ಮುಂಬೈ:ಇತ್ತೀಚೆಗಷ್ಟೇ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮಹಾರಾಷ್ಟ್ರದ ಟ್ರೈನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್, ಒಬ್ಬ ಅಧಿಕಾರಿಗೆ ಸರ್ಕಾರ ಕೊಡುವ ಸವಲತ್ತುಗಳನ್ನು ಮೀರಿ ತನಗೆ ಹೇಗೆ ಬೇಕೋ ಹಾಗೆ ಅಧಿಕಾರ ದುರ್ಬಳಕೆ ಮಾಡಿಕೊಂಡ ರೀತಿಗೆ ರಾಜ್ಯ ಸರ್ಕಾರ ಛೀಮಾರಿ ಹಾಕಿತ್ತು. ಪುಣೆಯಲ್ಲಿ ಟ್ರೈನಿ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪೂಜಾ ತನಗೆ ನೀಡಲಾಗಿದ್ದ ಅಧಿಕಾರವನ್ನು ಅತಿಯಾಗಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ ಹಿನ್ನೆಲೆ ರಾಜ್ಯ ಸರ್ಕಾರವೇ ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ವಾಶಿಮ್‌ನಲ್ಲಿ ಸೂಪರ್‌ನ್ಯೂಮರರಿ ಸಹಾಯಕ ಕಲೆಕ್ಟರ್ ಆಗಿ ಕೆಲಸ ಮಾಡುವಂತೆ ಪುಣೆಯಿಂದ ವರ್ಗಾಯಿಸಿತ್ತು.
ಇದನ್ನೂ ಓದಿ:ಮುಡಾ ಹಗರಣ ಅಹೋರಾತ್ರಿ ಧರಣಿ
ಸದ್ಯ ಪೂಜಾ ಪೋಷಕರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿರುವ ಪುಣೆ ಪೊಲೀಸರು, ಮತ್ತೊಂದೆಡೆ ಟ್ರೈನಿ ಐಎಎಸ್​ ಅಧಿಕಾರಿಯನ್ನು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಈ ಮಧ್ಯೆ ಕೆಲಸ ಪಡೆಯುವ ಸಲುವಾಗಿ ಆಕೆ ನೀಡಿದ್ದ ಲೋಕೋಮೋಟರ್ ಅಂಗವೈಕಲ್ಯ ಪ್ರಮಾಣ ಪತ್ರ  ಫೇಕ್ ಎಂಬ ಪ್ರಶ್ನೆ ಉದ್ಭವಗೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ, ಪ್ರಮಾಣಪತ್ರ ನೀಡಿರುವ ಪುಣೆಯ ಯಶವಂತರಾವ್ ಚವಾಣ್ ಮೆಮೋರಿಯಲ್ (ವೈಸಿಎಮ್​) ಆಸ್ಪತ್ರೆ ವೈದ್ಯರಿಗೆ ಪರಿಶೀಲಿಸಿ, ಇದೇ ನೀವೆ ಕೊಟ್ಟಿದ್ದಾ? ಸರಿಯಿದ್ಯಾ? ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿರುವ ವೈದ್ಯರು, ಇದರಲ್ಲಿ ಯಾವುದೇ ಮೋಸ ಇರುವುದು ಕಂಡುಬಂದಿಲ್ಲ. ಸರ್ಟಿಫಿಕೆಟ್ ಸರಿಯಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವೈಸಿಎಂ ಆಸ್ಪತ್ರೆಯು ತನ್ನ ಆಂತರಿಕ ತನಿಖೆಯಲ್ಲಿ ಪೂಜಾ ಖೇಡ್ಕರ್‌ಗೆ ಶೇ. 7ರಷ್ಟು ಲೋಕೋಮೋಟರ್ ಅಸಾಮರ್ಥ್ಯ ಪ್ರಮಾಣಪತ್ರವನ್ನು ನೀಡಿರುವುದರಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತನಿಖೆ ಕೈಗೊಂಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಆಸ್ಪತ್ರೆಯ ಡೀನ್ ಡಾ. ರಾಜೇಂದ್ರ ವೇಬಲ್ ಮಾತನಾಡಿ, “ನಮ್ಮ ಫಿಸಿಯೋಥೆರಪಿ ಮತ್ತು ಮೂಳೆಚಿಕಿತ್ಸೆ ವಿಭಾಗಗಳ ಸಂಪೂರ್ಣ ಮೌಲ್ಯಮಾಪನದ ಬಳಿಕವೇ ಪ್ರಮಾಣಪತ್ರವನ್ನು ನೀಡಲಾಗಿದೆ. ಅವರಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ ಮತ್ತು ಇದರಲ್ಲಿ ಯಾವುದೇ ಕಳ್ಳಾಟ ನಡೆದಿಲ್ಲ ಎಂದು ಆಂತರಿಕ ವರದಿಯು ದೃಢಪಡಿಸಿದೆ” ಎಂದು ಸ್ಪಷ್ಟಪಡಿಸಿದರು,(ಏಜೆನ್ಸೀಸ್).
ನಿಮ್ಮ ಕರಿಯರ್​ನಲ್ಲಿ ಇದೊಂದೇ ಬಾಕಿ! ವಿರಾಟ್​ ಕೊಹ್ಲಿಗೆ ವಿಶೇಷ ಆಹ್ವಾನ ಕೊಟ್ಟ ಪಾಕ್​ ಮಾಜಿ ಕ್ರಿಕೆಟಿಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − seven =
Remember me
