ನವದೆಹಲಿ:ಶೂನ್ಯ ತೆರಿಗೆ ಪಾವತಿಸುವವರು ಜಿಎಸ್​ಟಿ ವಿವರವನ್ನು ತಡವಾಗಿ ಸಲ್ಲಿಸಿದರೆ, ಅದಕ್ಕೆ ಯಾವುದೇ ಜುಲ್ಮಾನೆ ವಿಧಿಸುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಶುಕ್ರವಾರ ಹೇಳಿದ್ದಾರೆ.
ಈ ಆದೇಶವು 2017ರ ಜುಲೈನಿಂದ 2020ರ ಜನವರಿವರೆಗೆ ಜಿಎಸ್​ಟಿ ವಿವರ ಸಲ್ಲಿಸದ ಶೂನ್ಯ ತೆರಿಗೆದಾರರಿಗೆ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಸಿಎಂ ಹೆಸರಲ್ಲಿ ಚೌಡಿಗೆ ಕುರಿ-ಕೋಳಿ ಬಲಿ ಕೊಟ್ಟರೇ ಶಾಸಕ?
ಶುಕ್ರವಾರ ನಡೆದ ಜಿಎಸ್​ಟಿ ಮಂಡಳಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳು ಸಲ್ಲಿಸಬೇಕಾದ ಮಾರಾಟದ ವಿವರಗಳನ್ನು 2017ರ ಜುಲೈನಿಂದ 2020ರ ಜನವರಿವರೆಗೆ ಸಲ್ಲಿಸದವರಿಗೆ ವಿಧಿಸಲಾಗುತ್ತಿದ್ದ ಗರಿಷ್ಠ ಜುಲ್ಮಾನೆಯನ್ನು 500 ರೂ.ಗೆ ಇಳಿಸಿರುವುದಾಗಿ ಹೇಳಿದರು.
ಪರೋಕ್ಷ ತೆರಿಗೆ ಕುರಿತು ನಿರ್ಧಾರ ಕೈಗೊಳ್ಳುವ ಸಮಿತಿಯು ದೇಶದಲ್ಲಿರುವ ಕೋವಿಡ್​-19 ಪರಿಸ್ಥಿತಿ ಮತ್ತು ಅದರ ಪರಿಣಾಮದ ಕುರಿತು ಚರ್ಚಿಸಿತು ಎಂದು ತಿಳಿಸಿದರು.
ಮೂಕಪ್ರಾಣಿ ಪ್ರೀತಿಗೆಂದೇ ದೇವರು ಮನುಷ್ಯ ಜನ್ಮ ಸೃಷ್ಟಿಸಿದ್ದಾನಂತೆ. ನಿಜವಿರಬಹುದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 17 =
Remember me
