ನವದೆಹಲಿ:ಸದ್ಯ ಲಾಕ್​ಡೌನ್​ ಯುಗ ಮುಗಿದಂತಾಗಿದೆ. ಜನಜೀವನವನ್ನು ಸಹಜ ಸ್ಥಿತಿಗೆ ತರಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಕರೊನಾ ನಿಯಂತ್ರಣಕ್ಕೆ ಬರುವ ತನಕ ಸಾರ್ವರ್ಜನಿಕ ಸಭೆ ಸಮಾರಂಭ ಸೇರಿ ಹಲವು ಸಂಗತಿಗಳ ಮೇಲೆ ನಿರ್ಬಂಧವಿರಲಿದೆ. ಸದ್ಯ ಎಲ್ಲರ ಗಮನವಿರೋದು ಶಾಲೆಗಳು ಯಾವಾಗ ಆರಂಭವಾಗುತ್ತೆ ಎಂಬುದರ ಮೇಲೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಬಗ್ಗೆ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಶಾಲೆಯಲ್ಲಿ ನಡೆಸಬೇಕಾದ ಹಾಗೂ ನಡೆಸಬಾರದ ಸಂಗತಿಗಳ ಬಗ್ಗೆ ಹಲವು ಸಲಹೆಗಳನ್ನು ನೀಡಲಿದೆ.
ಮೊದಲನೆಯದಾಗಿ ಶಾಲೆಗಳಲ್ಲಿ ಆರಂಭದ ಕೆಲ ತಿಂಗಳವರೆಗೆ ವಿದ್ಯಾರ್ಥಿಗಳು ಸಾಲಾಗಿ ನಿಂತು ಸಾಮೂಹಿಕ ಪ್ರಾರ್ಥನೆ ನಡೆಸುವುದನ್ನು ನಿಷೇಧಿಸಲಾಗುತ್ತದೆ. ಜತೆಗೆ, ಶಾಲೆಗಳಲ್ಲಿ ಆಗಮನ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ವಿದ್ಯಾರ್ಥಿಗಳ ದಟ್ಟಣೆ ಉಂಟಾಗದಂತೆ ಪ್ರತಿ ಹಂತದಲ್ಲೂ ವ್ಯಕ್ತಿಗತ ಅಂತರವನ್ನು ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ. ಜತೆಗೆ, ಪಾಲಕರು ಶಾಲಾ ಆವರಣವನ್ನು ಪ್ರವೇಶಿಸುವಂತಿಲ್ಲ. ನಿಗದಿತ ಸ್ಥಳದಲ್ಲಿ ಮಕ್ಕಳನ್ನು ಬಿಟ್ಟು ಅಲ್ಲಿಂದಲೇ ತೆರಳಬೇಕು.
ಇದನ್ನೂ ಓದಿ;ಈ ವರ್ಷ ನರ್ಸರಿ ಸ್ಕೂಲ್​ ತೆರೆಯಲ್ವಾ…? ಆಡ್ಮಿಷನ್​ ಮಾಡಿಸ್ಬೇಕೋ ಬೇಡ್ವೋ?
ಮಾಸ್ಕ್​ ಧರಿಸುವುದು ಕಡ್ಡಾಯವಾಗಲಿದೆ. ವಿದ್ಯಾರ್ಥಿಗಳಿಗೆ ಅಲ್ಲಲ್ಲಿ ನೀರಿನ ವ್ಯವಸ್ಥೆ ಇದ್ದಂತೆ, ಈಗ ಸ್ಯಾನಿಟೈಜರ್​ ವ್ಯವಸ್ಥೆ ಇರಲಿದೆ. ವಿದ್ಯಾರ್ಥಿಗಳು ಪದೇಪದೆ ಸ್ಪರ್ಶಿಸುವ ಸ್ಥಳವನ್ನು ಆಗಾಗ ಸ್ವಚ್ಛಗೊಳಿಸಲಾಗುತ್ತದೆ.
ಇನ್ನೂ ಶಾಲೆ, ಕಾಲೇಜುಗಳಲ್ಲಿ ಕ್ಯಾಂಟೀನ್​ ಬಂದ್​ ಆಗಲಿದೆ. ವಿದ್ಯಾರ್ಥಿಗಳಿಗೆ ಮನೆಯಿಂದಲೇ ಊಟ ತರುವಂತೆ ತಿಳಿಸಲಾಗುತ್ತದೆ. ಜತೆಗೆ, ತರಗತಿಯಲ್ಲೇ ಊಟ ಮಾಡಬೇಕಾಗುತ್ತದೆ. ಊಟದ ವಿರಾಮದಲ್ಲಿ ಗುಂಪುಗುಂಪಾಗಿ ಸೇರುವುದು ಕೂಡ ನಿಷಿದ್ಧವಾಗಲಿದೆ.
ಇದನ್ನೂ ಓದಿ;ಭಾರತಕ್ಕೂ ಬಂದಿದೆ ‘ಬಾಳೆ ಕರೊನಾ’, ಫಾರಂ​ ಕ್ವಾರಂಟೈನ್​ವೊಂದೇ ಪರಿಹಾರ…!
ಸದ್ಯ ಸಾರ್ವಜನಿಕ ಸಾರಿಗೆಯಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಂಡು ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಈಗ ಶಾಲಾ ಬಸ್​ಗಳಲ್ಲೂ ಇದು ಅನಿವಾರ್ಯವಾಗಲಿದೆ. ಹೀಗಾಗಿ ಮಕ್ಕಳ ಸಾರಿಗೆ ವೆಚ್ಚ ದುಪ್ಪಟ್ಟಾದರೂ ಅಚ್ಚರಿ ಇಲ್ಲ.
ಮಕ್ಕಳ ಬಗ್ಗೆ ಇಷ್ಟೆಲ್ಲ ಕಾಳಜಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಮಕ್ಕಳಲ್ಲಿ ಕರೊನಾ ಕಂಡು ಬಂದಿರುವ ಪ್ರಮಾಣ ತೀರಾ ಕಡಿಮೆ. ದೊಡ್ಡವರಲ್ಲಿಯೇ ಹೆಚ್ಚು ಎಂಬುದನ್ನು ಅಂಕಿ-ಸಂಖ್ಯೆಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ.
ಚಿಕ್ಕವರಿಗಿಲ್ಲ ಇನ್ನೂ ಮೂರು ತಿಂಗಳು ಶಾಲೆ, ದೊಡ್ಡವರಿಗೆ ಪಾಳಿ ಪದ್ಧತಿ; ಕೇಂದ್ರ ಸಿದ್ಧಪಡಿಸುತ್ತಿದೆ ಪುನರಾರಂಭದ ಮಾರ್ಗಸೂಚಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 5 =
Remember me
