ನವದೆಹಲಿ:ಭಾರತದಲ್ಲಿ ಕರೊನಾ ವೈರಸ್ ಹಬ್ಬಿದ ಅತಿ ದೊಡ್ಡ ಕೇಂದ್ರಬಿಂದುವಾಗಿ ಗುರುತಿಸಿಕೊಂಡಿರುವ ತಬ್ಲಿಘಿ ಜಮಾತ್​ನ ಸದಸ್ಯರ ಮೇಲೆ ನಿಗಾ ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೇ ದೆಹಲಿ ಸಭೆಯಲ್ಲಿ ಪಾಲ್ಗೊಂಡಿದ್ದವರಿಗಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ತೀವ್ರ ಶೋಧ ನಡೆಸಿವೆ. ಧರ್ಮ ಸಭೆಯಲ್ಲಿ ಭಾಗಿಯಾಗಿದ್ದ ವಿದೇಶಿಯರನ್ನೂ ಗುರುತಿಸಿ ಸೂಕ್ತ ಪರೀಕ್ಷೆಗೊಳಪಡಿಸುವ ಜತೆಗೆ ಕೇಂದ್ರಕ್ಕೂ ಮಾಹಿತಿ ನೀಡಬೇಕೆಂದು ಕ್ಯಾಬಿನೆಟ್ ಸೆಕ್ರೆಟರಿ ರಾಜೀವ್ ಗೌಬಾ ಸೂಚನೆ ನೀಡಿದ್ದಾರೆ.
ಗೃಹ ಇಲಾಖೆಯ ಮಾಹಿತಿ ಪ್ರಕಾರವೇ ಜನವರಿಯಿಂದ ಮಾರ್ಚ್​ವರೆಗೆ ಜಮಾತ್​ನ ಸುಮಾರು 2100 ವಿದೇಶಿ ಸದಸ್ಯರು ಭಾರತಕ್ಕೆ ಬಂದು, ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಇವರೆಲ್ಲರ ಬಗ್ಗೆಯೂ ರಾಜ್ಯ ಸರ್ಕಾರಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಮಧ್ಯೆ ಜಮಾತ್​ನ ಮೌಲಾನಾ ಮಹಮ್ಮದ್ ಸಾದ್ ಮತ್ತು ಸಂಘಟನೆಯ ಇತರ 7 ಮಂದಿ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.
ಜಮಾತ್ ಸಭೆಯಲ್ಲಿ 2 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿರುವ ಬೆನ್ನಲ್ಲೇ 300ಕ್ಕೂ ಅಧಿಕ ಮಂದಿಗೆ ಕರೊನಾ ಸೋಂಕಿರುವುದು ದೃಢಪಟ್ಟಿದೆ. ದೆಹಲಿ ಪೊಲೀಸ್ ಮತ್ತು ಆರೋಗ್ಯಾಧಿಕಾರಿಗಳ ಸುಮಾರು 36 ಗಂಟೆಗಳ ಕಾರ್ಯಾಚರಣೆ ಬಳಿಕ ಸಭೆಯ ಸ್ಥಳದಿಂದ 2361 ಮಂದಿಯ ಸ್ಕಾ್ಯನಿಂಗ್ ನಡೆಸಿ, ಹೊರ ಕರೆತರಲಾಗಿದೆ. ಸಭೆಯಲ್ಲಿದ್ದವರು, ಅವರನ್ನು ಸಂರ್ಪಸಿದವರು ತಮ್ಮ ಅನಾರೋಗ್ಯದ ಕುರಿತ ಯಾವುದೇ ಮಾಹಿತಿ ಮುಚ್ಚಿಟ್ಟರೂ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಎಚ್ಚರಿಸಿದ್ದಾರೆ.
ವೀಸಾ ಉಲ್ಲಂಘನೆ ಸ್ಪಷ್ಟ
ಜಮಾತ್ ಧಾರ್ವಿುಕ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಿ ಧರ್ಮ ಪ್ರಚಾರಕರು ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಆಗಮಿಸುವ ಮೂಲಕ ವೀಸಾ ಕುರಿತ ಭಾರತ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿದೆ.
ಸಭೆಯಲ್ಲಿ ಪೌರತ್ವ ಚರ್ಚೆ
ಜಮಾತ್ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾನೂನು ಹಾಗೂ ಮುಸ್ಲಿಂ ಸಂಘಟನೆಗಳು ಒಗ್ಗೂಡಿ ಹೇಗೆ ಇದರ ವಿರುದ್ಧ ಹೋರಾಟ ನಡೆಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿರುವುದಾಗಿ ತಿಳಿದು ಬಂದಿದೆ.
ಬೆಳಕಿಗೆ ಬಂದಿದ್ದು
* ನಿಜಾಮುದ್ದೀನ್ ಪ್ರದೇಶ ಕರೊನಾ ಹಾಟ್​ಸ್ಪಾಟ್ ಆಗಲು ಸಭೆಗೆ ಬಂದಿದ್ದ ವಿದೇಶಿಗರೇ ಮೂಲ ಕಾರಣ
* ಫೆಬ್ರವರಿ 27ರಂದು ಮಲೇಷ್ಯಾದ ಕೌಲಾಲಂಪುರದಲ್ಲಿ ನಾಲ್ಕು ದಿನಗಳ ಕಾಲ ಇಂಥದ್ದೇ ಪ್ರವಚನ ಸಭೆ ನಡೆದಿತ್ತು
* ನೂರಾರು ಮಂದಿ ಅತಿ ಸಮೀಪದಲ್ಲಿ ನಮಾಜ್, ಆಹಾರ ಸೇವನೆ ಚಟುವಟಿಕೆಗಳನ್ನು ಮಾಡಿದ್ದರು.
ಅಜಿತ್ ದೋವಲ್ ಬರಬೇಕಾಯ್ತು!
ಕರೊನಾ ಆತಂಕದ ಹಿನ್ನೆಲೆಯಲ್ಲಿ ಬಂಗ್ಲೇವಾಲಿ ಮಸೀದಿಯನ್ನು ಸಂಘಟನೆಯ ಸದಸ್ಯರಿಂದ ಮುಕ್ತಗೊಳಿಸಿ ಎಂದು ಕೆಲ ದಿನಗಳ ಹಿಂದಷ್ಟೇ ದೆಹಲಿ ಪೊಲೀಸರು ಕೇಳಿಕೊಂಡಿದ್ದರು. ಆದರೆ ನಿಜಾಮುದ್ದಿನ್ ಮರ್ಕಜ್​ನ ಮೌಲಾನಾ ಸಾದ್ ಮಾತ್ರ ಪೊಲೀಸರ ಮನವಿಯನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಬದಲಿಗೆ, ತೀವ್ರ ಅನಾರೋಗ್ಯಕ್ಕೀಡಾದವರನ್ನು ಮಾತ್ರ ಕೋವಿಡ್-19 ಪರೀಕ್ಷೆಗೆ ಕಳಿಸಿದ್ದರು. ತೆಲಂಗಾಣದಲ್ಲಿ ಮೃತಪಟ್ಟವರು ಜಮಾತ್ ಸಭೆಯಲ್ಲಿದ್ದರು ಎಂಬುದು ಗೊತ್ತಾದ ಕೂಡಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​ರನ್ನು ಸಂರ್ಪಸಿದ ಗೃಹ ಸಚಿವ ಅಮಿತ್ ಷಾ, ತಕ್ಷಣವೇ ಜಮಾತ್ ಕಾರ್ಯಾಲಯಕ್ಕೆ ತೆರಳಿ ಮುಖಂಡರ ಮನವೊಲಿಸುವಂತೆ ಸೂಚಿಸಿದ್ದರು. ಮಾರ್ಚ್ 28-29ರ ಮಧ್ಯರಾತ್ರಿ ಸ್ಥಳಕ್ಕೆ ತೆರಳಿದ್ದ ದೋವಲ್, ಸಭೆಯಿಂದ ವೈರಸ್ ವ್ಯಾಪಕವಾಗಿ ಹಬ್ಬಿರುವುದನ್ನು ಮನಗಾಣಿಸಿ ತಕ್ಷಣವೇ ಜಮಾತ್ ಸದಸ್ಯರನ್ನು ಕ್ವಾರಂಟೈನ್​ಗೆ ಕಳುಹಿಸಲು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು.
ರಾಜ್ಯದಲ್ಲಿ 391 ಜನ ಪತ್ತೆ
ಬೆಂಗಳೂರು: ತಬ್ಲಿಘಿ ಜಮಾತ್ ಧಾರ್ವಿುಕ ಸಭೆಯಲ್ಲಿ ಭಾಗವಹಿಸಿದ್ದ 391 ಜನರನ್ನು ರಾಜ್ಯದಲ್ಲಿ ಪತ್ತೆ ಮಾಡಲಾಗಿದ್ದು, ಸದ್ಯ ಅವರನ್ನೆಲ್ಲ ಕ್ವಾರಂಟೈನ್​ನಲ್ಲಿಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯದಿಂದ ದೆಹಲಿಗೆ ಎಷ್ಟು ಜನ ಹೋಗಿದ್ದರೆಂಬುದನ್ನು ತಿಳಿಯಲು ಟ್ರಾವೆಲ್ ಹಿಸ್ಟರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ದೆಹಲಿಗೆ ಹೋಗಿ ವಾಪಸಾದವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಹಲವರು ರಾಜ್ಯಕ್ಕೆ ಬಂದ ಬಳಿಕ ಹೊರ ರಾಜ್ಯ , ಬೇರೆ ಜಿಲ್ಲೆಗೆ ವಲಸೆ ಹೋಗಿದ್ದಾರೆ.
ಅವರ ಶೋಧ ಕಾರ್ಯ ನಡೆದಿದೆ. ಹಲವರು ದೆಹಲಿಯಿಂದ ದೇಶದ ಬೇರೆ ಬೇರೆ ಭಾಗಕ್ಕೆ ಅಂದರೆ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಮ್ಮು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದು, ಇವರ ಶೋಧ ಕಾರ್ಯ ನಡೆದಿದೆ ಎಂದಿದ್ದಾರೆ.
ಧಾರ್ವಿುಕ ಸಭೆಯಲ್ಲಿ ಭಾಗವಹಿಸಿ ರಾಜ್ಯಕ್ಕಾಗಮಿಸಿದ 62 ವಿದೇಶಿಯರ ಪೈಕಿ 50 ಮಂದಿಯನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಉಳಿದ 12 ಮಂದಿ ತಮ್ಮ ದೇಶಗಳಿಗೆ ವಾಪಸ್ ತೆರಳಿದ್ದಾರೆ. ಇನ್ನೂ ಹಲವರು ಆ ಸಭೆಯಲ್ಲಿ ಭಾಗವಹಿಸಿರುವ ಬಗ್ಗೆ ಶೋಧನೆ ನಡೆದಿದೆ.
ಪೊಲೀಸರ ಹುಡುಕಾಟ
ನಿಜಾಮುದ್ದೀನ್ ಪ್ರಕರಣದಿಂದ ರಾಜ್ಯದ ಜನರು ಭಯಪಡುವ ಅಗತ್ಯವಿಲ್ಲ. ಸಂಯಮದಿಂದ ಇರಬೇಕು. ಸರ್ಕಾರ ಕೂಡಲೇ ಕ್ರಮ ಕೈಗೊಂಡಿದೆ. ಸಭೆಗೆ ಹೋಗಿದ್ದವರು ದಯವಿಟ್ಟು ನೀವೇ ಬಂದು ಚೆಕ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತೇವೆ. ಸಮುದಾಯದ ಮುಖಂಡರು ಇದಕ್ಕೆ ಸಹಕಾರ ಕೊಡಬೇಕು. ಕೇಂದ್ರ ಸರ್ಕಾರ ನಿಜಾಮುದ್ದೀನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವರು ಹೇಳಿದ್ದಾರೆ.
ಸೋಂಕಿತರೀಗ 110
* ಬುಧವಾರ ಒಂದೇ ದಿನ ರಾಜ್ಯದಲ್ಲಿ 9 ಪ್ರಕರಣ
ಬೆಂಗಳೂರು: ರಾಜ್ಯದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ 110 ತಲುಪಿದೆ. ಬುಧವಾರ ಒಂದೇ ದಿನ ಹೊಸದಾಗಿ 9 ಜನರಲ್ಲಿ ಸೋಂಕು ದೃಢಪಟ್ಟಿದೆ. ಐಸೋಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ರೋಗಿ ಗುಣಮುಖವಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 9 ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಮೂವರು ಮೃತಪಟ್ಟಿದ್ದಾರೆ.
ಯಾರೆಲ್ಲ ದೆಹಲಿ ಸಭೆಗೆ ಹೋಗಿದ್ದರೋ ಅಂಥವರು ಸ್ವಯಂ ಪ್ರೇರಿತವಾಗಿ ಮುಂದೆ ಬಂದಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ಎಲ್ಲರೂ ಸಹಕಾರ ಕೊಡಬೇಕು.
| ಬಿ.ಎಸ್.ಯಡಿಯೂರಪ್ಪ ಸಿಎಂ
ದೆಹಲಿಗೆ ಹೋದವರು
ಸರ್ಕಾರಕ್ಕೆ ಸಿಕ್ಕ ಮಾಹಿತಿ ಪ್ರಕಾರ ಮೈಸೂರು-45, ಚಾಮರಾಜ ನಗರ- 12, ಗದಗ-9, ಹಾವೇರಿ- 13, ಬಳ್ಳಾರಿ-12, ದಕ್ಷಿಣ ಕನ್ನಡ -12, ಬೆಳಗಾವಿ -62, ಯಾದಗಿರಿ -5, ಉತ್ತರ ಕನ್ನಡ -5, ಕಲಬುರಗಿ -19, ವಿಜಯಪುರ -10, ಚಿತ್ರದುರ್ಗ-4, ಹುಬ್ಬಳ್ಳಿ-30, ಬಾಗಲಕೋಟೆಯಿಂದ 19 ಜನ ದೆಹಲಿಗೆ ಹೋಗಿ ಬಂದಿದ್ದಾರೆ. ಕೊಪ್ಪಳ ಜಿಲ್ಲೆಯ 14, ರಾಯ ಚೂರಿನ 6, ಶಿವಮೊಗ್ಗದ ತೀರ್ಥ ಹಳ್ಳಿಯ 6 ಮಂದಿ, ಅವರ ಜತೆ ಸಂಪರ್ಕದಲ್ಲಿರುವ 14 ಜನರನ್ನು ಕ್ವಾರಂಟೈನ್ ಒಳಪಡಿಸಲಾಗಿದೆ. ಇವರೆಲ್ಲ ವಿವಿಧ ದಿನಾಂಕಗಳಲ್ಲಿ ದೆಹಲಿಯಲ್ಲಿದ್ದರೂ, ಧಾರ್ವಿುಕ ಸಭೆಯಲ್ಲಿ ಪಾಲ್ಗೊಂಡಿಲ್ಲ. ಆದರೂ ಆ ಪ್ರದೇಶದಲ್ಲಿ ಓಡಾಡಿದ್ದರಿಂದ ಅವರ ಮೇಲೂ ನಿಗಾ ಇಡಲಾಗಿದೆ.
VIDEO| ಕರೊನಾದಿಂದಾಗಿ ಪೆಂಗ್ವಿನ್​-ತಿಮಿಂಗಿಲಗಳ ಭೇಟಿ: ಮೌನ ಸಂಭಾಷಣೆಯಲ್ಲೇ ಉಭಯ ಕುಶಲೋಪರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
