ಮುಂಬೈ:ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೇ, ರೆಪೊ ಶೇ. 4 ಮತ್ತು ರಿವರ್ಸ್ ರೆಪೊವನ್ನು ಶೇ. 3.35ರಲ್ಲೇ ಮುಂದುವರಿಸುವ ನಿರ್ಧಾರ ಕೈಗೊಂಡಿದೆ. 2020ರ ಮೇ ತಿಂಗಳಿಂದ ರೆಪೊ ದರ ಇದೇ ಸ್ಥಿತಿಯಲ್ಲಿ ಮುಂದುವರಿದಿದೆ.
2021-22ರಲ್ಲಿ ಒಟ್ಟು ದೇಶೀಯ ಉತ್ಪನ್ನ ದರ (ಜಿಡಿಪಿ) ಶೇ. 10.5ರಲ್ಲಿ ಇರುತ್ತದೆ ಎಂಬ ಹಿಂದಿನ ಅಂದಾಜಿನಲ್ಲಿ ಯಾವುದೇ ಬದಲಾವಣೆಯನ್ನು ಆರ್​ಬಿಐ ಮಾಡಿಲ್ಲ. ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೖೆಮಾಸಿಕದಲ್ಲಿ ಹಣದುಬ್ಬರದ ಪ್ರಮಾಣ ಶೇ. 5.2 ಇದ್ದರೂ 3ನೇ ತ್ರೖೆಮಾಸಿಕದ ಹೊತ್ತಿಗೆ ಅದು ಶೇ. 4.4ರ ಆಸುಪಾಸಿನಲ್ಲಿರುವ ಆಶಯವನ್ನು ಕೇಂದ್ರೀಯ ಬ್ಯಾಂಕ್ ವ್ಯಕ್ತಪಡಿಸಿದೆ. 2020-21ರ ಕೊನೆಯ ತ್ರೖೆಮಾಸಿಕದಲ್ಲಿ (ಜನವರಿ-ಮಾರ್ಚ್) ಹಣದುಬ್ಬರದ ಪ್ರಮಾಣ ಶೇ. 5ಕ್ಕೆ ಏರಿತ್ತು. ಕರೊನಾ ಎರಡನೇ ಅಲೆಯಲ್ಲಿ ಸೋಂಕು ಉಲ್ಬಣಗೊಂಡಿರುವ ಸಂದರ್ಭದಲ್ಲಿ ಬಡ್ಡಿ ದರವನ್ನು ಪರಿಷ್ಕರಿಸಿದರೆ ಅದು ಬೆಳವಣಿಗೆಗೆ ಮಾರಕವಾಗುತ್ತದೆ ಎಂದು ಎಂಪಿಸಿ ಅಭಿಪ್ರಾಯಪಟ್ಟಿದೆ. ಉತ್ಪಾದಕ ವಲಯಕ್ಕೆ ಸಾಕಷ್ಟು ಸಾಲ ದೊರೆಯುವಂತೆ ಹಣದ ಹರಿವು ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಸಾಲ ವಿತರಣೆಗೆ ಹೆಚ್ಚುವರಿ ಅನುದಾನ: 2021-22ರಲ್ಲಿ ಹೆಚ್ಚು ಹೆಚ್ಚು ಸಾಲ ವಿತರಣೆಗೆ ಅನುಕೂಲ ಕಲ್ಪಿಸಲು ನಬಾರ್ಡ್​ಗೆ 25 ಸಾವಿರ ಕೋಟಿ ರೂಪಾಯಿ, ಎನ್​ಎಚ್​ಬಿಗೆ 10 ಸಾವಿರ ಕೋಟಿ ರೂಪಾಯಿ ಮತ್ತು ಎಸ್​ಐಡಿಬಿಐಗೆ 15 ಸಾವಿರ ಕೋಟಿ ರೂಪಾಯಿ ಒಟ್ಟಾರೆ 50 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಮಂಜೂರು ಮಾಡಲು ಎಂಪಿಸಿ ಸಮ್ಮತಿಸಿದೆ.
ಎಂಪಿಸಿ ಇತರ ನಿರ್ಧಾರಗಳು
ಮತ್ತೆ ಮಾರಟೋರಿಯಮ್ ಇಲ್ಲ
ಕರೊನಾ ಎರಡನೇ ಅಲೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಲಾಕ್​ಡೌನ್ ಜಾರಿ ಮಾಡಲಾಗುತ್ತಿದೆ. ಆದರೆ, ಇದಕ್ಕೆ ಸಾಲದ ಕಂತು ಪಾವತಿ ಮುಂದೂಡಿಕೆ (ಮಾರಟೋರಿಯಮ್ ಘೋಷಣೆ ಮಾಡುವ ಅಗತ್ಯ ಸದ್ಯಕ್ಕೆ ಇಲ್ಲ ಎಂದು ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ವ್ಯಾಪಾರ-ವಹಿವಾಟುಗಳು ಕರೊನಾ ಸನ್ನಿವೇಶವನ್ನು ಎದುರಿಸಲು ಶಕ್ತವಾಗಿವೆ ಹೀಗಾಗಿ ಸದ್ಯದ ಮಟ್ಟಿಗೆ ಮಾರಟೋರಿಯಮ್ ಅಗತ್ಯತೆ ಕಾಣುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ: ಮಮತಾ ಬ್ಯಾನರ್ಜಿಗೆ ಸಂಕಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + four =
Remember me
