ಅಹಮದಬಾದ್​:ಕರ್ನಾಟಕದಲ್ಲಿ ನಂದಿನಿ ಬ್ರ್ಯಾಂಟ್​ ಜೊತೆ ಸ್ಪರ್ಧಿಸುವ ಮಾತೇ ಇಲ್ಲ ಎಂದು ಹೇಳುವ ಮೂಲಕ ಅಮುಲ್​ ಕಂಪನಿ ವ್ಯವಸ್ಥಾಪಕ ನಿರ್ದೇಶಕ(MD) ಜಯನ್​ ಮೆಹ್ತಾ ಹೇಳಿದ್ದಾರೆ.
ಎರಡು ಬ್ರ್ಯಾಂಡ್​ಗಳ ಒಕ್ಕೂಟವೂ ರೈತರದ್ದೇ ಆಗಿದೆ. ಎರಡು ಬ್ರ್ಯಾಂಡ್​ಗಳ ನಡುವೆ ಸ್ಪರ್ದೆಯ ಮಾತಿಲ್ಲ ಎಂದು ನಂದಿನಿ vs ಅಮುಲ್​ ವಿವಾದದ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಅಮೂಲ್​ ಕಂಪನಿಯ ಉತ್ಪನ್ನಗಳು ಪೂರ್ಣಪ್ರಮಾಣದಲ್ಲಿ ಕರ್ನಾಟಕದ ಮಾರುಕಟ್ಟೆಯನ್ನು ಪ್ರವೇಶಿಸುವುದಿಲ್ಲ. ಆನ್​ಲೈನ್​​ ಮೂಲಕ ನಾವು ಹಾಲು ಮತ್ತು ಮೊಸರನ್ನು ಮಾರಾಟ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
#WATCH| There is no issue of Amul vs Nandini. Both are cooperatives and owned by farmers and both have been working together for the last several decades to make India the largest producer of milk in the world: Jayen Mehta, Amul MD on Amul vs Nandini controversy in poll-bound…pic.twitter.com/8XWC8MrwZZ
ಇದನ್ನೂ ಓದಿ:ಭಾರತದ ಮುಖ್ಯ ನ್ಯಾಯಮೂರ್ತಿ ಆಗಬೇಕೆಂಬ ಇಂಗಿತ; ಬಾಲಕಿಯ ಕನಸಿಗೆ ಪ್ರಧಾನಿಯ ಸಲಹೆ ಹೀಗಿದೆ…
ಕಳೆದ 25 ವರ್ಷಗಳಿಂದ KMFಗೆ ಸೇರಿದ್ದ ಮೂರು ಘಟಕಗಳಲ್ಲಿ ನಾವು ಐಸ್​ಕ್ರೀಂ ತಯಾರಿಸುತ್ತಿದ್ದೇವೆ. ಕೋವಿಡ್​ ಸಮಯದಲ್ಲಿ ನಾವು KMFನಿಂದ 5 ಟನ್​ ಚೀಸ್​ ಖರೀದಿಸಿದ್ದೇವೆ. 2015-16ರಿಂದಲೇ ಉತ್ತರ ಕರ್ನಾಟಕ ಎರಡು ಜಿಲ್ಲೆಗಳಲ್ಲಿ ಅಮೂಲ್​​ ಹಾಲುಗಳ ಮಾರಾಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ನಂದಿನಿ ಹಾಲಿಗೆ ಸರ್ಕಾರದ ವತಿಯಿಂದ ಸಬ್ಸಿಡಿ ನೀಡುವ ಕಾರಣ ಅದರ ಹಾಲು ಹಾಗೂ ಮೊಸರಿನ ದರವು ಅಗ್ಗವಾಗಿದೆ. ಅಮೂಲ್​ ಹಾಲಿನ ದರವು ಲೀಟರಿಗೆ 54 ರೂಪಾಯಿ ಇದ್ದರೆ ನಂದಿನಿ ಹಾಲಿನ ದರವು ಲೀಟರಿಗೆ 39 ರೂಪಾಯಿ ಇದೆ. ಈ ಕಾರಣಕ್ಕಾಗಿಯೇ ಉಭಯ ಬ್ರ್ಯಾಂಡ್​ಗಳ ನಡುವೆ ಸ್ಪರ್ಧೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅಮೂಲ್​ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಯನ್​ ನೆಹ್ತಾ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 5 =
Remember me
