ಲಡಾಖ್‌:ಚೀನಾದ ಮತ್ತೊಂದು ಘೋರ ಮುಖ ಬಯಲಾಗಿದೆ. ಭಾರತದ ಜತೆಗಿನ ಗಲ್ವಾನ್‌ ಕಣಿವೆಯಲ್ಲಿ ನಡೆದ ಘರ್ಷಣೆ ವೇಳೆ ಮೃತಪಟ್ಟ ತನ್ನ ದೇಶದ ಸೈನಿಕರ ಸಂಖ್ಯೆಯನ್ನು ಮುಚ್ಚಿಡಲು ನೀಚಕೃತ್ಯಕ್ಕೆ ಕೈಹಾಕಿರುವ ಆರೋಪ ಇದೀಗ ಕೇಳಿಬಂದಿದೆ.
ಅಮೆರಿಕದ ಗುಪ್ತಚರ ಸಂಸ್ಥೆ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಅಂದು ನಡೆದ ಘರ್ಷಣೆಯಲ್ಲಿ ಭಾರತ 20 ಯೋಧರನ್ನು ಕಳೆದುಕೊಂಡಿದ್ದರೆ, ಚೀನಾದಲ್ಲಿ ಸತ್ತ ಸೈನಿಕರ ಸಂಖ್ಯೆ 45ಕ್ಕೂ ಅಧಿಕ ಎಂದು ಭಾರತೀಯ ಸೇನೆ ಹೇಳಿತ್ತು. ಇದರಲ್ಲಿ ಓರ್ವ ಕರ್ನಲ್ ಕೂಡ ಸೇರಿರುವಾಗಿ ಸೇನೆ ಹೇಳಿದೆ.
ಆದರೆ ಚೀನಾ ಮಾತ್ರ ತನ್ನ ಸೈನಿಕರ ಮೃತ ಸಂಖ್ಯೆಗೆ ಸಂಬಂಧಿಸಿದಂತೆ ಮೌನ ತಾಳಿದೆ. ಅಷ್ಟೊಂದು ಬಲಿಷ್ಠವಾಗಿರುವ ಸೇನೆಯನ್ನು ಇಟ್ಟುಕೊಂಡು, ಭಾರತದ ಎದುರು ತಾನು ಈ ಪರಿಯ ಸೈನಿಕರನ್ನು ಕಳೆದುಕೊಂಡಿರುವುದು ವಿಶ್ವಕ್ಕೆ ಗೊತ್ತಾಗಿಬಿಟ್ಟರೆ ಮುಜುಗರಕ್ಕೆ ಒಳಗಾಗಬಹುದು ಎನ್ನುವ ಕಾರಣದಿಂದ ಅದು ಇನ್ನೂ ತನ್ನ ಸೈನಿಕರ ಗುಟ್ಟು ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ:ಭೂಮಿಯೊಳಗಿಂದ ಮನುಷ್ಯರ ಚೀರಾಟ? ಬೆಚ್ಚಿಬಿದ್ದಿದ್ದಾರೆ ಚೀನಿಯರು!
ಆದರೆ ಕುತಂತ್ರಿ ಚೀನಾ, ಈ ರಹಸ್ಯವನ್ನು ಮುಚ್ಚಿಡುವ ಸಲುವಾಗಿ ಸತ್ತ ತನ್ನ ಸೈನಿಕರ ಶವಗಳನ್ನು ಚೀನಾ ಗುಪ್ತವಾಗಿ ಅಂತ್ಯಸಂಸ್ಕಾರ ಮಾಡಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಹಿಂಸಾತ್ಮಕ ಘರ್ಷಣೆಯಲ್ಲಿ ಅಸುನೀಗಿದ ತನ್ನ ಸೈನಿಕರ ಶವಗಳನ್ನು ಯಾರಿಗೂ ತಿಳಿಯದಂತೆ ಚೀನಾ ಮಣ್ಣು ಮಾಡಿದೆ ಎಂಬ ಆರೋಪವಿದೆ. ಆದರೆ ಇದನ್ನು ಚೀನಾ ನಿರಾಕರಿಸುತ್ತಿದೆ.
ಯಾವುದೇ ದೇಶದ ಯಾವುದೇ ಯೋಧ ಹುತಾತ್ಮನಾದ ಸಂದರ್ಭದಲ್ಲಿ ಅಂಥವರನ್ನು ಅತ್ಯಂತ ಗೌರವಿಂದ ದೇಶದ ಬಾವುಟವನ್ನಿಟ್ಟು ಸಕಲ ರಾಜಮರ್ಯಾದೆಯೊಂದಿಗೆ ಅಂತ್ಯಸಂಸ್ಕಾರ ನೆರವೇರಿಸುವುದು ವಾಡಿಕೆ. ದೇಶಕ್ಕಾಗಿ ಪ್ರಾಣತೆತ್ತ ಯೋಧನಿಗೆ ದೇಶ ಸಲ್ಲಿಸುವ ಕೊನೆಯ ಗೌರವವಿದು. ಆದರೆ ನೀಚ ಚೀನಾ, ತನ್ನ ಸೈನಿಕರಿಗೆ ಗೌರವ ಸಲ್ಲಿಸುವುದು ದೂರದ ಮಾತು, ಘರ್ಷಣೆಯಲ್ಲಿ ಅಸುನೀಗಿದ ಸೈನಿಕರ ಶವಸಂಸ್ಕಾರದ ಮೆರವಣಿಗೆ ನಡೆಸದಂತೆ ಕುಟುಂಬಸ್ಥರ ಮೇಲೆ ಒತ್ತಡ ಹೇರಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಸತ್ತ ಸೈನಿಕರ ಅಂತ್ಯಸಂಸ್ಕಾರವನ್ನು ಬಹಿರಂಗವಾಗಿ ನಡೆಸದಂತೆ ಕುಟುಂಬದವರಿಗೆ ಹೇಳಿರುವುದು ಮಾತ್ರವಲ್ಲದೇ, ಕೆಲವೊಂದು ಸೈನಿಕರನ್ನು ತಾನೇ ಗುಟ್ಟಾಗಿ ಮಣ್ಣುಮಾಡಿದರೆ, ಇನ್ನು ಕೆಲವು ಸೈನಿಕರ ಕುಟುಂದವರಿಗೆ ಯಾರಿಗೂ ತಿಳಿಯದಂತೆ ಮಣ್ಣು ಮಾಡಲು ಒತ್ತಡ ಹೇರಿದೆ ಎಂದು ಗುಪ್ತಚರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಆರೋಪವನ್ನು ನಿರಾಕರಿಸಿರುವ ಚೀನಾ, ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಈ ರೀತಿಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೆ ಎಷ್ಟು ಯೋಧರ ಅಂತ್ಯಕ್ರಿಯೆ ಮಾಡಲಾಗಿದೆ, ನಿಜವಾಗಿ ಸತ್ತವರೆಷ್ಟು ಎಂಬ ಮಾಹಿತಿಯನ್ನು ಮಾತ್ರ ನೀಡಲಿಲ್ಲ.(ಏಜೆನ್ಸೀಸ್‌)
ಎದ್ದು-ಬಿದ್ದು ಮುಗಿಬಿದ್ದ ಮದ್ಯಪ್ರಿಯರು! ಒಂದೇ ದಿನ ಭರ್ಜರಿ ಆದಾಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − eight =
Remember me
