ನವದೆಹಲಿ:ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ ಸಜ್ಜುಗೊಳಿಸಲು ಆಗಸ್ಟ್​ 15ರ ಗಡುವು ನೀಡಲಾಗಿರುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ.
ಕೇಂದ್ರ ಆರೋಗ್ಯ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ಅನ್ನು ಆದಷ್ಟು ತ್ವರಿತವಾಗಿ ನಡೆಸಬೇಕಿದೆ. ಆದರೆ ಲಸಿಕೆಯ ಸುರಕ್ಷತೆ ಹಾಗೂ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ರಾಜೇಶ್​ ಭೂಷಣ್​ ಹೇಳಿದ್ದಾರೆ.
ಇದನ್ನೂ ಓದಿ;ಭಾರತದ ಔಷಧದ ಮೇಲೂ ಅತೀವ ನಂಬಿಕೆ ಬ್ರೆಜಿಲ್​ ಅಧ್ಯಕ್ಷರಿಗೆ…!
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಮಹಾ ನಿರ್ದೇಶಕರು ಬರೆದಿರುವ ಪತ್ರದಲ್ಲಿ ಆಗಸ್ಟ್​ ಆ.15ರ ಗಡುವಿನ ಬಗ್ಗೆ ಎಲ್ಲಿಯೂ ಹೇಳಿಲ್ಲ. ಇಲ್ಲದ್ದನ್ನು ಸೃಷ್ಟಿಸುವುದು ಎಂದು ಹೇಳಿದ್ದಾರೆ.
ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಕ್ಲಿನಿಕಲ್​ ಟ್ರಯಲ್​ ಪ್ರಕ್ರಿಯೆಯನ್ನು ವೇಗವಾಗಿ ಮುಗಿಸಬೇಕೆಂದು ಐಸಿಎಂಆರ್​ ಮಹಾ ನಿರ್ದೇಶಕ ಬಲರಾಮ್​ ಭಾರ್ಗವ್​ ಹೇಳಿದ್ದರು. ಇದರರ್ಥ ಆಗಸ್ಟ್​ 15ರೊಳಗಾಗಿ ಫಲಿತಾಂಶ ಪಡೆಯುವ ಉದ್ದೇಶ ಇದರ ಹಿಂದಿದೆ ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ;ಕರೊನಾ ಲಸಿಕೆ ಸಜ್ಜಾಗದಿದ್ದರೆ ಭಾರತದ ಸ್ಥಿತಿ ಹರೋಹರ…! ನಿತ್ಯ 3 ಲಕ್ಷ ಹೊಸ ಕೇಸ್​ ನಿಶ್ಚಿತ
ಆದರೆ, ಲಸಿಕೆ ಅಭಿವೃದ್ಧಿ ಪಡಿಸಿರುವ ಹೈದರಾಬಾದ್​ನ ಭಾರತ್​ ಬಯೋಟೆಕ್​ ಇಂಟರ್​ ನ್ಯಾಷನ್​ ಸಂಸ್ಥೆಯೇ ತಿಳಿಸಿರುವಂತೆ ಮೊದಲ ಹಂತದ ಕ್ಲಿನಿಕಲ್​ ಟ್ರಯಲ್​ಗೆ ಕನಿಷ್ಠ ಮೂರು ತಿಂಗಳು ಬೇಕು ಎಂದು ಹೇಳಿದೆ.
ಕರೊನಾ ಲಸಿಕೆ ಪಡೆದ ಜಗತ್ತಿನ ಮೊತ್ತ ಮೊದಲ ವ್ಯಕ್ತಿ ಈತ; ಮೈನವಿರೇಳಿಸುವ ಕ್ಲಿನಿಕಲ್​ ಟ್ರಯಲ್​ ಅನುಭವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
