ಗುವಾಹಟಿ:ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಶಾಸಕರಿಗೆ ಇದ್ದ ಎರಡು ಗಂಟೆಗಳ ವಿರಾಮವನ್ನು ಅಸ್ಸಾಂ ವಿಧಾನಸಭೆ ಶುಕ್ರವಾರ ರದ್ದು ಮಾಡಿದೆ. ಇನ್ನು ಮುಂದೆ ಮುಸ್ಲಿಂ ಶಾಸಕರಿಗೆ ಶುಕ್ರವಾರ ಪ್ರಾರ್ಥನೆಗೆ 2 ಗಂಟೆಗಳ ವಿರಾಮ ಇರುವುದಿಲ್ಲ.
ಇದನ್ನೂ ಓದಿ:ಹೊಸಕೋಟೆಯಲ್ಲಿ ನಾಡಬಾಂಬ್ ಸ್ಫೋಟ; ಮಗ ಸಾವು, ತಂದೆ ಗಂಭೀರ
ಸದನದ ಕಲಾಪವನ್ನು ಇತರ ದಿನಗಳಂತೆ ಶುಕ್ರವಾರವೂ ಮುಂದುವರಿಸಲು ವಿಧಾನಸಭೆ ನಿಯಮಗಳ ಸಮಿತಿ ಇಂದು ನಿರ್ಣಯವನ್ನು ಅಂಗೀಕರಿಸಿದೆ. ಮುಸ್ಲಿಂ ಶಾಸಕರು ನಮಾಜ್ ಪ್ರಾರ್ಥನೆಗೆ ಹಾಜರಾಗಲು ಅಸ್ಸಾಂ ವಿಧಾನಸಭೆಯನ್ನು ಶುಕ್ರವಾರದಂದು ಎರಡು ಗಂಟೆಗಳ ಕಾಲ ಮುಂದೂಡಲಾಗುತ್ತಿತ್ತು.
ಅಸ್ಸಾಂ ಶಾಸಕಾಂಗ ಸಭೆ ರಚನೆಯಾದಾಗಿನಿಂದ, ಮುಸ್ಲಿಂ ಶಾಸಕರಿಗೆ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುವಂತೆ ಶುಕ್ರವಾರ ವಿಧಾನಸಭೆಯ ಅಧಿವೇಶನವನ್ನು ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗುತ್ತಿತ್ತು. ಮಧ್ಯಾಹ್ನದ ಊಟದ ನಂತರದ ಅಧಿವೇಶನದ ಕಲಾಪವನ್ನು ಪುನರಾರಂಭಿಸುತ್ತಿತ್ತು.ಈ ಹೊಸ ನಿರ್ಧಾರದಿಂದ ಸದನದ ಉತ್ಪಾದಕತೆ ಹೆಚ್ಚಲಿದೆ ಎಂದು ಅಸ್ಸಾಂ ಸಿಎಂ ಹಿಮಂತಾ ಬಿಸ್ವಾ ಶರ್ಮಾ ಹೇಳಿದ್ದಾರೆ.
2 ಗಂಟೆಗಳ ಜುಮಾ ವಿರಾಮವನ್ನು ರದ್ದು ಮಾಡುವ ಮೂಲಕ ಅಸ್ಸಾಂ ವಿಧಾನಸಭೆಯು ಉತ್ಪಾದಕತೆಗೆ ಆದ್ಯತೆ ನೀಡಿದೆ. ಅಲ್ಲದೆ ವಸಾಹತು ಕಾಲದ ಆಚರಣೆಯನ್ನು ತಳ್ಳಿ ಹಾಕಿದೆ. ಈ ಪದ್ಧತಿಯನ್ನು ಮುಸ್ಲಿಂ ಲೀಗ್​ನ ಸೈಯದ್ ಸಾದುಲ್ಲಾ ಅವರು 1937ರಲ್ಲಿ ಪ್ರಾರಂಭಿಸಿದ್ದರು. ಈ ನಿರ್ಧಾರ ತೆಗೆದುಕೊಳ್ಳಲು ಕಾರಣರಾದ ಸ್ಪೀಕರ್ ಬಿಸ್ವಜಿತ್ ಡೈಮುರಿ ಹಾಗೂ ನಮ್ಮ ಪಕ್ಷದ ಶಾಸಕರಿಗೆ ಕೃತಜ್ಱತೆ ಸಲ್ಲಿಸುತ್ತೇನೆ ಎಂದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮ ಎಕ್ಸ್‌ನಲ್ಲಿ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.
Champai Soren: ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌ ಬಿಜೆಪಿ ಸೇರ್ಪಡೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
