ಮುಂಬೈ:ಶಬ್ದಮಾಲಿನ್ಯ ತಡೆ ಹಾಗೂ ಅನಾವಶ್ಯಕ ಹಾರ್ನ್​ಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಟ್ರಾಫಿಕ್​ ಪೋಲಿಸರು ನೋ ಹಾರ್ನ್ ಡೇ ಜಾಗೃತಿ ಆಂದೋಲನ ನಡೆಸಲು ಮುಂದಾಗಿದ್ದಾರೆ.
ಇದನ್ನೂ ಓದಿ:51 ಟ್ರ್ಯಾಕ್ಟರ್​ಗಳಲ್ಲಿ ಮದುವೆ ದಿಬ್ಬಣ ಬಂದ ವರ
ಮುಂಬೈ ಟ್ರಾಫಿಕ್ ಪೊಲೀಸರು ಬುಧವಾರದಂದು ನೋ ಹಾರ್ನ್ ಡೇ ಎಂಬ ಜಾಗೃತಿ ಆಂದೋಲನವನ್ನು ಆಚರಿಸಲಿದ್ದು, ಅನಗತ್ಯ ಹಾರ್ನ್ ಮಾಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಮತ್ತು ಮಾನವನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಜಾಗೃತಿಯನ್ನು ಮೂಡಿಸಲು ಯತ್ನಿಸುತ್ತಿದ್ದಾರೆ. ಜತೆಗೆ ವಾಹನ ಚಾಲಕರ ಬೇಕಾಬಿಟ್ಟಿ ಹಾರ್ನ್ ಮಾಡುವ ಪ್ರವೃತ್ತಿಯನ್ನು ತಡೆಯಲು ಟ್ರಾಫಿಕ್ ಕಂಟ್ರೋಲ್ ಬ್ರಾಂಚ್ ಜೂನ್ 14ರಂದು ‘ನೋ ಹಾಂಕಿಂಗ್ ಡೇ’ ಆಚರಿಸಲು ನಿರ್ಧರಿಸಿದೆ.
ಕೇಂದ್ರ ಮೋಟಾರು ವಾಹನ ಕಾಯ್ದೆ, ಮೋಟಾರು ವಾಹನ ಕಾಯ್ದೆ ಮತ್ತು ಪರಿಸರ ಸಂರಕ್ಷಣಾ ಕಾಯ್ದೆಯನ್ನು ಅನುಸರಿಸಲು ವಿಫಲರಾದವರು ಕ್ರಮ ಎದುರಿಸಬೇಕಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ವಾಹನ ಚಾಲಕರು ತಮ್ಮ ವಾಹನಗಳ ಹಾರ್ನ್‌ಗಳನ್ನು ಬಾರಿಸದಂತೆ ‘ನೋ ಹಾಂಕಿಂಗ್ ಡೇ’ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವಂತೆ ನಾವು ಕೋರುತ್ತೇವೆ ಎಂದು ಮುಂಬೈ ಸಂಚಾರ ಪೊಲೀಸರು ತಿಳಿಸಿದ್ದು ಈ ಮೂಲಕ ಪರಿಸರಕ್ಕೆ ಪೂರಕವಾಗುವ ವಿಶಿಷ್ಟ ಆಂದೋಲನ ನಡೆಸಲು ಮುಂದಾಗಿದ್ದಾರೆ.
ಮುಂಬೈನ ಟ್ರಾಫಿಕ್ ಕಂಟ್ರೋಲ್ ಶಾಖೆಯು ನಗರದ ಎಲ್ಲಾ ಚಾಲಕರು ಮತ್ತು ಸವಾರರು ತಮ್ಮ ವಾಹನಗಳ ಹಾರ್ನ್‌ಗಳನ್ನು ಬಾರಿಸದಂತೆ ಸೂಚಿಸಿದ್ದು, ಅಂಬ್ಯುಲೆನ್ಸ್‌ಗಳು, ಅಗ್ನಿಶಾಮಕ ದಳ ಮತ್ತು ತುರ್ತು ಕರ್ತವ್ಯದಲ್ಲಿರುವ ಇತರ ವಾಹನಗಳಿಗೆ ಮಾತ್ರ ಶಬ್ದ ಮಾಡಲು ಅನುಮತಿಸಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − eight =
Remember me
