ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಕಾಶ್ಮೀರ ಭಾಗದಲ್ಲಿರುವ ತ್ರಾಲ್​ ಪ್ರದೇಶದಲ್ಲಿ ಅಂದಾಜು 3 ದಶಕಗಳ ಬಳಿಕ ಹಿಜ್ಬುಲ್​ ಮುಜಾಹಿದ್ದೀನ್​ ಭಯೋತ್ಪಾದನೆ ಸಂಘಟನೆಯ ಉಗ್ರರಿಂದ ಮುಕ್ತವಾಗಿದೆ.
ಈ ವಿಷಯವನ್ನು ತಿಳಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಶುಕ್ರವಾರ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾಪಡೆ ಸಿಬ್ಬಂದಿ ಹಿಜ್ಬುಲ್​ ಮುಜಾಹಿದ್ದೀನ್​ ಸಂಘಟನೆಯ ಮೂವರು ಉಗ್ರರನ್ನು ಹೊಡೆದುರುಳಿಸಿದರು. ಇದಾದ ನಂತರದಲ್ಲಿ ತ್ರಾಲ್​ ಹಿಜ್ಬುಲ್​ ಉಗ್ರರರಿಂದ ಮುಕ್ತವಾದಂತಾಗಿದೆ. 1989ರ ನಂತರದಲ್ಲಿ ಇದೇ ಮೊದಲ ಬಾರಿಗೆ ಈ ಪ್ರದೇಶದಲ್ಲಿ ಉಗ್ರರು ಇಲ್ಲದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಯ ಪ್ರಭಾವಿ ಉಗ್ರನಾಗಿದ್ದ ಬುರ್ಹಾನ್​ ವಾನಿ ತ್ರಾಲ್​ ಮೂಲದವನಾಗಿದ್ದ. ಈತನನ್ನು ಭದ್ರತಾಪಡೆ ಸಿಬ್ಬಂದಿ ಕೆಲವರ್ಷಗಳ ಹಿಂದೆ ಹೊಡೆದುರುಳಿಸಿದ್ದರು.
ಇದನ್ನೂ ಓದಿ:ಪ್ಯಾಂಗಾಂಗ್​ ತ್ಸೊ ಸರೋವರದ ಬಳಿ ಹೆಲಿಪ್ಯಾಡ್​ ನಿರ್ಮಾಣ, ಯುದ್ಧಕ್ಕೆ ಸಜ್ಜಾಗುತ್ತಿದೆಯಾ ಜಿನ್​ಪಿಂಗ್​ ಸೇನೆ?
ಕಳೆದ ಕೆಲವು ತಿಂಗಳಿನಿಂದ ಭದ್ರತಾಪಡೆ ಸಿಬ್ಬಂದಿ ದಕ್ಷಿಣ ಕಾಶ್ಮೀರದಲ್ಲಿ ಕಾರ್ಯಾಚರಣೆಯನ್ನು ಹೆಚ್ಚಿಸಿದ್ದಾರೆ. ಜೂನ್​ನಲ್ಲಿ ಇದುವರೆಗೂ ನಡೆದಿರುವ 12ಕ್ಕೂ ಹೆಚ್ಚು ಕಾರ್ಯಾಚರಣೆಯಲ್ಲಿ 35 ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ.
ಈ ತಿಂಗಳಲ್ಲಿ ಹಲವು ಯಶಸ್ವಿ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ. ಪ್ರತಿಯೊಂದು ಕಾರ್ಯಾಚರಣೆಯೂ ಅತ್ಯಂತ ಸುಗಮವಾಗಿ ಸಾಗಿದವು. ಉಗ್ರರನ್ನು ಹತ್ಯೆ ಮಾಡುವುದರಿಂದ ನಮಗೆ ಸಂತೋಷವಾಗುವುದಿಲ್ಲ. ಆದರೆ, ಶಸ್ತ್ರಸಜ್ಜಿತನಾದ ವ್ಯಕ್ತಿ ಎಂದಿಗೂ ಸಮಾಜಕ್ಕೆ ಘಾತುಕನೇ ಆಗಿರುತ್ತಾನೆ. ಆದ್ದರಿಂದ, ನಾವು ಅವರನ್ನು ಹತ್ಯೆ ಮಾಡಬೇಕಾಗುತ್ತದೆ. ಎಲ್ಲಕ್ಕಿಂತ ಸಂತೋಷದ ವಿಷಯ ಎಂದರೆ, ಇತ್ತೀಚೆಗೆ ಈ ಭಾಗದಲ್ಲಿ ಉಗ್ರರ ನೇಮಕಾತಿಯೇ ಇಲ್ಲವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್​ನ ಡಿಜಿ ದಿಲ್​ಬಾಗ್​ ಸಿಂಗ್​ ಹೇಳಿದ್ದಾರೆ.
ಸುಶಾಂತ್​, ಟಿಕ್​ಟಾಕ್​ ಸ್ಟಾರ್​ ಸಿಯಾ ಆತ್ಮಹತ್ಯೆಗೂ ಸಂಬಂಧವಿದೆಯಾ? ಪೊಲೀಸರಿಗೇಕೆ ಸಂಶಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − 1 =
Remember me
