ನವದೆಹಲಿ:ಮೇ 3ರಂದು ಲಾಕ್‌ಡೌನ್‌ ಮುಗಿಯುವ ಬಗ್ಗೆ ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಲ್ಲೇ ಏರ್‌ ಇಂಡಿಯಾ ಸೇರಿದಂತೆ ಕೆಲವು ಖಾಸಗಿ ವಿಮಾನ ಸಂಸ್ಥೆಗಳು ಮೇ 4ರಿಂದ ಟಿಕೆಟ್‌ ಬುಕಿಂಗ್‌ ಆರಂಭಿಸುವುದಾಗಿ ನಿನ್ನೆ ಘೋಷಿಸಿದ್ದವು. ಈ ಘೋಷಣೆ ಹಿನ್ನೆಲೆಯಲ್ಲಿ ಬಹುತೇಕ ಪ್ರಯಾಣಿಕರು ಟಿಕೆಟ್‌ ಬುಕಿಂಗ್‌ ಮಾಡಲು ತುದಿಗಾಲಲ್ಲಿ ನಿಂತಿದ್ದರು.ಲಾಕ್‌ಡೌನ್‌ ಹಿನ್ನೆಲೆಯಲ್ಲಿ, ತಮ್ಮ ಊರುಗಳಿಗೆ ಹೋಗಲಾಗದೇ ಅಥವಾ ಪರ ಊರುಗಳಿಗೆ ಹೋಗುವ ತರಾತುರಿಯಲ್ಲಿ ಇರುವ ಅನೇಕ ಪ್ರಯಾಣಿಕರು ಏರ್‌ ಇಂಡಿಯಾ ಘೋಷಣೆ ನಂತರ ಬಹಳ ಹಿಗ್ಗಿ ಹೋಗಿದ್ದರು. ಆದರೆ ಅವರಿಗೆಲ್ಲಾ ಶಾಕ್‌ ನೀಡುವ ಮಾಹಿತಿಯೊಂದು ಕೇಂದ್ರ ನಾಗರಿಕ ಮತ್ತು ವಿಮಾನಯಾನ ಸಚಿವಾಲಯದಿಂದ ಬಂದಿದೆ.ಅದೇನೆಂದರೆ ದೇಶ ಅಥವಾ ಅಂತಾರಾಷ್ಟ್ರೀಯ ಯಾವುದೇ ವಿಮಾನಗಳ ಹಾರಾಟವನ್ನು ಯಾವಾಗಿನಿಂದ ಆರಂಭಿಸಬೇಕು ಎಂಬ ಬಗ್ಗೆ ಇನ್ನೂ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ. ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡ ಬಳಿಕವಷ್ಟೇ ವಿಮಾನ ಸಂಸ್ಥೆಗಳು ಟಿಕೆಟ್‌ ಬುಕಿಂಗ್‌ ಕಾರ್ಯ ಆರಂಭಿಸಬೇಕು. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಬುಕಿಂಗ್‌ ಮಾಡುವಂತಿಲ್ಲ’ ಎಂದು ಕೇಂದ್ರ ನಾಗರಿಕ ಮತ್ತು ವಿಮಾನಯಾನ ಸಚಿವ ಹರದೀಪ್‌ ಸಿಂಗ್‌ ಪುರಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ.ವಿಮಾನ ಸಂಚಾರ ಆರಂಭಿಸುವ ಮೊದಲು ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದ ಕರೊನಾ ಸೋಂಕಿನ ಕುರಿತು ವಿಚಾರ ಮಾಡುವ ಅಗತ್ಯವಿದೆ. ಸವಿಸ್ತಾರ ಅಧ್ಯಯನ ಮಾಡಿದ ನಂತರವಷ್ಟೇ ಈ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.ಬರುವ ಭಾನುವಾರ (ಮೇ 3) ಭಾರತದಲ್ಲಿ ಲಾಕ್‌ಡೌನ್‌ ಮುಗಿಯುವ ಹಿನ್ನೆಲೆಯಲ್ಲಿ ಶನಿವಾರದಿಂದಲೇ (ಮೇ 2) ಟಿಕೆಟ್​ ಬುಕಿಂಗ್​ಗೆ ಚಾಲನೆ ನೀಡಲಾಗುವುದು. ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸುವವರಿಗಾಗಿ ಜೂ.1ರಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭಿಸುವುದಾಗಿ ಏರ್​ ಇಂಡಿಯಾ ನಿನ್ನೆ ತಿಳಿಸಿತ್ತು. ‘ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಏನಾದರೂ ಅಪ್‌ಡೇಟ್‌ಗಳಿದ್ದರೆ ತಿಳಿಸಲಾಗುವುದು’ ಎಂದೂ ಏರ್‌ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ ಸ್ಪಷ್ಟಪಡಿಸಿತ್ತು. ಆದರೆ ಯಾವ್ಯಾವ ರೂಟ್‌ ವಿಮಾನಗಳ ಸಂಚಾರ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿರಲಿಲ್ಲ.ಇನ್ನೇನು ಮೇ4ರಿಂದ ವಿಮಾನ ಸಂಚಾರ ಆರಂಭ ಎಂದು ಬಹುತೇಕ ಪ್ರಯಾಣಿಕರು ಟಿಕೆಟ್‌ ಬುಕಿಂಗ್‌ಗೆ ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರ, ಕರೊನಾದ ಉದ್ವಿಗ್ನತೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಮಾಹಿತಿ ನೀಡಿದೆ.(ಏಜನ್ಸೀಸ್‌)
The Ministry of Civil Aviation clarifies that so far no decision has been taken to open domestic or international operations.Airlines are advised to open their bookings only after a decision in this regard has been taken by the Government.@MoCA_GoI@DGCAIndia@AAI_Official
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 × 2 =
Remember me
