ನವದೆಹಲಿ:ಜನರು ಕರೊನಾ ಲಸಿಕೆ ಸಿಗಲಿದೆ ಎಂದು ಕಾತರದಿಂದ ಕಾಯುತ್ತಿರುವ ನಡುವೆಯೇ ಎಲ್ಲರಿಗೂ ಲಸಿಕೆ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. ಎಲ್ಲರಿಗೂ ಕರೊನಾ ಲಸಿಕೆ ಕೊಡುತ್ತೇವೆ ಎಂದು ಸರ್ಕಾರ ಎಂದಿಗೂ ಹೇಳಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಹೇಳಿದ್ದಾರೆ. ಲಸಿಕೆಯ ಪರಿಣಾಮಕಾರಿತ್ವವನ್ನು ಅವಲಂಬಿಸಿರುತ್ತದೆ ಮತ್ತು ಕರೊನಾ ಪಸರಿಸುವಿಕೆಯ ಸರಪಳಿಯನ್ನು ತುಂಡರಿಸುವುದು ಉದ್ದೇಶ. ಈ ನಿಟ್ಟಿನಲ್ಲಿ ನಿರ್ಣಾಯಕ ಜನಸಾಮಾನ್ಯರಿಗೆ ಲಸಿಕೆ ನೀಡಲು ಮತ್ತು ವೈರಸ್ ಹರಡುವಿಕೆಯನ್ನು ತಪ್ಪಿಸುವಲ್ಲಿ ನಾವು ಯಶಸ್ವಿಯಾದರೆ ದೇಶದಲ್ಲಿರುವ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬಲರಾಮ್ ಭಾರ್ಗವ ಕೂಡ ಹೇಳಿದ್ದಾರೆ.
ಮೊದಲು ಲಸಿಕೆಯ ಲಭ್ಯತೆ ಬಗ್ಗೆ ಹೇಳಿಕೆ ನೀಡಿದ್ದ ಪ್ರಧಾನಿ ಮೋದಿ, ಲಸಿಕೆ ಸಿದ್ಧವಾಗುತ್ತಲೇ ಪ್ರತಿಯೊಬ್ಬರಿಗೂ ತಲುಪಿಸುವ ಯೋಜನೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದಿ ದ್ದರು. ಆರೋಗ್ಯ ಸಚಿವಾಲಯದ ಪ್ರಕಾರ, ಕರೊನಾದಿಂದ ಈಗಾಗಲೇ ಚೇತರಿಸಿಕೊಂಡಿರುವವರಿಗೆ ಮತ್ತು ಆರೋಗ್ಯವಾಗಿರು ವವರಿಗೆ ಲಸಿಕೆ ನೀಡುವ ಸಾಧ್ಯತೆ ಇಲ್ಲ.
ಅನುಮೋದನೆಗೆ ಕಾಯುತ್ತಿವೆ 2 ಲಸಿಕೆ: ಕರೊನಾ ವಿರುದ್ಧ ನಿವಾರಣೆಯ ಭರವಸೆ ಮೂಡಿಸಿರುವ ಅಮೆರಿಕದ ಎರಡು ಲಸಿಕೆಗಳು ತುರ್ತು ಬಳಕೆಗಾಗಿ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿವೆ. ಮಾಡರ್ನಾ ಕಂಪನಿಯು ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಸೋಮವಾರ ಅರ್ಜಿ ಸಲ್ಲಿಸಿದೆ. ಫೈಜರ್ ಮತ್ತು ಬಯೋಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆಯೂ ಇಂಥ ಅನುಮತಿಗೆ ಮನವಿ ಮಾಡಿವೆ. ವರ್ಷಾಂತ್ಯದ ವೇಳೆಗೆ ಈ ಎರಡೂ ಲಸಿಕೆಗಳ ಸುಮಾರು 4 ಕೋಟಿ ಡೋಸ್​ಗಳು ಲಭ್ಯವಾಗಲಿವೆ. ಮುಂದಿನ ವರ್ಷದ ಆರಂಭದಲ್ಲಿ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ ಎನ್ನಲಾಗಿದೆ. ಕ್ರಿಸ್​ವುಸ್ ಹಾಗೂ ಹೊಸ ವರ್ಷಾಚರಣೆ ವೇಳೆ ಕರೊನಾ ಪ್ರಕರಣಗಳು ಮತ್ತೆ ಹೆಚ್ಚಾಗಬಹುದು ಎಂಬ ಆತಂಕ ಎದುರಾಗಿರುವ ನಡುವೆ ಈ ಬೆಳವಣಿಗೆಗೆಳು ನಡೆಯುತ್ತಿವೆ.
ಲಸಿಕೆ ಸುರಕ್ಷಿತವಾಗಿದೆ ಎಂದ ಸೆರಂ:ಕೋವಿಶೀಲ್ಡ್ ಲಸಿಕೆಯು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಭಾರತದಲ್ಲಿ ಅದರ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿರುವ ಸೆರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಹೇಳಿದೆ. ಕೋವಿಶೀಲ್ಡ್ ಲಸಿಕೆ ಅಡ್ಡಪರಿಣಾಮ ಬೀರಿದ್ದು, ನೆನಪಿನ ಶಕ್ತಿ ಕುಂದಿಸುವುದು ಸೇರಿದಂತೆ ತನ್ನ ಆರೋಗ್ಯದ ಮೇಲೆ ಹಲವು ಪರಿಣಾಮ ಬೀರಿದೆ ಎಂದು ಪ್ರಯೋಗಕ್ಕೆ ಒಳಗಾಗಿದ್ದ ಸ್ವಯಂಸೇವಕನೊಬ್ಬ ಆರೋಪಿಸಿರುವ ಹಿನ್ನೆಲೆಯಲ್ಲಿ ಸೆರಂ ಸಂಸ್ಥೆ ಸ್ಪಷ್ಟನೆ ನೀಡಿದೆ. ಆರೋಪ ಮಾಡಿರುವ ಸ್ವಯಂಸೇವಕನ ವಿರುದ್ಧ -ಠಿ; 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ನಡೆಸುತ್ತಿರುವ ಸೆರಂ, ತಮ್ಮ ಲಸಿಕೆಯ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದಿದೆ. ಸ್ವಯಂಸೇವಕರ ಬಗ್ಗೆ ತಾವು ಸಹಾನುಭೂತಿ ಹೊಂದಿದ್ದೇವೆ. ಲಸಿಕೆ ರೋಗನಿರೋಧಕ ಮತ್ತು ಸುರಕ್ಷಿತವೆಂದು ಸಾಬೀತಾಗದ ಹೊರತು ಲಸಿಕೆಯನ್ನು ಸಾಮೂಹಿಕ ಬಳಕೆಗೆ ಬಿಡುಗಡೆ ಮಾಡುವುದಿಲ್ಲ ಎಂದಿದೆ. ಸೆರಂ ಜತೆಗೆ ಕೇಂದ್ರ ಸರ್ಕಾರವೂ ದನಿಗೂಡಿಸಿದ್ದು, ಒಬ್ಬರ ಆರೋಪದ ಮೇಲೆ ಲಸಿಕೆಯ ಪ್ರಯೋಗಗಳನ್ನು ನಿಲ್ಲಿಸುವ ಅಗತ್ಯವಿಲ್ಲ ಎಂದಿದೆ.
ಪರೀಕ್ಷೆಗೆ ಗರಿಷ್ಠ ಶುಲ್ಕ ನಿಗದಿ:ಖಾಸಗಿ ಲ್ಯಾಬ್​ಗಳಲ್ಲಿ ಆರ್​ಟಿ-ಪಿಸಿಆರ್ ಪರೀಕ್ಷೆಗೆ – 800 ರೂ. ಗರಿಷ್ಠ ಶುಲ್ಕ ನಿಗದಿಪಡಿಸಲಾಗಿದೆ. ಒಂದು ವೇಳೆ ಮನೆಯಿಂದಲೇ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದರೆ ಅದಕ್ಕೆ -1,100 ರೂ. ಪಡೆಯಬೇಕು ಎಂದು ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ತಿಳಿಸಿದ್ದಾರೆ. ದೆಹಲಿಯಲ್ಲೂ ಶುಲ್ಕವನ್ನು – 800 ರೂ.ಗೆ ಇಳಿಸಲಾಗಿದೆ. ಖಾಸಗಿ ಆಸ್ಪತ್ರೆಗಳು – 2,400 ರೂ. ಪಡೆಯುತ್ತಿದ್ದವು. ಉತ್ತರ ಪ್ರದೇಶದಲ್ಲೂ ಆರ್​ಟಿ-ಪಿಸಿಆರ್ ಪರೀಕ್ಷೆಗೆ ಗರಿಷ್ಠ- 700 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಮನೆಗೆ ತೆರಳಿ ಮಾದರಿ ಪಡೆಯುವುದಕ್ಕೆ- 900 ರೂ. ನಿಗದಿಪಡಿಸಲಾಗಿದೆ. ಕಳೆದ ಸೆಪ್ಟೆಂಬರ್​ನಲ್ಲಿ ಆರ್​ಟಿ-ಪಿಸಿಆರ್ ಪರೀಕ್ಷೆಯ ದರವನ್ನು ಸರ್ಕಾರ -2,500 ರೂ.ನಿಂದ- 1,600 ರೂ.ಗೆ ಇಳಿಸಿತ್ತು.
ಪಾಸಿಟಿವಿಟಿ ಪ್ರಮಾಣ ಇಳಿಕೆದೇಶದಲ್ಲಿ ಕರೊನಾ ಅಟ್ಟಹಾಸ ಇಳಿಕೆಯಾಗುವುದರ ಜತೆಗೆ ಪಾಸಿಟಿವಿಟಿ ಪ್ರಮಾಣ ನಿರಂತರವಾಗಿ ಇಳಿಮುಖದಲ್ಲಿದೆ. ಶೇಕಡ 7.15ರಲ್ಲಿದ್ದ ಪಾಸಿಟಿವಿಟಿ ಪ್ರಮಾಣ ಶೇಕಡ 6.69ಕ್ಕೆ ಇಳಿಕೆ ಕಂಡಿದೆ. ಸೋಮವಾರ ಹೊಸದಾಗಿ 31 ಸಾವಿರ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 94.63 ಲಕ್ಷಕ್ಕೆ ಏರಿಕೆಯಾಗಿದೆ. 482 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 1.37 ಲಕ್ಷಕ್ಕೆ ಏರಿಕೆಯಾಗಿದೆ. ಈವರೆಗೆ 88.88 ಲಕ್ಷ ಸೋಂಕಿತರು ಗುಣಮುಖರಾಗಿದ್ದು, ಇನ್ನೂ 4.34 ಲಕ್ಷ ಸಕ್ರಿಯ ಪ್ರಕರಣಗಳಿವೆ. ಜಾಗತಿಕವಾಗಿ ಒಟ್ಟು ಪ್ರಕರಣಗಳ ಸಂಖ್ಯೆ 6.37 ಕೋಟಿಗೆ ಏರಿದ್ದು, ಮೃತರ ಸಂಖ್ಯೆ 14.77 ಲಕ್ಷ ತಲುಪಿದೆ. 4.41 ಕೋಟಿ ಸೋಂಕಿತರು ಈವರೆಗೆ ಗುಣಮುಖರಾಗಿದ್ದಾರೆ.
ಶುಕ್ರವಾರ ಸರ್ವ ಪಕ್ಷಗಳ ಸಭೆಕರೊನಾ ಪರಿಸ್ಥಿತಿ ಬಗ್ಗೆ ರ್ಚಚಿಸಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಡಿ.4) ಎರಡನೇ ಬಾರಿ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಬೆಳಗ್ಗೆ 10.30ಕ್ಕೆ ವರ್ಚುವಲ್ ಸಭೆ ನಡೆಯಲಿದ್ದು, ಲಸಿಕೆ ಉತ್ಪಾದನೆ, ಕರೊನಾ ಪ್ರಕರಣಗಳ ಏರಿಕೆ ಸೇರಿ ಹಲವು ವಿಷಯಗಳ ಕುರಿತು ಪ್ರಧಾನಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಉಚಿತ ಮಾತ್ರೆ:8 ರಿಂದ 12ನೇ ತರಗತಿಯ ಸರ್ಕಾರಿ ಶಾಲೆಯ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಕಾರಿಯಾಗಲು ಉಚಿತವಾಗಿ ಮಾತ್ರೆ ನೀಡುವುದಾಗಿ ಹರಿಯಾಣ ಸರ್ಕಾರ ಘೋಷಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 12 =
Remember me
