ನವದೆಹಲಿ:ರಸ್ತೆಗಳು ಸುಸ್ಥಿತಿಯಲ್ಲಿ ಇರದಿದ್ದರೆ ಹೆದ್ದಾರಿ ಏಜೆನ್ಸಿಗಳು ಟೋಲ್ ವಿಧಿಸಬಾರದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಜೂನ್ 26 ರಂದು ಉಪಗ್ರಹ ಆಧಾರಿತ ಟೋಲಿಂಗ್‌ನ ಜಾಗತಿಕ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಈ ಹಣಕಾಸು ವರ್ಷದಲ್ಲಿ 5,000 ಕಿ.ಮೀ.ಗೂ ಹೆಚ್ಚು ಉಪಗ್ರಹ ಆಧಾರಿತ ಟೋಲಿಂಗ್, ಗ್ಲೋಬಲ್‌ ನ್ಯಾವಿಗೇಷನ್‌ ಸ್ಯಾಟಲೈಟ್‌ ಸಿಸ್ಟಂ(GNSS) ಅನ್ನು ಜಾರಿಗೊಳಿಸಲು ಉದ್ದೇಶಿಸಿರುವುದಾಗಿ ತಿಳಿಸಿದ್ದಾರೆ.
ನೀವು ಉತ್ತಮ ಗುಣಮಟ್ಟದ ಸೇವೆಯನ್ನು ನೀಡದಿದ್ದರೆ, ನೀವು ಟೋಲ್ ವಿಧಿಸಬಾರದು, ನೀವು ಉತ್ತಮ ಗುಣಮಟ್ಟದ ರಸ್ತೆಯನ್ನು ಒದಗಿಸುವ ಮೂಲಕ ಬಳಕೆದಾರರ ಶುಲ್ಕವನ್ನು ನೀವು ಸಂಗ್ರಹಿಸಬೇಕು. ನೀವು ಗುಂಡಿಗಳು, ಕೆಸರು ಇರುವ ರಸ್ತೆಗಳಲ್ಲಿ ಟೋಲ್ ಸಂಗ್ರಹಿಸಿದರೆ, ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಹೇಳಿದರು
ಟೋಲ್ ಸಂಗ್ರಹಣೆಗೆ ಹೊಸ ವ್ಯವಸ್ಥೆ ಹೇಗೆ?ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಿಎನ್‌ಎಸ್‌ಎಸ್‌ (ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ) ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್‌ಗೆ (ಇಟಿಸಿ) ಮುಂದಾಗಿದೆ. ಫಾಸ್ಟ್​​ಟ್ಯಾಗ್​ ವ್ಯವಸ್ಥೆಯನ್ನೇ ಶುಲ್ಕ ಸಂಗ್ರಹಕ್ಕೆ ಬಳಸಿಕೊಳ್ಳಲಿದೆ.
ಆರಂಭಿಕ ಹಂತದಲ್ಲಿ ಫಾಸ್ಟ್​​ಟ್ಯಾಗ್ ವ್ಯವಸ್ಥೆ ಬಳಸಿಕೊಂಡೇ ಜಿಎನ್‌ಎಸ್‌ಎಸ್‌-ಇಟಿಸಿ ವ್ಯವಸ್ಥೆ ಜಾರಿಯಾಗಲಿದೆ. (ರೇಡಿಯೊ ಪ್ರೀಕ್ವೆನ್ಸಿ ಐಡೆಂಟಿಫಿಕೇಷನ್) ಮತ್ತು ಹೊಸ ವ್ಯವಸ್ಥೆ ಎರಡೂ ಜಾರಿಯಲ್ಲಿ ಇರಲಿವೆ. ಮೊದಲಿಗೆ ವಾಣಿಜ್ಯ ವಾಹನಗಳಿಗೆ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಬಳಿಕ ಖಾಸಗಿ ವಾಹನಗಳಿಗೆ ಈ ಸೇವೆ ವಿಸ್ತರಿಸಲು ಪ್ರಾಧಿಕಾರವು ನಿರ್ಧರಿಸಿದೆ.
ಟೀಮ್​ ಇಂಡಿಯಾದಿಂದ ಮೋಸದಾಟ! ಇಂಜಮಾಮ್ ಆರೋಪಕ್ಕೆ ಖಡಕ್​ ತಿರುಗೇಟು ಕೊಟ್ಟ ರೋಹಿತ್​ ಶರ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 2 =
Remember me
