ಕೋಲ್ಕತ:ನವರಾತ್ರಿ ಪ್ರಯುಕ್ತ ದುರ್ಗಾಪೂಜೆ ನಡೆಯುವ ಪೆಂಡಾಲ್​ಗಳಿಗೆ ಆಯೋಜಕರಿಗಷ್ಟೇ ಅವಕಾಶ ನೀಡಬೇಕು. ಹೊರಗಿನವರಿಗೆ ಅಲ್ಲಿ ಪ್ರವೇಶ ಕಲ್ಪಿಸಬಾರದು ಎಂಬುದಾಗಿ ಹೈಕೋರ್ಟ್ ಆದೇಶ ನೀಡಿದೆ.
ಚಿಕ್ಕ ಪೆಂಡಾಲ್​ಗಳಲ್ಲಿ ಜನರಿಗೆ ಐದು ಮೀಟರ್ ಹಾಗೂ ದೊಡ್ಡ ಪೆಂಡಾಲ್​ಗಳಲ್ಲಿ ಹತ್ತು ಮೀಟರ್​ ದೂರದಿಂದಲೇ ದೇವರ ದರ್ಶನ ಪಡೆಯುವಂತೆ ಸೂಚಿಸಬೇಕು. ಮಾತ್ರವಲ್ಲ ಪೂಜೆ ಹಿನ್ನೆಲೆಯಲ್ಲಿ ನಡೆಯುವ ಜನಜಂಗುಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಆಯೋಜಕರು ಮುಂಚಿತವಾಗಿಯೇ ಒಂದು ಬ್ಲೂಪ್ರಿಂಟ್​ ನೀಡಬೇಕು ಎಂದು ಕೋಲ್ಕತದ ಉಚ್ಚ ನ್ಯಾಯಾಲಯ ಆದೇಶಿಸಿದೆ.
ಆಯೋಜಕರಷ್ಟೇ ಪೆಂಡಾಲ್​ಗೆ ಪ್ರವೇಶಿಸಬಹುದಾಗಿದ್ದು, ಅಂಥವರ ಹೆಸರನ್ನು ಪೆಂಡಾಲ್​ ಹೊರಗೆ ನಮೂದಿಸಿರಬೇಕು. ಪೆಂಡಾಲ್​ ಆವರಣದಲ್ಲಿ ಗರಿಷ್ಠ 25 ಜನರಿಗಷ್ಟೇ ಅವಕಾಶ ಇರಲಿದೆ ಎಂಬುದಾಗಿ ಕೋರ್ಟ್ ನಿರ್ದೇಶನ ನೀಡಿದೆ. ಈ ಆದೇಶ ಕೋಲ್ಕತದ 34 ಸಾವಿರ ನೋಂದಾಯಿತ ದುರ್ಗಾ ಪೂಜಾ ಪೆಂಡಾಲ್​ಗಳಿಗೆ ಅನ್ವಯಿಸಲಿದ್ದು, ಈ ವರ್ಷ ಅಲ್ಲಿ ಅಕ್ಟೋಬರ್​ 23ರಿಂದ 26ರವರೆಗೆ ದುರ್ಗಾಪೂಜೆ ನಡೆಯಲಿದೆ. (ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten + 11 =
Remember me
