ಅಯೋಧ್ಯೆ:ದೇಶದಲ್ಲಿ ಕರೊನಾ ಸೋಂಕಿನ ಸಂಖ್ಯೆ ಹೆಚ್ಚಳವಾಗಿದೆ. ಸೋಂಕಿತರ ಆರೋಗ್ಯದ ದೃಷ್ಟಿಯಿಂದ ಪಟಾಕಿ ಸಿಡಿಸದಿರುವುದು ಒಳ್ಳೆಯದು. ಈ ವರ್ಷದ ದೀಪಾವಳಿಗೆ ಪಟಾಕಿ ಸಿಡಿಸಬೇಡಿ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ಅದೇ ನಿಟ್ಟಿನಲ್ಲಿ ಹಲವು ರಾಜ್ಯ ಸರ್ಕಾರಗಳು ಕೂಡ ಪಟಾಕಿಗೆ ನಿರ್ಬಂಧ ಹೇರಿವೆ. ಆದರೆ ಈ ರಾಜ್ಯದಲ್ಲಿ ಪಟಾಕಿಗೆ ನಿರ್ಬಂಧವಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಿಬಿಟ್ಟಿದ್ದಾರೆ. ಪಟಾಕಿ ಹೊಡೆದು ಸಂಭ್ರಮಿಸಿ ಎಂದು ಸ್ವತಃ ಮುಖ್ಯಮಂತ್ರಿಯೇ ಕರೆ ನೀಡಿದ್ದಾರೆ.
ಇದನ್ನೂ ಓದಿ:ವಿವಿಧ ಬೇಡಿಕೆ ಈಡೇರಿಕೆಗೆ ಪಟ್ಟು, ಜಿಲ್ಲಾಡಳಿತ ಭವನದ ಎದುರು ಅಂಗನವಾಡಿ ನೌಕರರ ಪ್ರತಿಭಟನೆ
ಮಧ್ಯಪ್ರದೇಶದಲ್ಲಿ ಪಟಾಕಿ ಬ್ಯಾನ್​ ಇಲ್ಲ ಎಂದು ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ. ಚೀನಾದ ಪಟಾಕಿಯನ್ನು ಸಿಡಿಸಬೇಡಿ. ನಾವು ಎಂದಿಗೂ ಸಂತೋಷವನ್ನು ನಿರ್ಬಂಧಿಸಲಾಗದು. ಭಗವಾನ್​ ಶ್ರೀ ರಾಮ ಅಯೋಧ್ಯೆಗೆ ಮರಳಿದ್ದಾನೆ. ಹಾಗಾಗಿ ಲಘು ಪಟಾಕಿ ಸಿಡಿಸಿ ಮತ್ತು ಈ ವರ್ಷದ ದೀಪಾವಳಿಯನ್ನು ಆಡಂಭರದಿಂದ ಆಚರಿಸಿ ಎಂದು ಅವರು ಟ್ವಿಟ್ಟರ್​ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಕಿಚ್ಚನ ‘ಫ್ಯಾಂಟಮ್​’ ಚಿತ್ರಕ್ಕೆ ಮತ್ತೊಬ್ಬ ಪ್ರೊಡ್ಯೂಸರ್ ಬಂದ್ರು
ಎಲ್ಲ ರಾಜ್ಯಗಳು ಪಟಾಕಿ ನಿರ್ಬಂಧದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ ಮಧ್ಯಪ್ರದೇಶದಲ್ಲಿ ಇನ್ನೂ ಏಕೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಜನಸಾಮಾನ್ಯರೊಬ್ಬರು ಟ್ವಿಟ್ಟರ್​ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಚೌಹಾಣ್​, ಪಟಾಕಿಗೆ ನಿರ್ಬಂಧವಿಲ್ಲ ಎನ್ನುವುದನ್ನು ಸ್ಪಷ್ಟೀಕರಿಸಿದ್ದಾರೆ. (ಏಜೆನ್ಸೀಸ್​)
मध्यप्रदेश ख़ुशियों का प्रदेश है। यहाँ पर हम ख़ुशियों पर कभी भी किसी तरह का प्रतिबंध नहीं लगाते। 😊
प्रदेश में पटाखों पर कोई प्रतिबंध नहीं है। हाँ, लेकिन चीनी पटाखों पर प्रतिबंध ज़रूर है।
आप भगवान राम के अयोध्या लौटने की ख़ुशी मनाये, पटाखे जलाये एवं धूम-धाम से दिवाली मनाये! 🙏🏽https://t.co/VjVt9QClG5
— Shivraj Singh Chouhan (@ChouhanShivraj)November 9, 2020

ಊಟ ಕೊಡದಿದ್ದರೆ ಅರೆಸ್ಟ್ ಮಾಡಿಬಿಡುತ್ತೇನೆ! ಬಯಲಾಯ್ತು ಖತರ್ನಾಕ್​ ಕಳ್ಳಿಯ ಅಸಲಿಯತ್ತು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty + 11 =
Remember me
