ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವಂತೆ ಏಪ್ರಿಲ್​ 14ರಂದು ಲಾಕ್​ಡೌನ್​ ಅಂತ್ಯವಾಗುತ್ತಲೇ ಎಲ್ಲ ರೈಲು ಸೇವೆಗಳು ತಕ್ಷಣವೆ ಮರುಆರಂಭವಾಗುವುದಿಲ್ಲ ಎಂದು ಭಾರತೀಯ ರೈಲ್ವೆ ಸ್ಪಷ್ಟಪಡಿಸಿದೆ.
ಕೆಲವೊಂದು ಮಾಧ್ಯಮಗಳಲ್ಲಿ ಲಾಕ್​ಡೌನ್​ ಅಂತ್ಯವಾಗುತ್ತಲೇ ರೈಲ್ವೆ ಸೇವೆಗಳು ಮರುಆರಂಭಗೊಳ್ಳಲಿವೆ ಎಂಬರ್ಥದ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ಅಲ್ಲದೆ, ಸೇವೆಗಳ ಮರುಆರಂಭಕ್ಕೆ ರೈಲ್ವೆ ಇಲಾಖೆ ಹಲವು ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.
ಆದರೆ ಈ ಎಲ್ಲ ಸುದ್ದಿಗಳು ಸುಳ್ಳು. ಲಾಕ್​ಡೌನ್​ ಅಂತ್ಯವಾಗುತ್ತಲೇ ರೈಲ್ವೆ ಸೇವೆಗಳನ್ನು ಮರುಆರಂಭಿಸುವ ಬಗ್ಗೆ ಯಾವುದೇ ವೇಳಾಪಟ್ಟಿಯನ್ನು ಸಿದ್ಧಪಡಿಸಿಲ್ಲ, ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿಲ್ಲ. ಇವೆಲ್ಲವೂ ಆಧಾರರಹಿತ ಸುದ್ದಿಗಳು. ಆದ್ದರಿಂದ, ಇವನ್ನು ನಂಬಬಾರದು ಎಂದು ರೈಲ್ವೆ ಸಚಿವಾಲಯ ಟ್ವೀಟ್​ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.
ಒಂದು ವೇಳೆ ಸೇವೆಗಳನ್ನು ಮರುಆರಂಭಿಸುವುದಾದರೆ, ಈ ಬಗ್ಗೆ ಸೂಕ್ತ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಲಾಗುವುದು ಎಂದು ಟ್ವೀಟ್​ನಲ್ಲಿ ಹೇಳಲಾಗಿದೆ.
ಲಾಕ್​ಡೌನ್​ ತೆರವು ಬಳಿಕ ಎಲ್ಲೆಡೆ ಏಕಕಾಲಕ್ಕೆ ಸಿಗದು ರೈಲು ಸೇವೆ: ಹಂತಹಂತವಾಗಿ ಆರಂಭಿಸಲು ಸಿದ್ಧತೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:11 + 5 =
Remember me
