ನವದೆಹಲಿ:ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಶುಕ್ರವಾರ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ನಡೆದಿದ್ದು, ರೆಪೊದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ರೆಪೊ ದರ ಶೇ. 4 ಮತ್ತು ರಿವರ್ಸ್ ರೆಪೊ ದರವನ್ನು ಶೇ. 3.35ರಲ್ಲಿ ಮುಂದುವರಿಸಲಾಗಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಒಟ್ಟು ದೇಶೀಯ ಉತ್ಪನ್ನ ದರ (ಜಿಡಿಪಿ) ಮೈನಸ್ ಶೇ. 9.5 ಇರಲಿದೆ ಎಂದು ಅಂದಾಜಿಸಿದೆ.
ಪ್ರಸಕ್ತ ಆರ್ಥಿಕ ಸಾಲಿನ ಕಡೆಯ ತ್ರೖೆಮಾಸಿಕದಲ್ಲಿ ಹಣದುಬ್ಬರವು ಉದ್ದೇಶಿತ ಗುರಿಯನ್ನು ಸರಾಗಗೊಳಿಸುವ ವಿಶ್ವಾಸವಿದೆ. ಮೊದಲ ತ್ರೖೆಮಾಸಿಕದಲ್ಲಿ ಭಾರಿ ಕುಸಿತ ಕಂಡಿರುವ ಜಿಡಿಪಿ, ಆರ್ಥಿಕ ವರ್ಷಾಂತ್ಯದ ಹೊತ್ತಿಗೆ ತುಸು ಚೇತರಿಕೆ ಕಾಣಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. 2020-21ರ ಮೊದಲ ತ್ರೖೆಮಾಸಿಕದಲ್ಲಿ ಕರೊನಾ ಕಾರಣ ಜಿಡಿಪಿ ಮೈನಸ್ 23.9ಕ್ಕೆ ಕುಸಿದಿದೆ. ವಿಶ್ವಬ್ಯಾಂಕ್​ನ ದಕ್ಷಿಣ ಏಷ್ಯಾ ಆರ್ಥಿಕ ಮುನ್ನೋಟದಲ್ಲೂ ಭಾರತ ಜಿಡಿಪಿ ಪ್ರಸಕ್ತ ಹಣಕಾಸು ವರ್ಷ ಅಂತ್ಯಕ್ಕೆ ಶೇ. 9.5ಕ್ಕೆ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು.
ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶ ನಿರ್ಣಾಯಕ ಹಂತಕ್ಕೆ ಪ್ರವೇಶಿಸಿರುವ ಕಾರಣ ಈಗ ನಮ್ಮ ಗಮನವು ಆರ್ಥಿಕತೆಯನ್ನು ಸುಧಾರಿಸುವತ್ತ ಕೇಂದ್ರೀಕೃತವಾಗಬೇಕಿದೆ.
| ಶಕ್ತಿಕಾಂತದಾಸ್ಆರ್​ಬಿಐ ಗವರ್ನರ್
ಮುಂದಿನ ಡಿಸೆಂಬರ್​ನಿಂದ ದಿನದ 24 ತಾಸೂ (247) ವಾಸ್ತವ ಸಮಯ ನಿವ್ವಳ ಹಣ ವರ್ಗಾವಣೆ ವ್ಯವಸ್ಥೆ (ಆರ್​ಟಿಜಿಎಸ್) ಲಭ್ಯವಾಗಲಿದೆ ಎಂದು ಆರ್​ಬಿಐ ಶುಕ್ರವಾರ ತಿಳಿಸಿದೆ. ಸದ್ಯ ಆರ್​ಟಿಜಿಎಸ್ ಸೇವೆ ವಾರದ ಕೆಲಸದ ದಿನಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಲಭ್ಯವಿದೆ. ಇನ್ನು ಇದು ದಿನ 24 ತಾಸು ವಾರ ಪೂರ್ತಿ ಲಭ್ಯವಾಗಲಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ರಾಷ್ಟ್ರೀಯ ವಿದ್ಯುನ್ಮಾನ ನಗದು ವರ್ಗಾವಣೆಯನ್ನು (ನೆಫ್ಟ್) ಕಳೆದ ಡಿಸೆಂಬರ್​ನಿಂದ ದಿನದ 24 ತಾಸೂ ದೊರೆಯುವಂತೆ ಆರ್​ಬಿಐ ಮಾಡಿದ್ದು, ಇದರಿಂದ ಪಾವತಿಗಳು ಸುಗಮವಾಗಿವೆ. ಇದೇ ಮಾದರಿಯಲ್ಲಿ ಆರ್​ಟಿಜಿಎಸ್ ಸೇವೆಯೂ ಲಭ್ಯವಾಗಲಿದೆ.
‘ಸರ್ಕಾರಿ ಹಣದಲ್ಲಿ ಧಾರ್ಮಿಕ ಶಿಕ್ಷಣ ಯಾಕೆ’ ಎಂದ ಅಸ್ಸಾಂ ಸರ್ಕಾರ: ಮದರಸಾಗಳು ಬಂದ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 7 =
Remember me
