ನವದೆಹಲಿ:ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ದೆಹಲಿ ಅತ್ಯಾಚಾರ ಪ್ರಕರಣದ ಆರೋಪಿ ಮುಕೇಶ್​ ಸಿಂಗ್​ನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಹಾಗಂತ ನಿರ್ಭಯಾ ಅಪರಾಧಿಗಳನ್ನು ಜನವರಿ 22ರಂದು ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸಲು ಸಾಧ್ಯವಿಲ್ಲ. ಅರ್ಜಿ ಸಲ್ಲಿಸಿದಾಗಲೇ ನಾಲ್ವರು ಅಪರಾಧಿಗಳನ್ನು ನೇಣಿಗೇರಿಸುವ ದಿನಾಂಕ ಮುಂದೂಡಲ್ಪಟ್ಟಿತ್ತು. ಈಗ ರಾಷ್ಟ್ರಪತಿ ಅದನ್ನು ವಜಾಗೊಳಿಸಿದ್ದರೂ ಕೂಡ 14 ದಿನಗಳವರೆಗೆ ಅಪರಾಧಿಗಳನ್ನು ನೇಣಿಗೇರಿಸುವಂತಿಲ್ಲ.
ಈ ಮಧ್ಯೆ ಮುಕೇಶ್​ ಸಿಂಗ್​ ತಮ್ಮ ಮರಣದಂಡನೆ ಶಿಕ್ಷೆಯನ್ನು ಮರುಪರಿಶೀಲನೆ ಮಾಡುವಂತೆ ದೆಹಲಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾನೆ. ಅದನ್ನು ನಿನ್ನೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ.ಇನ್ನೂ 14 ದಿನಗಳ ಕಾಲದ ಕಾನೂನು ಪ್ರಕ್ರಿಯೆಗಳಿದ್ದ ಗಲ್ಲಿಗೇರಿಸುವ ಹೊಸ ದಿನಾಂಕ ಇನ್ನು ಮುಂದೆ ನಿರ್ಧಾರವಾಗಲಿದೆ.
ಈ ಮಧ್ಯೆ ಉಳಿದ ಅಪರಾಧಿಗಳಾದ ವಿನಯ್​ ಶರ್ಮಾ, ಅಕ್ಷಯ್​ ಠಾಕೂರ್​, ಪವನ್​ ಗುಪ್ತಾ ಇನ್ನೂ ಕ್ಷಮಾದಾನದ ಅರ್ಜಿ ಸಲ್ಲಿಸಿಲ್ಲ. ಅವರೂ ಕೂಡ ಯಾವ ಹಂತದಲ್ಲಾದರೂ ದಯಾ ಅರ್ಜಿ ಸಲ್ಲಿಸಬಹುದು. ಹಾಗಾದರೆ ಗಲ್ಲಿಗೇರಿಸುವ ದಿನಾಂಕ ಮತ್ತಷ್ಟು ಮುಂದೂಡಲ್ಪಡುತ್ತದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 12 =
Remember me
