ಗಾಂಧಿನಗರ:ಗುಜರಾತ್​ನ ಸ್ಥಳೀಯ ಸಂಸ್ಥೆ ಮತ್ತು ನಾಗರಿಕ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, 60 ವರ್ಷ ಮೇಲ್ಪಟ್ಟವರಿಗೆ, ಈಗಾಗಲೇ ಮೂರು ಬಾರಿ ಚುನಾಯಿತರಾದವರಿಗೆ ಮತ್ತು ರಾಜಕಾರಣಿಗಳ ಸಂಬಂಧಿಗಳಿಗೆ ಬಿಜೆಪಿ ವತಿಯಿಂದ ಟಿಕೆಟ್​ ಕೊಡದಿರಲು ರಾಜ್ಯ ಬಿಜೆಪಿ ಘಟಕ ನಿರ್ಧರಿಸಿದೆ.
60 ವರ್ಷ ಮೇಲ್ಪಟ್ಟವರು, ಮೂರು ಬಾರಿ ಚಾನಾಯಿತರಾಗಿ ಅಧಿಕಾರವನ್ನು ನಿರ್ವಹಿಸಿದವರು ಮತ್ತು ರಾಜಕಾರಣಿಗಳ ಸಂಬಂಧಿಗಳಿಗೆ ಟಿಕೆಟ್​ ಕೊಡಲಾಗುವುದಿಲ್ಲ. ಯುವ ಜನತೆಗೆ ಹೆಚ್ಚಿನ ಅವಕಾಶ ಕೊಡಲಾಗುವುದು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸಿಆರ್​ ಪಾಟೀಲ್​ ತಿಳಿಸಿದ್ದಾರೆ. ಪುರಸಭೆ ಚುನಾವಣೆಗಳಿಗೆ 8000 ಅಭ್ಯರ್ಥಿಗಳ ಆಯ್ಕೆಯಾಗಬೇಕಿದೆ. ಅದಕ್ಕೆಂದು ಪಕ್ಷವು ಮೂರು ದಿನಗಳ ಸಭೆಯನ್ನು ಹಮ್ಮಿಕೊಂಡಿದೆ.
ರಾಜ್ಯದ ಮಹಾನಗರ ಪಾಲಿಕೆಗಳಿಗೆ ಫೆಬ್ರವರಿ 21 ರಂದು ಮತದಾನ ನಡೆಯಲಿದ್ದು, ಪುರಸಭೆಗಳು ಮತ್ತು ಪಂಚಾಯಿತಿಗಳಿಗೆ ಫೆಬ್ರವರಿ 28 ರಂದು ಮತದಾನ ನಡೆಯಲಿದೆ. ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯ ಫಲಿತಾಂಶಗಳು ಫೆಬ್ರವರಿ 23 ರಂದು ಇರಲಿದ್ದು, ಪುರಸಭೆಗಳು ಮತ್ತು ಪಂಚಾಯಿತಿಗಳಿಗೆ ಮಾರ್ಚ್ 2 ರಂದು ಫಲಿತಾಂಶ ಹೊರಬರಲಿದೆ. (ಏಜೆನ್ಸೀಸ್​)
ಪ್ರಧಾನಿ ಮೋದಿಯ ತಮ್ಮ ಎಂದು ಕಂಡಕಂಡವರ ಬಳಿ ದುಡ್ಡು ವಸೂಲಿ ಮಾಡುತ್ತಿದ್ದವ ಅರೆಸ್ಟ್​!

ಪ್ರಿಯತಮೆ ಹೇಳಿದಂತೆ ಮನೆಯಲ್ಲಿ ಯಾರೂ ಇಲ್ಲದಾಗ ರಾತ್ರಿ ಗುಟ್ಟಾಗಿ ಮನೆಗೆ ಬಂದ… ಆಮೇಲೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
