ಚೆನ್ನೈ:ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳನ್ನು ಹೆತ್ತ ಉದ್ಯೋಗಸ್ಥ ಮಹಿಳೆ ಎರಡನೇ ಪ್ರಸವಕ್ಕೆ ಹೆರಿಗೆ ರಜೆ ಸೌಲಭ್ಯಕ್ಕೆ ಅರ್ಹರಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಎರಡನೇ ಹೆರಿಗೆಯಲ್ಲಿ ಹುಟ್ಟುವ ಮಗುವನ್ನು ಮೂರನೇ ಮಗುವೆಂದು ಪರಿಗಣಿಸಲಾಗುವುದರಿಂದ ಈ ಸೌಲಭ್ಯ ಪಡೆಯಲಾಗದು ಎಂದು ಕೋರ್ಟ್ ಹೇಳಿದೆ.
ನಿಯಮಗಳ ಪ್ರಕಾರ ಮೊದಲ ಎರಡು ಪ್ರಸವಕ್ಕೆ ಮಹಿಳೆಯರಿಗೆ ಹೆರಿಗೆ ರಜೆ ಸೌಲಭ್ಯ ಅನ್ವಯವಾಗುತ್ತದೆ. ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳು ಜನಿಸಿದ್ದು, ಮತ್ತೆ ಗರ್ಭಧರಿಸಿದ ಮಹಿಳೆಗೆ ಅದು ಎರಡನೆಯ ಹೆರಿಗೆಯೋ ಅಥವಾ ಮೂರನೆಯದೋ ಎನ್ನುವುದು ಚರ್ಚಾಸ್ಪದ ವಿಚಾರ. ಆದರೆ, ಅವಳಿ ಶಿಶು ಜನನ ಏಕಕಾಲದ ಪ್ರಕ್ರಿಯೆಯಲ್ಲ. ಒಂದರ ನಂತರ ಒಂದು ಜನಿಸುತ್ತವೆ. ಹೀಗಾಗಿ ಅವಳಿ ಮಕ್ಕಳ ಹುಟ್ಟಿನ ಸಮಯವನ್ನು ಆಧರಿಸಿ ಹೆರಿಗೆ ಎಷ್ಟನೆಯದು ಎಂಬುದನ್ನು ನಿರ್ಧರಿಸಬೇಕಾಗುತ್ತದೆ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಸ್ತುತ ಪ್ರಕರಣದಲ್ಲಿ ಎರಡನೇ ಹೆರಿಗೆಯಿಂದ ಮೂರನೇ ಮಗು ಜನಿಸಿದೆ. ಇದನ್ನು ಕಾನೂನು ನಿಯಮಗಳಲ್ಲಿ ಉಲ್ಲೇಖಿಸಿರುವ ಗಣಿತದ ಪ್ರಕಾರ ವ್ಯಾಖ್ಯಾನಿಸಲಾಗದು ಎಂದು ವಿಭಾಗೀಯಪೀಠ ಹೇಳಿತು. ಮಹಿಳೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರದಿದ್ದರೆ ಮಾತ್ರ ಹೆರಿಗೆ ರಜೆ ಸೌಲಭ್ಯ ಆಕೆಗೆ ಲಭ್ಯವಾಗುತ್ತದೆ. ಈ ವಾಸ್ತವಾಂಶವು ಅರ್ಜಿದಾರ ಮಹಿಳೆ ಕೋರಿರುವ ಸೌಲಭ್ಯದ ಸ್ವರೂಪವನ್ನು ಬದಲಾಯಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಏನಿದು ಪ್ರಕರಣ?
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್​ಎಫ್) ಮಹಿಳಾ ಸಿಬ್ಬಂದಿಯೊಬ್ಬರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎ.ಪಿ. ಸಾಹಿ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಏಕ ಸದಸ್ಯ ಪೀಠವು ಮಹಿಳೆಗೆ 180 ದಿನಗಳ ಹೆರಿಗೆ ರಜೆ ಮತ್ತು ಇತರ ಸೌಲಭ್ಯಗಳನ್ನು ಮಂಜೂರು ಮಾಡಿತ್ತು.
ಇದನ್ನು ಪ್ರಶ್ನಿಸಿ ಕೇಂದ್ರ ಗೃಹ ಸಚಿವಾಲಯ ಮೇಲ್ಮನವಿ ಸಲ್ಲಿಸಿತ್ತು. ಏಕ ಸದಸ್ಯ ಪೀಠವು ತಮಿಳುನಾಡು ಸರ್ಕಾರಿ ನೌಕರರ ಸೇವಾನಿಯಮಗಳನ್ವಯ ರಜೆ ಮತ್ತು ಇತರ ಸೌಲಭ್ಯಗಳನ್ನು ಮಂಜೂರು ಮಾಡಿತ್ತು. ಆದರೆ, ಅರ್ಜಿದಾರ ಮಹಿಳೆ ಕೇಂದ್ರದ ಉದ್ಯೋಗಿ ಆಗಿರುವ ಕಾರಣ ಅವರಿಗೆ ರಾಜ್ಯ ಸರ್ಕಾರದ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಗೃಹ ಸಚಿವಾಲಯ ವಾದಿಸಿತ್ತು.(ಏಜೆನ್ಸೀಸ್)
ಕೋರ್ಟ್ ಹೇಳಿದ್ದು
ನ್ಯಾಯಾಲಯದ ಈ ತೀರ್ಪು ಸರಿಯಿಲ್ಲ. ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳಾಗಲಿ, ತ್ರಿವಳಿ ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳಾಗಲಿ, ಅದನ್ನು ಮೊದಲ ಹೆರಿಗೆ ಎಂದಷ್ಟೇ ಪರಿಗಣಿಸಬೇಕು. ನಂತರದ್ದನ್ನು ಎರಡನೇ ಹೆರಿಗೆ ಎಂದು ಪರಿಗಣಿಸಬೇಕು. ಇಲ್ಲಿ ಎಷ್ಟು ಮಕ್ಕಳು ಜನಿಸಿದರು ಎಂಬುದು ಮುಖ್ಯವಲ್ಲ. ಎಷ್ಟನೇ ಹೆರಿಗೆ ಎಂಬುದನ್ನಷ್ಟೇ ಪರಿಗಣಿಸಬೇಕು.
| ಪ್ರಮೀಳಾ ನೇಸರ್ಗಿ ಹಿರಿಯ ವಕೀಲೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 14 =
Remember me
