ಪಟನಾ/ನವದೆಹಲಿ:ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೂರು ವರ್ಷಗಳ ಅಂತರದಲ್ಲಿ ಎರಡನೇ ಬಾರಿಗೆ ರಾಜಕೀಯ ಬಣ ಬದಲಾಯಿಸಲು ಸಜ್ಜಾಗಿದ್ದಾರೆ. ಭಾನುವಾರ ಬೆಳಗ್ಗೆ ರಾಜೀನಾಮೆ ಸಲ್ಲಿಸುವುದು ಬಹುತೇಕ ಖಚಿತವಾಗಿದೆ ಎಂದು ನಿತೀಶ್ ಆಪ್ತ ಮೂಲಗಳು ತಿಳಿಸಿವೆ.
ಶನಿವಾರ ಬಿಹಾರ ರಾಜಕೀಯದಲ್ಲಿ ವ್ಯಾಪಕ ಚಟುವಟಿಕೆಗಳು ನಡೆದವು. ಇಂಡಿಯಾ ಜತೆಗಿನ ಮೈತ್ರಿಯನ್ನು ಹಿಂತೆಗೆದುಕೊಂಡು ಬಿಜೆಪಿ ನೇತೃತ್ವದ ಎನ್​ಡಿಎಗೆ ಮರಳುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಆರ್​ಜೆಡಿ ನಾಯಕರು ಸರಣಿ ಸಭೆಗಳನ್ನು ನಡೆಸಿ, ರ್ಚಚಿಸಿದರು. ರಾಜೀನಾಮೆ ಸಲ್ಲಿಸುವ ಮೊದಲು ನಿತೀಶ್ ಅವರು ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೀವ್ರ ರಾಜಕೀಯ ಚಟುವಟಿಕೆ ಹಿನ್ನೆಲೆಯಲ್ಲಿ ರಾಜ್ಯ ಸೆಕ್ರೆಟರಿಯೇಟ್​ನಂತಹ ಸರ್ಕಾರಿ ಕಚೇರಿಗಳನ್ನು ಭಾನುವಾರವೂ ತೆರೆದಿರಲು ಸೂಚನೆ ನೀಡಲಾಗಿದೆ. ರಾಜ್ಯಪಾಲರ ಕಚೇರಿ ಕೂಡ ಭಾನುವಾರ ಎಂದಿನಂತೆ ಕೆಲಸ ಮಾಡಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನದ ವೇಳೆಗೆ ಹೊಸ ಸರ್ಕಾರದ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ ಎಂದು ಪಕ್ಷದ ಕೆಲ ನಾಯಕರು ತಿಳಿಸಿದ್ದಾರೆ.
ಪತನದ ಅಂಚಿನಲ್ಲಿ ಮಹಾಮೈತ್ರಿ: ಬಿಹಾರದಲ್ಲಿ ಮಹಾಮೈತ್ರಿ ಸರ್ಕಾರ ಪತನದ ಅಂಚಿನಲ್ಲಿದೆ. ಕಾಂಗ್ರೆಸ್ ನಾಯಕತ್ವದ ಒಂದು ಬಣವು ಸಿಎಂ ನಿತೀಶ್ ಅವರನ್ನು ಪದೇ ಪದೆ ಅವಮಾನಿಸುತ್ತಿದೆ ಎಂದು ಜೆಡಿಯು ರಾಜಕೀಯ ಸಲಹೆಗಾರ ಮತ್ತು ವಕ್ತಾರ ಕೆ.ಸಿ.ತ್ಯಾಗಿ ದೆಹಲಿಯಲ್ಲಿ ಮಾಧ್ಯಮಕ್ಕೆ ತಿಳಿಸಿದರು. ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಇಂಡಿಯಾ ಪಕ್ಷಗಳ ಮೈತ್ರಿ ಬಹುತೇಕ ಮುಗಿದಿದೆ. ಹೊಸ ಸರ್ಕಾರ ಶೀಘ್ರವೇ ಅಸ್ತಿತ್ವಕ್ಕೆ ಬರಲಿದೆ ಎಂದರು. ಆದರೆ ಅವರು ಎನ್​ಡಿಎ ಸೇರುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲಿಲ್ಲ.
ಆರ್​ಜೆಡಿ ಸಚಿವರ ವಜಾ?ಪ್ರಸ್ತುತ ಬಿಹಾರ ಸರ್ಕಾರದ ಮೈತ್ರಿ ಪಾಲುದಾರ ಪಕ್ಷವಾದ ಆರ್​ಜೆಡಿ ಸಚಿವರನ್ನು ಭಾನುವಾರ ನಿತೀಶ್ ಕುಮಾರ್ ವಜಾ ಮಾಡಲಿದ್ದಾರೆ ಎನ್ನಲಾಗಿವೆ. ಬಿಹಾರದ ಬಿಜೆಪಿ ಶಾಸಕರು ಈಗಾಗಲೇ ನಿತೀಶ್ ಕುಮಾರ್​ಗೆ ಬೆಂಬಲ ಪತ್ರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ನಿತೀಶ್ ಒಲವು ಹೊಂದಿದ್ದಾರೆ. ಎನ್​ಡಿಎಗೆ ಮರಳುವ ಕುರಿತು ನಿತೀಶ್ ಕುಮಾರ್ ಅವರು ಗೃಹ ಸಚಿವ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಜತೆ ನೇರ ಮಾತುಕತೆ ನಡೆಸಿದ್ದಾರೆ.
ನಾಯಕರ ಸರಣಿ ಸಭೆಜೆಡಿಯುನ ಉನ್ನತ ನಾಯಕರು ಪಕ್ಷದ ಅಧ್ಯಕ್ಷರ ಅಧಿಕೃತ ನಿವಾಸದಲ್ಲಿ ಸಭೆ ನಡೆಸಿದರು. ಬಿಜೆಪಿಯೊಂದಿಗೆ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡನೆ, ಶಾಸಕರಿಂದ ಬೆಂಬಲ ಪತ್ರ ಪಡೆದುಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. ಮೈತ್ರಿಯನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ಆರ್​ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಪತ್ನಿ ರಾಬ್ರಿ ದೇವಿ ನಿವಾಸದಲ್ಲಿ ಬೆಂಬಲಿಗರು ಸಭೆ ನಡೆಸಿದರು. ಗೇಟ್​ಗಳ ಹೊರಗೆ ಪಕ್ಷದ ಮುಖಂಡರು ತಮ್ಮ ಮೊಬೈಲ್ ಫೋನ್​ಗಳನ್ನು ಠೇವಣಿ ಇಡುವಂತೆ ಸೂಚಿಸಲಾಗಿತ್ತು. ಕೆಲವು ಆರ್​ಜೆಡಿ ನಾಯಕರು ಹೊಸ ಸರ್ಕಾರ ರಚನೆಗೆ ಹಕ್ಕು ಸಾಧಿಸಲು ಒಲವು ತೋರುತ್ತಿದ್ದಾರೆ. ಎಂಟು ಶಾಸಕರ ಬೆಂಬಲವನ್ನು ಪಡೆದರೆ ಮಹಾಘಟಬಂಧನ್ ಬಹುಮತದ ಗಡಿ ದಾಟಲು ಸಾಧ್ಯವಾಗುತ್ತದೆ.
ಎಂದಿನಂತೆ ಇದ್ದ ನಿತೀಶ್ಸರ್ಕಾರ ಬದಲಾವಣೆಯ ಊಹಾಪೋಹಗಳ ನಡುವೆಯೂ ಸಿಎಂ ನಿತೀಶ್ ಕುಮಾರ್ ಎಂದಿನಂತೆ ಕೆಲಸ ನಿರ್ವಹಿಸಿದರು. ಪಟನಾದ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ನೂತನ ಅಗ್ನಿಶಾಮಕ ದಳದ ಘಟಕಕ್ಕೆ ಅವರು ಚಾಲನೆ ನೀಡಿದರು. ಪ್ರವಾಸೋದ್ಯಮ ಇಲಾಖೆಯಡಿ ದೇವಾಲಯಗಳ ಸೌಂದಯೀಕರಣ ಯೋಜನೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಿಸಿಎಂ ತೇಜಸ್ವಿ ಯಾದವ್ ಪಾಲ್ಗೊಂಡಿರಲಿಲ್ಲ. ಸ್ಥಳೀಯ ಸಂಸದರಾಗಿರುವ ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಭಾಗವಹಿಸಿದ್ದರು. ಇದು ಕೂಡ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ರಾಜ್ಯ ಬಿಜೆಪಿ ಸಭೆಪಟನಾದಲ್ಲಿ ಬಿಹಾರ ರಾಜ್ಯ ಬಿಜೆಪಿ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ. ಮಹಾಘಟಬಂಧನ್​ನಿಂದ ಹಿಂದೆ ಸರಿದಿರುವ ಜೆಡಿಯುಗೆ ಬೆಂಬಲ ನೀಡುವ ಬಗ್ಗೆ ಮತ್ತು ಅದರ ಸ್ವರೂಪ, ಷರತ್ತುಗಳ ಬಗ್ಗೆಯೂ ಚರ್ಚೆ ನಡೆಸಿದೆ. ಆದರೆ ಔಪಚಾರಿಕ ಘೊಷಣೆಯನ್ನು ಈಗಲೇ ಮಾಡದಿರಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಮೂರು ವರ್ಷಗಳ ಹಿಂದೆ ಎನ್​ಡಿಎ ತ್ಯಜಿಸಿದ ಸಂದರ್ಭದಲ್ಲಿ ನಿತೀಶ್ ಬಗ್ಗೆ ಮೃದು ಧೋರಣೆ ತಳೆಯದಂತೆ ಬಿಜೆಪಿ ಉನ್ನತ ನಾಯಕರು ಸೂಚನೆ ನೀಡಿದ್ದರು. ಈಗ ದೆಹಲಿಯಿಂದ ಅಧಿಕೃತ ಆದೇಶ ಬರುವ ವರೆಗೂ ಯಾವುದೇ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸದಿರಲು ರಾಜ್ಯ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ದೂರಾದ ತಂದೆಯಿಂದಾಗಿ ಶಾಲೆಯಲ್ಲಿ ನಿಂದನೆ: ಪುತ್ರನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ಸಾನಿಯಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
