ಮುಂಬೈ:ಎನ್​ಡಿಎ ಮೈತ್ರಿಕೂಟದ ಅಂಗ ಪಕ್ಷಗಳಾದ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾ ದಳ (ಯುನೈಟೆಡ್) (ಜೆಡಿಯು) ತನ್ನತ್ತ ಸೆಳೆಯಲು ವಿರೋಧ ಪಕ್ಷಗಳ ನೇತೃತ್ವದ ಇಂಡಿಯಾ ಬಣವು ಮುಂದಾಗಿದೆ. ನಿತೀಶ್ ಕುಮಾರ್‌ಗೆ ಉಪ ಪ್ರಧಾನಿ ಪಟ್ಟ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಆಮಿಷವನ್ನು ಅದು ಮುಂದೊಡ್ಡಿದೆ ಎಂದು ವರದಿಗಳು ಹೇಳಿವೆ.
ನಿತೀಶ್ ಕುಮಾರ್ ಅವರ ಜೆಡಿಯು ಪ್ರಸ್ತುತ 15 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಎನ್‌ಡಿಎ ಒಟ್ಟು 31 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಇಂಡಿಯಾ ಬ್ಲಾಕ್ 8 ರಲ್ಲಿ ಮುಂದಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಎನ್‌ಡಿಎ 40 ಸ್ಥಾನಗಳ ಪೈಕಿ 39 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡಿತ್ತು, ಜೆಡಿಯು 16 ಸ್ಥಾನಗಳನ್ನು ಗಳಿಸಿತ್ತು. ಎಲ್​ಜೆಪಿ 6 ಸ್ಥಾನಗಳನ್ನು ಪಡೆದುಕೊಂಡಿತ್ತು. ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಒಂದೇ ಒಂದು ಸ್ಥಾನ ಗೆಲ್ಲಲು ವಿಫಲವಾಗಿತ್ತು.
ಆದರೂ, 2014 ರ ಸಾರ್ವತ್ರಿಕ ಚುನಾವಣೆಗಳು ವಿಭಿನ್ನ ಸನ್ನಿವೇಶವನ್ನು ಪ್ರಸ್ತುತಪಡಿಸಿದವು. ಆ ಸಮಯದಲ್ಲಿ ಜೆಡಿಯು ಜತೆ ಮೈತ್ರಿ ಮಾಡಿಕೊಳ್ಳದ ಬಿಜೆಪಿ ಬಿಹಾರದಲ್ಲಿ 23 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅದರ ಮಿತ್ರ ಪಕ್ಷ ಎಲ್‌ಜೆಪಿ 6 ಸ್ಥಾನಗಳನ್ನು ಗೆದ್ದಿತ್ತು. ಏಕಾಂಗಿಯಾಗಿ ಸ್ಪರ್ಧಿಸಿದ್ದ ಜೆಡಿಯು 2 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು.
ಮಹಾಘಟಬಂಧನ ಭಾಗವಾದ ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದಿತ್ತು. ಈಗಿನ ಪರಿಸ್ಥಿತಿ 2019 ಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ.
ಷೇರು ಪೇಟೆಯಲ್ಲಿ ಗೂಳಿಯ ಆರ್ಭಟ: ಒಂದೇ ದಿನದಲ್ಲಿ 848 ಷೇರುಗಳು ಲೋವರ್ ಸರ್ಕ್ಯೂಟ್‌ ಹಿಟ್​

ಲೋವರ್​ ಸರ್ಕ್ಯೂಟ್​ ಹಿಟ್​: ಹಳಿ ತಪ್ಪಿದ ರೈಲ್ವೆ ಸಂಬಂಧಿ ಷೇರುಗಳ ಬೆಲೆ

ಎನ್‌ಟಿಪಿಸಿ, ಕೋಲ್ ಇಂಡಿಯಾ ಷೇರುಗಳಲ್ಲಿ 10% ಕುಸಿತ: ಹೂಡಿಕೆದಾರರಿಗೆ ಉತ್ತಮ ಖರೀದಿ ಅವಕಾಶ ಎನ್ನುತ್ತಾರೆ ತಜ್ಞರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + thirteen =
Remember me
