ನವದೆಹಲಿ:ಪತ್ನಿಯ ಮೇಲೆ ಹಲ್ಲೆ ಮಾಡಿ, ಹಿಂಸಿಸುವ ಹಕ್ಕನ್ನು ಯಾವುದೇ ಕಾನೂನು ನೀಡಿಲ್ಲ ಎಂದು ಹೇಳುವ ಮೂಲಕ ಸಂತ್ರಸ್ತ ಮಹಿಳೆಯ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿರುವ ದೆಹಲಿ ಹೈಕೋರ್ಟ್​, ವಿಚ್ಛೇದನಕ್ಕೆ ಅನುಮತಿಸಿದೆ.
ಈ ಪ್ರಕರಣದಲ್ಲಿ ಪತಿಯು ತನ್ನ ಪತ್ನಿಯೊಂದಿಗೆ ಒಡನಾಟವನ್ನು ಪುನರಾರಂಭಿಸಲು ವಿಫಲನಾಗಿರುವುದು ಸಾಬೀತಾಗಿದೆ ಮತ್ತು ದೈಹಿಕವಾಗಿ ಬೇರೆಯಾಗಿರುವ ಗಂಡ, ತನ್ನ ಪತ್ನಿಯನ್ನು ಮನೆಗೆ ಮರಳಿ ಕರೆತರದಿರುವ ಸಂಕಲ್ಪವನ್ನು ಮಾಡಿದ್ದಾನೆ. ಅಲ್ಲದೆ, ಮಹಿಳೆಯು ದೈಹಿಕ ಹಲ್ಲೆಗೆ ಒಳಗಾಗಿರುವುದು ವೈದ್ಯಕೀಯ ದಾಖಲೆಗಳಿಂದ ದೃಢೀಕರಿಸಲ್ಪಟ್ಟಿದೆ ಎಂದು ಹೈಕೋರ್ಟ್ ಹೇಳಿದೆ.
ಈ ಪ್ರಕರಣದ ಪ್ರತಿವಾದಿಯು ಆಕೆಯ ಗಂಡನಾಗಿದ್ದು, ಹೆಂಡತಿ ಮೇಲೆ ಹಲ್ಲೆ ಮಾಡಿ, ಕಿರುಕುಳ ನೀಡಲು ಆತನಿಗೆ ಯಾವುದೇ ಕಾನೂನು ಹಕ್ಕನ್ನು ನೀಡಿಲ್ಲ. ಪ್ರತಿವಾದಿಯ ಇಂತಹ ವರ್ತನೆ ಖಂಡಿತವಾಗಿ ದೈಹಿಕ ಕ್ರೌರ್ಯವಾಗಿದ್ದು, 1955ರ ಹಿಂದು ವಿವಾಹ ಕಾಯ್ದೆ (ಎಚ್​ಎಂಎ)ಯ ಸೆಕ್ಷನ್​ 13 (1) (ಐಎ) ಅಡಿಯಲ್ಲಿ ವಿಚ್ಛೇದನಕ್ಕೆ ಅನುಮತಿ ನೀಡುತ್ತದೆ ಎಂದು ಸುರೇಶ್​ ಕುಮಾರ್​ ಕೈಟ್​ ಮತ್ತು ನೀನಾ ಬನ್ಸಾಲ್​ ಕೃಷ್ಣ ಅವರನ್ನೊಳಗೊಂಡ ನ್ಯಾಯಮೂರ್ತಿಗಳ ಪೀಠ ತೀರ್ಪು ಪ್ರಕಟಿಸಿದೆ.
ತೀರ್ಪನ್ನು ಅಂಗೀಕರಿಸುವ ಸಮಯದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದ ಪ್ರತಿವಾದಿಗೆ ವಿಚ್ಛೇದನ ನೀಡಲು ಯಾವುದೇ ಅಭ್ಯಂತರ ಇರಲಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಅದರಂತೆ ಮಹಿಳೆಯ ಮೇಲ್ಮನವಿ ಅರ್ಹತೆ ಪಡೆದುಕೊಂಡಿದ್ದು, ಅರ್ಜಿದಾರಳು ಹಾಗೂ ಪ್ರತಿವಾದಿಯ ನಡುವಿನ ವಿವಾಹ ಈ ಮೂಲಕ ವಿಸರ್ಜಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿತು.
ಇದನ್ನೂ ಓದಿ:ಸಣ್ಣ ನೀರಾವರಿ ಕೊಡುಗೆ ಏರಿಕೆ, ಸಾಮರ್ಥ್ಯ ಇಳಿಕೆ: ಕರ್ನಾಟಕದ ಸ್ಥಿತಿಗತಿ ಬಹಿರಂಗಪಡಿಸಿದ 6ನೇ ಗಣತಿ ವರದಿ; ಖಾಸಗಿ ಒಡೆತನದ್ದೇ ಪಾರಮ್ಯ
ತನ್ನ ಮೇಲಿನ ಕ್ರೌರ್ಯ ಮತ್ತು ಗಂಡ ತೊರೆದಿರುವ ಆಧಾರದ ಮೇಲೆ ಪತಿಯಿಂದ ವಿಚ್ಛೇದನ ಬಯಸಿ ಮಹಿಳೆಯೊಬ್ಬಳು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಳು. ಆದರೆ, ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ದೆಹಲಿ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಹೈಕೋರ್ಟ್ ವಿಚಾರಣೆ ನಡೆಸಿ, ತೀರ್ಪು ನೀಡಿದೆ. 2013ರ ಮೇ 11ರಂದು ದೈಹಿಕ ಹಲ್ಲೆ ನಡೆಸಿದ ಬಳಿಕ ಗಾಯಾಳು ಸ್ಥಿತಿಯಲ್ಲಿಯೇ ಆಕೆಯನ್ನು ತವರು ಮನೆಗೆ ಕರೆದುಕೊಂಡು ಹೋಗಿ ಬಿಡಲಾಗಿತ್ತು. ಮತ್ತೆ ಗಂಡನ ಮನೆ ಸೇರುವ ಆಕೆಯ ಅನೇಕ ಪ್ರಯತ್ನಗಳ ಹೊರತಾಗಿಯೂ, ಗಂಡ ಮಾತ್ರ ಆಕೆಯನ್ನು ಮನೆಗೆ ಮರಳಿ ಕರೆದೊಯ್ಯಲು ನಿರಾಕರಿಸಿದನು ಎಂದು ಮಹಿಳೆ ಅರ್ಜಿಯಲ್ಲಿ ಉಲ್ಲೇಜಿಸಿದ್ದಾಳೆ. ಅಲ್ಲದೆ, ಇದಕ್ಕೆ ಗಂಡನು ಸಹ ಉತ್ತರ ನೀಡದೇ ಮೌನಕ್ಕೆ ಜಾರಿದ್ದು, ತನ್ನ ತಪ್ಪನ್ನು ಒಪ್ಪಿಕೊಂಡಂತಾಯಿತು. ಹೀಗಾಗಿ ನ್ಯಾಯಾಲಯ ಡಿವೋರ್ಸ್​ಗೆ ಅನುಮತಿ ನೀಡಿ ಕೌಟುಂಬಿಕ ತೀರ್ಪನ್ನು ರದ್ದು ಮಾಡಿದೆ.
ಮಹಿಳೆಯ ಪ್ರಕಾರ, ಆಕೆ ಮತ್ತು ಆಕೆಯ ಗಂಡ 2013ರ ಫೆಬ್ರವರಿ ತಿಂಗಳಲ್ಲಿ ವಿವಾಹವಾದರು. ಮತ್ತು ಗಂಡನ ಪಾಲಕರು ಬಹಳ ಹಿಂದೆಯೇ ಸಾವನ್ನಪ್ಪಿದ್ದರಿಂದ ಇಬ್ಬರು ಪತಿಯ ಚಿಕ್ಕಮ್ಮನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ತನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಯಿತು ಮತ್ತು ಹಲವಾರು ಬಾರಿ ದೌರ್ಜನ್ಯಗಳನ್ನು ಎಸಗಲಾಯಿತು ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಸಮಯ ಕಳೆದಂತೆ ಎಲ್ಲವೂ ಸರಿ ಹೋಗುತ್ತದೆ ಎಂದು ಆರಂಭದಲ್ಲಿ ಸಹಿಸಿಕೊಂಡೆ. ಆದರೆ, ಯಾವುದೂ ಸರಿ ಹೋಗಲಿಲ್ಲ. ಗಂಡ ಮತ್ತು ಅವನ ಕುಟುಂಬದ ಸದಸ್ಯರ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇದ್ದವು. ನನ್ನನ್ನು ಅವರು ತೆಗೆದುಹಾಕಲು ಬಯಸಿದ್ದರು. ಶ್ರೀಮಂತ ಕುಟುಂಬದ ಮಹಿಳೆಯೊಬ್ಬರನ್ನು ಮರು ಮದುವೆ ಮಾಡಿಕೊಳ್ಳುವ ಯೋಜನೆಯಲ್ಲಿದ್ದರು. ಅಲ್ಲದೆ, ವರದಕ್ಷಿಣೆಗಾಗಿ ಪದೇ ಪದೇ ಕಿರುಕುಳ ನೀಡುತ್ತಿದ್ದರು ಎಂದು ಅರ್ಜಿಯಲ್ಲಿ ಮಹಿಳೆ ಆರೋಪ ಮಾಡಿದ್ದಾರೆ.(ಏಜೆನ್ಸೀಸ್​)
ಸಣ್ಣ ನೀರಾವರಿ ಕೊಡುಗೆ ಏರಿಕೆ, ಸಾಮರ್ಥ್ಯ ಇಳಿಕೆ: ಕರ್ನಾಟಕದ ಸ್ಥಿತಿಗತಿ ಬಹಿರಂಗಪಡಿಸಿದ 6ನೇ ಗಣತಿ ವರದಿ; ಖಾಸಗಿ ಒಡೆತನದ್ದೇ ಪಾರಮ್ಯ

ವೇಗದ ಬೌಲರ್​ ಆಗಬೇಕಾಗಿದ್ದ ಕನ್ನಡಿಗ ಮನು ಈಗ ಜಾವೆಲಿನ್​ ಥ್ರೋ ತಾರೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 15 =
Remember me
