನ್ನು ಹೆಸರನ್ನು ಘೋಷಿಸಿದ್ದವು. ಆದರೆ ವಿರೋಧ ಪಕ್ಷದ ಮೈತ್ರಿಯ ಹೆಸರಿನ ಬಗ್ಗೆ ಕಾಂಗ್ರೆಸ್ ಯಾವುದೇ ಚರ್ಚೆ ನಡೆಸಿಲ್ಲ. ಸಭೆಯಲ್ಲಿ ನಿತೀಶ್ ಕುಮಾರ್​​ರು ಈ ಮೈತ್ರಿಕೂಟಕ್ಕೆ I.N.D.I.A. ಭಾರತ ಎಂದು ಹೇಗೆ ಹೆಸರಿಸಬಹುದು ಎಂದು ಪ್ರಶ್ನಿಸಿದ್ದರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ನಿತೀಶ್ ಕುಮಾರ್​​ರ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ಈ ಮೈತ್ರಿಯನ್ನು ಹೈಜಾಕ್ ಮಾಡಿರುವ ರೀತಿ ಜೆಡಿಯು ಮತ್ತು ಆರ್‌ಜೆಡಿ ನಾಯಕರನ್ನು ಬೆಚ್ಚಿಬೀಳಿಸಿದೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆಯ ಮೈತ್ರಿಗಾಗಿ I.N.D.I.A. ಎಂಬ ಹೆಸರನ್ನು ಫೈನಲ್​​ ಮಾಡಿರುವ ವಿರೋಧ ಪಕ್ಷದ ಬಣವನ್ನು ಈ ಹಿಂದೆ ಯುಪಿಎ (ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್) ಎಂದು ಕರೆಯಲಾಗುತ್ತಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
