ನವದೆಹಲಿ:ಕರೊನಾ ವೈರಸ್ ನಿಯಂತ್ರಣಕ್ಕೆ ನೆರವಾಗಲು ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಆಪ್ ರೂಪಿಸಿದವರು ಯಾರು? ಎಂಬ ಗೊಂದಲಕ್ಕೆ ಸರ್ಕಾರ ತೆರೆ ಎಳೆದಿದೆ. ಖಾಸಗಿ ಸಹಯೋಗದಲ್ಲಿ ಈ ಆಪನ್ನು ಅಭಿವೃದ್ಧಿಪಡಿಸಲಾಗಿದೆ. ಕರೊನಾ ನಿಯಂತ್ರಣಕ್ಕೆ ನೆರವಾಗುವ ನಿಟ್ಟಿನಲ್ಲಿ ಕೇವಲ 21 ದಿನದಲ್ಲಿ ಈ ಆಪ್ ತಯಾರಿಸಲಾಗಿದೆ. ಇದು ಸಂಪೂರ್ಣ ಸ್ವದೇಶಿಯಾಗಿದ್ದು, ಎಲ್ಲ ಡೇಟಾ ಸುರಕ್ಷಿತವಾಗಿದೆ ಎಂದು ಸರ್ಕಾರ ಹೇಳಿದೆ.
ಆರೋಗ್ಯ ಸೇತು ಆಪ್ ಹೇಗೆ ರೂಪಿಸಲಾಯಿತು ಎಂಬ ಕುರಿತು ತನಗೆ ಗೊತ್ತಿಲ್ಲ ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್​ಐಸಿ) ಹೇಳಿದ್ದ ಕಾರಣ ಗೊಂದಲ ಉಂಟಾಗಿತ್ತು. ಲಾಕ್​ಡೌನ್ ವೇಳೆ ಕೋಟ್ಯಂತರ ಭಾರತೀಯರು ಆರೋಗ್ಯ ಸೇತು ಆಪ್ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಇದನ್ನು ರೂಪಿಸಿದವರ ಕುರಿತು ಮಾಹಿತಿ ಒದಗಿಸುವಂತೆ ಕೋರಿ ಎನ್​ಐಸಿ, ರಾಷ್ಟ್ರೀಯ ಇ-ಆಡಳಿತ ವಿಭಾಗ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸೌರವ್ ದಾಸ್ ಎನ್ನುವವರು ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಆದರೆ ಎನ್​ಐಸಿಯಾಗಲಿ ಸಚಿವಾಲಯವಾಗಲಿ ಆಪ್ ರಚನೆಯ ಕುರಿತ ದತ್ತಾಂಶ ಹೊಂದಿಲ್ಲ ಎಂದು ಉತ್ತರ ನೀಡಿತ್ತು. ಬಳಿಕ ಅವರು ಮುಖ್ಯ ಮಾಹಿತಿ ಆಯುಕ್ತ (ಸಿಐಸಿ)ರಿಗೆ ದೂರು ನೀಡಿದ್ದರು.
ಎನ್​ಐಸಿ ಸರ್ಕಾರಿ ವೆಬ್​ಸೈಟ್​ಗಳನ್ನು ವಿನ್ಯಾಸಗೊಳಿಸುವ ಸಂಸ್ಥೆಯಾಗಿದೆ. ಎಲೆಕ್ಟ್ರಾನಿಕ್ಸ್ ಸಚಿವಾಲಯ ವ್ಯಾಪ್ತಿಗೆ ಬರುವ ಎನ್​ಐಸಿಯನ್ನು ತರಾಟೆಗೆ ತೆಗೆದುಕೊಂಡಿರುವ ಮಾಹಿತಿ ಆಯೋಗ, ವಿವಿಧ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಆರೋಗ್ಯ ಸೇತು ಆಪ್ ಕುರಿತು ಮಾಹಿತಿ ಹಕ್ಕು ಕಾನೂನು (ಆರ್​ಟಿಐ) ಅನ್ವಯ ಅರ್ಜಿ ಸಲ್ಲಿಸಿದವರಿಗೆ ಸೂಕ್ತ ಮಾಹಿತಿ ಒದಗಿಸುವಂತೆ ನೋಟಿಸ್​ನಲ್ಲಿ ಸೂಚಿಸಲಾಗಿದೆ.
ತಗ್ಗಿತು ಕರೊನಾ ಸೋಂಕು; ಕಳೆದ ಮೂರು ತಿಂಗಳ ಅಬ್ಬರಕ್ಕೆ ಬಿದ್ದಿದೆ ಬ್ರೇಕ್​ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + twenty =
Remember me
