ನವದೆಹಲಿ:ಕೇಂದ್ರ ಸರ್ಕಾರ ಈ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿರುವ 26 ಮಸೂದೆಗಳ ಪೈಕಿ ಬಹುನಿರೀಕ್ಷಿತ ‘ದ ಕ್ರಿಪ್ಟೋ ಕರೆನ್ಸಿ ಆಂಡ್ ರೆಗ್ಯುಲೇಷನ್ ಆಫ್ ಡಿಜಿಟಲ್ ಕರೆನ್ಸಿ ಬಿಲ್, 2021’ ವಿಚಾರ ಈಗ ವ್ಯಾಪಕವಾಗಿ ಚರ್ಚೆಗೆ ಒಳಗಾಗಿದೆ. ಈ ಮಸೂದೆಯ ಪೂರ್ಣ ಅಂಶಗಳಿನ್ನೂ ಬಹಿರಂಗವಾಗಿಲ್ಲ.
ಸದ್ಯದ ಬಹಿರಂಗವಾಗಿರುವ ಮಾಹಿತಿ ಪ್ರಕಾರ, ಬಿಟ್​ಕಾಯಿನ್ ನಿಷೇಧ ಮಾಡುವ ಇರಾದೆ ಸರ್ಕಾರಕ್ಕೆ ಇಲ್ಲ. ಆದರೆ ಖಾಸಗಿ ಕ್ರಿಪ್ಟೋ ಕರೆನ್ಸಿಗಳ ಮೇಲೆ ನಿಷೇಧ ಹೇರುವ ಸಾಧ್ಯತೆ ಇದೆ. ಅಲ್ಲದೆ, ಕ್ರಿಪ್ಟೋ ಕರೆನ್ಸಿಗಳ ವಹಿವಾಟುಗಳನ್ನು ನಿಯಮಗಳ ಚೌಕಟ್ಟಿನೊಳಗೆ ತರುವ ನಿರೀಕ್ಷೆ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುವ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಪೂರಕವಾದ ಚೌಕಟ್ಟು ರೂಪಿಸುವುದು ಕೇಂದ್ರದ ಉದ್ದೇಶ.
ಡಿಜಿಟಲ್ ಕರೆನ್ಸಿಗಳ ಅಧ್ಯಯನ ಮತ್ತು ಕ್ರಿಪ್ಟೋ ಕಾಯಿನ್ಸ್ ಸಂಬಂಧ ನಿರ್ದಿಷ್ಟ ಕ್ರಮಗಳನ್ನು ಶಿಫಾರಸು ಮಾಡುವುದಕ್ಕಾಗಿ ಕೇಂದ್ರ ಸರ್ಕಾರ ಈ ಹಿಂದೆ ಅಂತರ್ ಸಚಿವಾಲಯ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯ ಶಿಫಾರಸು ಆಧರಿಸಿಯೇ ಈಗ ಮಸೂದೆ ಸಿದ್ಧವಾಗಿದೆ. ಸರ್ಕಾರ ಚಲಾವಣೆಗೆ ತಂದ ವರ್ಚುವಲ್ ಕರೆನ್ಸಿಗಳ ಹೊರತು ಬೇರಾವುದೇ ಖಾಸಗಿ ಕ್ರಿಪ್ಟೋ ಕರೆನ್ಸಿಯೂ ಕಾನೂನಿನ ಮಾನ್ಯತೆ ಹೊಂದಿರಬಾರದು. ಅಂಥವುಗಳ ವಹಿವಾಟನ್ನು ನಿಷೇಧಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದ ಅಂಶಗಳಲ್ಲಿ ಉಲ್ಲೇಖವಾಗಿದೆ.
ಸಾರಾಸಗಟು ಬ್ಯಾನ್ ಇಲ್ಲ:ಬಿಟ್​ಕಾಯಿನ್​ನ ಮಾರುಕಟ್ಟ ಮೌಲ್ಯ 1 ಲಕ್ಷ ಕೋಟಿ ಡಾಲರ್ ಇದ್ದು, ಇತರೆ ಎಲ್ಲ ಕ್ರಿಪ್ಟೋ ಕರೆನ್ಸಿಗಳಿಗಿಂತ ಹೆಚ್ಚು ಮೌಲ್ಯ ಹೊಂದಿದೆ. ಭಾರತದಲ್ಲಿ ಈಗ ಮಸೂದೆ ಮಂಡನೆಯಾಗುತ್ತಿರುವುದಾದರೂ, ಕ್ರಿಪ್ಟೋ ಕರೆನ್ಸಿಗಳನ್ನು ಸಾರಾಸಗಟಾಗಿ ನಿಷೇಧಿಸುವುದಕ್ಕೆ ಭಾರತ ಸರ್ಕಾರದಿಂದಲೂ ಸಾಧ್ಯವಿಲ್ಲ ಎನ್ನುತ್ತಾರೆ ಪರಿಣತರು.
ಸದ್ಯ ಲೆಕ್ಕವಿಲ್ಲದಷ್ಟು ಕ್ರಿಪ್ಟೋ ಕರೆನ್ಸಿಗಳಿದ್ದು, ನಿತ್ಯವೂ ಹೊಸ ಹೊಸತು ಹುಟ್ಟುತ್ತಲೇ ಇವೆ. ಇದು ಬಹಳ ಕಾಲ ಇರಲ್ಲ. 17ನೇ ಶತಮಾನದಲ್ಲಿ ನೆದರ್ಲೆಂಡ್​ನಲ್ಲಿ ಟುಲಿಪ್ ಮೇನಿಯಾ ಹುಟ್ಟಿಕೊಂಡಂತೆ ಈಗ ಕ್ರಿಪ್ಟೋ ಮೇನಿಯಾ ಕಾಣಿಸಿದೆ. ಮುಂದೆ ನಿಯಮ ಬಿಗಿಯಾದ ನಂತರದಲ್ಲಿ 6,000ದಷ್ಟು ಕ್ರಿಪ್ಟೋಗಳಷ್ಟೆ ಉಳಿದುಕೊಳ್ಳಬಹುದು.
| ರಘುರಾಂ ರಾಜನ್ಆರ್​ಬಿಐನ ಮಾಜಿ ಗವರ್ನರ್
ಪ್ರಧಾನಿ ಮೋದಿ ಹೇಳಿದ್ದೇನು?:ಕ್ರಿಪ್ಟೋ ಕರೆನ್ಸಿ ಕರ್ನಾಟಕದಲ್ಲಿ ಭಾರಿ ಸದ್ದು ಗದ್ದಲ ಎಬ್ಬಿ ಸುದ್ದಿಂತೆಯೇ ಗೃಹ ಸಚಿವಾಲಯ ಆರ್​ಬಿಐ ಉನ್ನನ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಪ್ರಧಾನಿ ಮೋದಿ, ಬಿಟ್​ಕಾಯಿನ್ ಅಥವಾ ಯಾವುದೇ ಕ್ರಿಪ್ಟೋ ಕರೆನ್ಸಿ ಇರಬಹುದು, ಅವುಗಳು ಅಪರಾಧ ಜಗತ್ತಿನ ವಶವಾಗದಂತೆ ನೋಡಿಕೊಳ್ಳಬೇಕು. ನಮ್ಮ ಯುವ ಜನರು ಅದರ ಸುಳಿಗೆ ಸಿಲುಕಿ ನಾಶವಾಗಬಾರದು. ಈ ನಿಟ್ಟಿನಲ್ಲಿ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳು ಕ್ರಮ ತೆಗೆದುಕೊಳ್ಳಬೇಕಾದ್ದು ಮುಖ್ಯ. ಎಲ್ಲರೂ ಜತೆಗೆ ರ್ಚಚಿಸಿ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡೇ ಇದನ್ನು ನಿಯಂತ್ರಿಸುವ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದವಾರ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿ ದೆಹಲಿಯಲ್ಲಿ ಸಭೆ ನಡೆಸಿ ತಜ್ಞರ ಅಭಿಪ್ರಾಯ ಸಂಗ್ರಹಿಸಿತ್ತು. ಸಮಿತಿ ತನ್ನ ಶಿಫಾರಸುಗಳನ್ನು ಕೇಂದ್ರಕ್ಕೆ ನೀಡಿದ್ದು, ಈ ಅಂಶಗಳನ್ನು ಕೂಡ ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಕಾಯ್ದೆಯ ಉದ್ದೇಶ ಏನು?:ಕ್ರಿಪ್ಟೋ ಕರೆನ್ಸಿ ಮೂಲಕ ಕಪು್ಪಹಣ ಹಾಗೂ ಹವಾಲಾ ವ್ಯವಹಾರ ನಡೆಯುತ್ತಿರುವುದಕ್ಕೆ ತಡೆ ಮತ್ತು ಆದಾಯ ತೆರಿಗೆ ಇಲಾಖೆ ಹಾಗೂ ಸರ್ಕಾರದ ಕೆಲ ನಿಯಂತ್ರಣ ಸಂಸ್ಥೆಗಳ ಕಣ್ಣು ತಪ್ಪಿಸಿ ನಡೆಯತ್ತಿದ್ದ ವ್ಯವಹಾರ ನಿಷೇಧ.
ಮೌಲ್ಯ 3 ಲಕ್ಷ ಕೋಟಿ ಡಾಲರ್:ಕ್ರಿಪ್ಟೊ ಕರೆನ್ಸಿಗಳ ಜಾಗತಿಕ ಮಾರುಕಟ್ಟೆ ಮೌಲ್ಯವು ಈ ತಿಂಗಳ ಆರಂಭದಲ್ಲಿ 3 ಲಕ್ಷ ಕೋಟಿ ಡಾಲರ್ ತಲುಪಿದೆ. ವಿಶೇಷವಾಗಿ ಭಾರತದಲ್ಲಿ ಈ ಮಾರುಕಟ್ಟೆ ಹಚ್ಚಿನ ವೃದ್ಧಿ ಕಂಡಿದೆ. 2030ರ ವೇಳೆಗೆ ಕ್ರಿಪ್ಟೊ ಕರೆನ್ಸಿ ಮಾರುಕಟ್ಟೆ ಮೌಲ್ಯ 241 ದಶಲಕ್ಷ ಡಾಲರ್ ತಲುಪಲಿದೆ. 2026ಕ್ಕೆ ಜಾಗತಿಕ ಮಟದಲ್ಲಿ ಭಾರತದ ಮಾರುಕಟ್ಟೆ ಮೌಲ್ಯ 2.3 ಶತಕೋಟಿ ಆಗಿರಲಿದೆ ಎಂದು ವರದಿ ಹೇಳಿದೆ.
2019ರಲ್ಲಿ ಪ್ರಕಟವಾಗಿತ್ತು ಕರಡು:ಕ್ರಿಪ್ಟೋ ಕರೆನ್ಸಿ ಮಾರಾಟ ಹಾಗೂ ಸಂಗ್ರಹದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ನಿಲುವು ಹೊಂದಿದೆ. ಇಂತಹ ಡಿಜಿಟಲ್ ಕರೆನ್ಸಿ ಹೊಂದಿದ್ದರೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಕಠಿಣ ಕಾನೂನಿನ ಪ್ರಸ್ತಾಪ ಮಾಡಿದ್ದು, ‘ಕ್ರಿಪ್ಟೋ ಕರೆನ್ಸಿ ನಿಷೇಧ ಹಾಗೂ ಡಿಜಿಟಲ್ ಕರೆನ್ಸಿಯ ನಿಯಂತ್ರಣ ವಿಧೇಯಕ’ದ ಕರಡನ್ನು 2019ರ ಜೂನ್​ನಲ್ಲಿ ಪ್ರಕಟಿಸಿತ್ತು. ಈ ಮೂಲಕ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯ ಬಹುದಿನಗಳ ಬೇಡಿಕೆಗೆ ವಿತ್ತ ಸಚಿವಾಲಯ ಸಮ್ಮತಿಸಿತ್ತು.
ಭಾರತದಲ್ಲಿ ಸದ್ಯ ಕ್ರಿಪ್ಟೋ ಕರೆನ್ಸಿಗಳ ಮೇಲೆ ಯಾವುದೆ ತೆರಿಗೆ ಇಲ್ಲ. ಆದರೆ, ತೆರಿಗೆದಾರರು ಕ್ರಿಪ್ಟೋ ಹೂಡಿಕೆಯಿಂದ ಪಡೆದ ಲಾಭವನ್ನು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಘೋಷಿಸಬೇಕಾದ್ದು ಕಡ್ಡಾಯ. 36 ತಿಂಗಳಿಗಿಂತ ಹೆಚ್ಚು ಕಾಲ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಇರಿಸಿ ಲಾಭ ಪಡೆದರೆ ಅಂಥ ಲಾಭವನ್ನು ದೀರ್ಘಾವಧಿಯ ಕ್ಯಾಪಿಟಲ್ ಗೇನ್ ಎಂದು ಪರಿಗಣಿಸಲಾಗುತ್ತದೆ.
ಜಿಪಿಎಸ್​ನಲ್ಲಿ ಪುರುಷನ ಚಿತ್ರ ಬಿಡಿಸಿದ ‘ಪೆಡಲಿಂಗ್​ ಪಿಕಾಸೋ’! ಸೈಕಲ್​ ಸವಾರಿಯಲ್ಲಿ ದಾಖಲೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
